For Quick Alerts
  ALLOW NOTIFICATIONS  
  For Daily Alerts

  ಬಾಯ್‌ಫ್ರೆಂಡ್‌ ಬಳಿಕ ಕತ್ರಿನಾ ಕೈಫ್‌ಗೂ ಕೊರೊನಾ ಪಾಸಿಟಿವ್

  |

  ಕೊರೊನಾ ವೈರಸ್ ಸೋಂಕಿತ ಸೆಲೆಬ್ರಿಟಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದೀಗ, ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ಕೋವಿಡ್ ಸೋಂಕು ತಗುಲಿದೆ.

  ಈ ಕುರಿತು ಸ್ವತಃ ಕತ್ರಿನಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ''ಸೋಂಕು ದೃಢವಾಗುತ್ತಿದ್ದಂತೆ ಕ್ವಾರಂಟೈನ್‌ಗೆ ಒಳಪಟ್ಟಿದ್ದೇನೆ'' ಎಂದು ತಿಳಿಸಿದ್ದಾರೆ.

  ಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾ

  ''ನನಗೆ ಕೊರೊನಾ ಪಾಸಿಟಿವ್ ಬಂದಿದೆ. ತಕ್ಷಣ ಐಸೋಲೆಟ್ ಆಗಿದ್ದು, ಹೋಮ್ ಕ್ವಾರಂಟೈನ್‌ಗೆ ಒಳಪಟ್ಟಿದ್ದೇನೆ. ವೈದ್ಯರ ಸಲಹೆಯಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದೇನೆ. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಕೂಡಲೇ ಪರೀಕ್ಷೆಗೆ ಒಳಪಡಿ'' ಎಂದು ಪೋಸ್ಟ್ ಹಾಕಿದ್ದಾರೆ.

  ಇದಕ್ಕೂ ಮುಂಚೆ ಕತ್ರಿನಾ ಕೈಫ್ ಬಾಯ್‌ಫ್ರೆಂಡ್ ಎಂದು ಗುರುತಿಸಿಕೊಂಡಿರುವ ನಟ ವಿಕ್ಕಿ ಕೌಶಲ್‌ಗೂ ಕೊರೊನಾ ಪಾಸಿಟಿವ್ ಬಂದಿತ್ತು. ವಿಕ್ಕಿಗೆ ಸೋಂಕು ತಗುಲಿದ ನಂತರ ಕತ್ರಿನಾಗೂ ಸೋಂಕು ದೃಢವಾಗಿರುವುದು ಚರ್ಚೆಗೆ ಕಾರಣವಾಗಿದೆ.

  ವಿಕ್ಕಿ ಮತ್ತು ಕತ್ರಿನಾ ಇಬ್ಬರಿಗೂ ಕೋವಿಡ್ ತಗುಲಿರುವುದರ ಬಗ್ಗೆ ಟ್ರೋಲ್ ಸಹ ಆಗ್ತಿದೆ. ಇತ್ತೀಚಿಗಷ್ಟೆ ಕತ್ರಿನಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 'ಟೈಗರ್-3' ಸಿನಿಮಾದ ಸೆಟ್‌ನಲ್ಲಿದ್ದೇನೆ ಎಂದು ಫೋಟೋ ಹಂಚಿಕೊಂಡಿದ್ದರು. ಕತ್ರಿನಾ ಕೈಫ್‌ಗೆ ಕೊರೊನಾ ತಗುಲಿದ ಬಳಿಕ ಸಲ್ಮಾನ್ ಖಾನ್‌ಗೂ ಆತಂಕ ಹೆಚ್ಚಿದೆ.

  ಇನ್ನುಳಿದಂತೆ ಅಕ್ಷಯ್ ಕುಮಾರ್ ಜೊತೆ ನಟಿಸಿರುವ 'ಸೂರ್ಯವಂಶಿ' ಸಿನಿಮಾ ತೆರೆಗೆ ಬರಬೇಕಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ರಣ್ವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  ಕಾಲು ಲಕ್ಷದ ಮಾಸ್ಕ್ ಹಾಕಿರೋ ಸೆಲ್ಫೀ ಫೋಟೋ ಶೇರ್ ಮಾಡಿದ ನಟಿ ಕರೀನಾ ಕಪೂರ್ | Filmibeat Kannada

  ಕತ್ರಿನಾ ಅವರಿಗೂ ಮುಂಚೆ ನಟ ಅಕ್ಷಯ್ ಕುಮಾರ್, ಹಿರಿಯ ನಟ ಗೋವಿಂದ, 'ದಂಗಲ್' ಖ್ಯಾತಿಯ ಫಾತಿಮಾ, ಆಲಿಯಾ ಭಟ್‌, ಭೂಮಿ ಪಡ್ನೆಕರ್‌ಗೆ ಕೊರೊನಾ ತಗುಲಿದೆ.

  English summary
  After Vicky Kaushal tested positive for Covid 19 now Katrina Kaif also tested positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X