ಶಾರುಖ್-ಸಲ್ಮಾನ್ ಜಗಳ: ಕತ್ರಿನಾ ಕೈಫ್ ಬಾಯ್ಬಿಟ್ಟ ಸತ್ಯ

ಬಾಲಿವುಡ್‌ನ ಅತಿ ದೊಡ್ಡ ಜಗಳವೆಂದರೆ ಅದು ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಡುವೆ ನಡೆದಿದ್ದ ಜಗಳ. ಈಗ ಈ ಇಬ್ಬರೂ ಖಾನ್ ದ್ವಯರು ಖಾಸಾ ಗೆಳೆಯರಾಗಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಒಬ್ಬರ ಮುಖ ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ.

Recommended Video

ತಾಯಿಯನ್ನು ಕಳೆದುಕೊಂಡ ಮಗುವಿನ ಸಹಾಯಕ್ಕೆ ನಿಂತ ಬಾಲಿವುಡ್ ಕಿಂಗ್ ಖಾನ್ | Shahrukh Khan| Bihar child

ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಇವರ ಜಗಳ ನಡೆದಿದ್ದು ಕತ್ರಿನಾ ಕೈಫ್ ಮನೆಯಲ್ಲಿ. ಕತ್ರಿನಾ ಕೈಫ್ ಹುಟ್ಟುಹಬ್ಬದ ದಿನ ನಡೆದ ಪಾರ್ಟಿಯಲ್ಲಿ.

ಆಗ ಕತ್ರಿನಾ ಕೈಫ್ ಹೋದಲ್ಲೆಲ್ಲಾ ಇದೇ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆಗ ಕತ್ರಿಕಾ ಕೈಫ್ ಸಲ್ಮಾನ್ ಖಾನ್ ಪ್ರೇಯಸಿ ಆಗಿದ್ದರು. ಆಗೇನೂ ತುಟಿ ಬಿಚ್ಚದಿದ್ದ ಕತ್ರಿನಾ ಈಗ ಆ ಘಟನೆ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳ

ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳ

2008ರಲ್ಲಿ ಕತ್ರಿನಾ ಕೈಫ್ ಹುಟ್ಟುಹಬ್ಬಕ್ಕೆ ಪಾರ್ಟಿ ಆಯೋಜಿಸಲಾಗಿತ್ತು. ಆಗ ಕತ್ರಿನಾ ಬಾಯ್‌ಫ್ರೆಂಡ್ ಆಗಿದ್ದ ಸಲ್ಮಾನ್ ಖಾನ್ ಪಾರ್ಟಿಯಲ್ಲಿದ್ದರು. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಸಹ ಪಾರ್ಟಿಗೆ ಬಂದರು. ಆಗ ಸಲ್ಮಾನ್ ಖಾನ್ ಹಾಗೂ ಶಾರುಖ್ ನಡುವೆ ತಮಾಷೆಗೆ ಪ್ರಾರಂಭವಾದ ಮಾತುಗಳು ವಿಕೋಪಕ್ಕೆ ತಿರುಗಿದ್ದವು.

ಗೇಲಿ ಮಾತಿನಿಂದ ಪ್ರಾರಂಭವಾದ ಜಗಳ

ಗೇಲಿ ಮಾತಿನಿಂದ ಪ್ರಾರಂಭವಾದ ಜಗಳ

ತನ್ನ ಸಿನಿಮಾವೊಂದ ಹಾಡೊಂದರಲ್ಲಿ ಕಾಣಿಸಿಕೊಳ್ಳುವಂತೆ ಸಲ್ಮಾನ್ ಖಾನ್ ಶಾರುಖ್ ಅನ್ನು ಕೇಳಿದ್ದರಂತೆ. ಆದರೆ ಅದಕ್ಕೆ ಆಗುವುದಿಲ್ಲ ಎಂದಿದ್ದರಂತೆ ಶಾರುಖ್. ಇದೇ ದ್ವೇಷ ಹೊಂದಿದ್ದ ಸಲ್ಮಾನ್ ಕುಡಿದ ಮತ್ತಿನಲ್ಲಿ ಶಾರುಖ್ ಬಗ್ಗೆ ಗೇಲಿ ಮಾಡಿದರಂತೆ. ಶಾರುಖ್ ಸಹ ಸಲ್ಮಾನ್ ಖಾನ್ ಬಗ್ಗೆ ಗೇಲಿ ಮಾಡುತ್ತಾ ಕತ್ರಿನಾ ಬಗ್ಗೆಯೂ ಕಮೆಂಟ್ ಹೊಡೆದಿದ್ದಾರೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತಂತೆ.

ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು

ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು

ಇಬ್ಬರೂ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಶಾರುಖ್ ಪತ್ನಿ ಗೌರಿ ಖಾನ್ ಹಾಗೂ ಸಲ್ಮಾನ್ ಪ್ರೇಯಸಿ ಕತ್ರಿನಾ ಕೈಪ್ ಅವರನ್ನು ತಡೆದರಂತೆ. ಈ ವಿಷಯವಾಗಿ ಮಾತನಾಡಿರುವ ಕತ್ರಿನಾ 'ಸಲ್ಮಾನ್ ಖಾನ್ ಅನ್ನು ನಿಯಂತ್ರಣದಲ್ಲಿ ಇರಿಸುವುದು ಅಸಾಧ್ಯದ ಕೆಲಸ' ಎಂದಿದ್ದಾರೆ.

ಆ ಜಗಳ ನನ್ನ ವಿಷಯವಾಗಿ ನಡೆದಿದ್ದಲ್ಲ: ಕತ್ರಿನಾ

ಆ ಜಗಳ ನನ್ನ ವಿಷಯವಾಗಿ ನಡೆದಿದ್ದಲ್ಲ: ಕತ್ರಿನಾ

'ಆ ಜಗಳ ನನ್ನ ಬಗ್ಗೆ ನಡೆದಿದ್ದಲ್ಲ, ಅದು ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರ ಖಾಸಗಿ ವಿಷಯಗಳ ಬಗ್ಗೆ ನಡೆದ ಜಗಳ, ನನಗೂ ಅದಕ್ಕೂ ಸಂಬಂಧವಿರಲಿಲ್ಲ. ಸಲ್ಮಾನ್ ಖಾನ್ ನಾನು ಹೇಳಿದಂತೆ ಕೇಳುತ್ತಿರಲಿಲ್ಲ. ಆತನ ಮೇಲೆ ನನಗೆ ಹಡಿತವಿರಲಿಲ್ಲ, ಆತನನ್ನು ನಿಯಂತ್ರಿಸುವುದು ಸಹ ನನಗೆ ಆಗುತ್ತಿರಲಿಲ್ಲ' ಎಂದು ಕತ್ರಿನಾ ಅಂದಿನ ಘಟನೆಯ ಬಗ್ಗೆ ಹೇಳಿದ್ದಾರೆ.

ಚಲ್ತೆ-ಚಲ್ತೆ ಸಿನಿಮಾ ಸೆಟ್‌ನಲ್ಲಿ ಜಗಳ

ಚಲ್ತೆ-ಚಲ್ತೆ ಸಿನಿಮಾ ಸೆಟ್‌ನಲ್ಲಿ ಜಗಳ

ಈ ಜಗಳಕ್ಕೂ ಮುನ್ನಾ ಒಮ್ಮೆ 'ಚಲ್ತೆ-ಚಲ್ತೆ' ಸಿನಿಮಾದ ಸೆಟ್‌ನಲ್ಲಿ ಸಹ ಶಾರುಖ್ ಖಾನ್ ಐಶ್ವರ್ಯಾ ರೈ ಮೇಲೆ ಕೂಗಾಡಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಶಾರುಖ್ ಖಾನ್ ಸಲ್ಮಾನ್ ಮೇಲೆ ಜಗಳ ಮಾಡಿದ್ದರು. ಆದರೆ ಕೊನೆಗೆ ಐಶ್ವರ್ಯಾ ರೈ ಅನ್ನು ಚಲ್ತೆ-ಚಲ್ತೆ ಸಿನಿಮಾದಿಂದ ತೆಗೆದು ಆ ಸ್ಥಾನಕ್ಕೆ ರಾಣಿ ಮುಖರ್ಜಿಯನ್ನು ಹಾಕಿಕೊಂಡರು. ಆ ಸಿನಿಮಾ ಸೂಪರ್ ಹಿಟ್ ಆಯಿತು.

More from Filmibeat

English summary
Actress Katrina Kaif talked about 2008 Salman Khan Sharukh Khan fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X