For Quick Alerts
  ALLOW NOTIFICATIONS  
  For Daily Alerts

  ತನ್ನ ಪ್ರೇಮ ಪುರಾಣ ಬಹಿರಂಗ ಪಡಿಸಿದ ಅನಿಲ್ ಕಪೂರ್ ಪುತ್ರನ ಮೇಲೆ ಕತ್ರಿನಾ ಕೈಫ್ ಅಸಮಾಧಾನ

  |

  ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ 'ಉರಿ' ಚಿತ್ರದ ಖ್ಯಾತಿಯ ನಟ ವಿಕ್ಕಿ ಕೌಶಲ್ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರ ಡೇಟಿಂಗ್ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಾಗುತ್ತಿದೆ. ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಈ ಜೋಡಿ ಆಗಾಗ ಪಾರ್ಟಿ, ಹಾಲಿಡೇ ಅಂತ ಎಂಜಾಯ್ ಮಾಡುತ್ತಿರುತ್ತಾರೆ. ಇಬ್ಬರ ಸಂಬಂಧ ಬಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದ್ದರೂ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

  ಆದರೆ ಇತ್ತೀಚಿಗೆ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಇಬ್ಬರ ಸಂಬಂಧವನ್ನು ಖಚಿತ ಪಡಿಸಿದ್ದರು. ತನ್ನ ಖಾಸಗಿ ವಿಚಾರವನ್ನು ಬೇರೊಬ್ಬರು ಬಹಿರಂಗ ಪಡಿಸಿದ ಬಗ್ಗೆ ಕತ್ರಿನಾ ಅಸಮಾಧಾನಗೊಂಡಿದ್ದಾರೆ ಎಂದು ಕತ್ರಿನಾ ಆಪ್ತರೊಬ್ಬರು ಬಹಿರಂಗ ಪಡಿಸಿದ್ದಾರೆ.

  ವಿಕ್ಕಿ ಕೌಶಲ್-ಕತ್ರಿನಾ ಸಂಬಂಧ ಖಚಿತಪಡಿಸಿದ ಸ್ಟಾರ್ ನಟನ ಪುತ್ರ ವಿಕ್ಕಿ ಕೌಶಲ್-ಕತ್ರಿನಾ ಸಂಬಂಧ ಖಚಿತಪಡಿಸಿದ ಸ್ಟಾರ್ ನಟನ ಪುತ್ರ

  'ಹರ್ಷವರ್ಧನ್ ಕಪೂರ್ ಅವರಿಗೆ ಚಾಟ್ ಶೋವೊಂದರಲ್ಲಿ ಕತ್ರಿನಾ ಪ್ರೀತಿಯ ವಿಚಾರವನ್ನು ಚರ್ಚೆ ಮಾಡುವ ಯಾವುದೇ ಹಕ್ಕು ಇರಲಿಲ್ಲ. ಅವಳಿಗೆ ಹರ್ಷವರ್ಧನ್ ಬಗ್ಗೆ ತಿಳಿದಿಲ್ಲ. ಒಂದು ವೇಳೆ ತಿಳಿದಿದ್ದರೂ ಬೇರೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮೊದಲು ಅವರ ಅನುಮತಿ ಪಡೆಯಬೇಕು. ಆದರೆ ಹರ್ಷವರ್ಧನ್ ಹಾಗೆ ಮಾಡಿಲ್ಲ' ಎಂದು ಹೇಳಿದ್ದಾರೆ.

  'ಕತ್ರಿನಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಜಾಗರೂಕರಾಗಿದ್ದಾರೆ. ತನ್ನ ಹಳೆಯ ಸಂಬಂಧದಿಂದ (ರಣಬೀರ್ ಜೊತೆಗಿನ ಸಂಬಂಧ) ಕತ್ರಿನಾ ತುಂಬಾ ಹರ್ಟ್ ಆಗಿದ್ದರು. ಹಾಗಾಗಿ ಪ್ರಸ್ತುತ ಸಂಬಂಧವನ್ನು ಗೌಪ್ಯವಾಗಿ ಮತ್ತು ಶಾಂತವಾಗಿಡಲು ಬಯಸುತ್ತಾರೆ' ಎಂದು ಹೇಳಿದ್ದಾರೆ.

  ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರಶನದಲ್ಲಿ ಹರ್ಷವರ್ಧನ್ ಕಪೂರ್, ಬಿಟೌನ್ ಲವ್‌ಬರ್ಡ್ಸ್ ಗಳ ಸಂಬಂಧದ ಬಗ್ಗೆ ಮಾತನಾಡಿದ್ದರು. 'ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಒಟ್ಟಿರುವುದು ನಿಜಾ, ಬಹುಶಃ ನನ್ನ ಹೇಳಿಕೆ ಅವರಿಗೆ ತೊಂದರೆ ಉಂಟು ಮಾಡುವುದು' ಎಂದಿದ್ದರು. ಇದೀಗ ಹರ್ಷವರ್ಧನ್ ವಿರುದ್ಧ ಕತ್ರಿನಾ ಬೇಸರ ವ್ಯಕ್ತಪಡಿಸಿದ್ದಾರೆ.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada

  ಇತ್ತೀಚಿಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಇಬ್ಬರೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದರು. ಸದ್ಯ ಲಾಕ್ ಡೌನ್ ಕಾರಣ ಸಿನಿಮಾ ಕೆಲಸಗಳು ಸ್ಥಗಿತವಾಗಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

  English summary
  Bollywood Actress Katrina Kaif upset after Harshvardhan Kapoor conforms her relationship with Vicky Kaushal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X