ಕತ್ರೀನಾ-ವಿಕ್ಕಿ ಮನೆ ಬಾಡಿಗೆ ಅಬ್ಬಾ..ಇಷ್ಟೊಂದು ದುಬಾರಿ!

ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನಡೆದಿದ್ದು ಎಲ್ಲರಿಗೂ ತಿಳಿದಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ರಾಯಲ್ ವೆಡ್ಡಿಂಗ್‌ಗೆ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ತಾರೆಯರು ಸಾಕ್ಷಿಯಾಗಿದ್ದರು.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ. ಮದುವೆ ಸಡಗರದ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಫೊಟೋಗಳು ವೈರಲ್ ಆಗಿದೆ. ಕತ್ರೀನಾ ಮತ್ತು ವಿಕ್ಕಿ ಕೌಶಲ್ ಜೋಡಿ ಈಗ ಎಲ್ಲೆಲ್ಲೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಲವ್ ಸ್ಟೋರಿ ಬಗ್ಗೆ, ಕೊಂಡುಕೊಂಡಿರೋ ಮನೆಯ ಬಗ್ಗೆ, ಮನೆಯ ವಿಳಾಸದ ಬಗ್ಗೆ ಸಾಕಷ್ಟು ಹುಡುಕಾಟವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.

ಸದ್ಯ ಇದೀಗ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮದುವೆ ಬಳಿಕ ಹನಿಮೂನ್ ಮುಗಿಸಿಕೊಂಡು ತಮ್ಮ ಹೊಸ ಮನೆಯಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೆ ಈ ಮನೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕೂಡ ತುಂಬಾ ಗ್ರ್ಯಾಂಡ್ ಆಗಿ ಆಚರಿಸಿಕೊಂಡ ಈ ಜೋಡಿ ಸಾಕಷ್ಟು ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಈ ಮನೆಯ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಲು ಮುಂದಾಗಿದ್ದಾರೆ. ಆಗ ಗೊತ್ತಾಗಿದ್ದೆ ಶಾಕಿಂಗ್ ಸುದ್ದಿ. ಅದೇ ಕತ್ರೀನಾ ವಿಕ್ಕಿ ಮನೆಯ ರೆಂಟ್ ವಿಚಾರ. ಅದೇನು ಅಂತ ಮುಂದೆ ಓದಿ.

ಕತ್ರಿನಾ-ವಿಕ್ಕಿ ಮನೆಯಲ್ಲಿದೆ ಸಾಕಷ್ಟು ವಿಶೇಷತೆ.

ಕತ್ರಿನಾ-ವಿಕ್ಕಿ ಮನೆಯಲ್ಲಿದೆ ಸಾಕಷ್ಟು ವಿಶೇಷತೆ.

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೂ ಅಲ್ಲದೇ, ಹೊಸ ಮನೆಗೂ ಪ್ರವೇಶ ಪಡೆದಿದ್ದಾರೆ. ಮುಂಬೈನ ಜುಹುವಿನಲ್ಲಿ ಕತ್ರೀನಾ-ವಿಕ್ಕಿ ಹೊಸ ಮನೆಯಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದು, ಹಲವು ಭಾರಿ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಕ್ರಿಸ್‌ಮಸ್ ಹಬ್ಬವನ್ನು ಹೊಸ ಮನೆಯಲ್ಲೇ ಆಚರಿಸಿದ್ದ ಈ ಜೋಡಿ ಸಂಭ್ರಮದ ಕ್ಷಣಗಳನ್ನು ಶೇರ್ ಮಾಡಿಕೊಂಡಿತ್ತು. ಇದಾದ ಬಳಿಕ ಅಭಿಮಾನಿಗಳಿಗೆ ಕತ್ರೀನಾ ವಿಕ್ಕಿ ಹೊಸ ಮನೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಗೂಗಲ್‌ನಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಗ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ತಿಳಿದು ಬಂದಿದೆ.

ಲಕ್ಷ ಲಕ್ಷ ಬೆಲೆ ಬಾಳುವ ವಸ್ತು ಇದೆ ಈ ಮನೆಯಲ್ಲಿ

ಲಕ್ಷ ಲಕ್ಷ ಬೆಲೆ ಬಾಳುವ ವಸ್ತು ಇದೆ ಈ ಮನೆಯಲ್ಲಿ

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಹೇಳಿ ಕೇಳಿ ಸ್ಟಾರ್ ಸೆಲೆಬ್ರೆಟಿಗಳು. ಮೊದಲಿನಿಂದಲು ಲಕ್ಷುರಿ ಲೈಫ್‌ ನಡೆಸಿಕೊಂಡು ಬಂದಿದ್ದ ಈ ಜೋಡಿ ಮನೆ ವಿಚಾರದಲ್ಲು ಅಷ್ಟೇ ದುಬಾರಿಯಾಗಿದೆ ಈ ಜೋಡಿ. ಅತಿ ಐಷಾರಾಮಿ ಕಟ್ಟಡವನ್ನು 60 ತಿಂಗಳ ಅವಧಿಗೆ ಅಂದರೆ 5 ವರ್ಷಗಳ ಅವಧಿಗೆ ವಿಕ್ಕಿ-ಕತ್ರೀನಾ ಬಾಡಿಗೆಗೆ ಪಡೆದಿದ್ದಾರೆ. ವಿಕ್ಕಿ ಕೌಶಲ್ ಪಾವತಿಸಿದ ಭದ್ರತಾ ಠೇವಣಿ ಸುಮಾರು 1.75 ಕೋಟಿ ರೂ. ಮತ್ತು ಆರಂಭಿಕ 36 ತಿಂಗಳ ಬಾಡಿಗೆ ತಿಂಗಳಿಗೆ ರೂ. 8 ಲಕ್ಷ. ಮುಂದಿನ 12 ತಿಂಗಳಿಗೆ ರೂ. 8.40 ಲಕ್ಷ ಮತ್ತು ಉಳಿದ 12 ತಿಂಗಳುಗಳಿಗೆ ರೂ. 8.82 ಲಕ್ಷ ಬಾಡಿಗೆಯನ್ನು ವಿಕ್ಕಿ ಕೌಶಲ್ ಪಾವತಿಸಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಂದಿದೆ.

ಕತ್ರಿನಾ ಮಾಂಗಲ್ಯ ಸೂತ್ರದ ವಿಶೇಷತೆ ಏನು ಗೊತ್ತಾ?

ಕತ್ರಿನಾ ಮಾಂಗಲ್ಯ ಸೂತ್ರದ ವಿಶೇಷತೆ ಏನು ಗೊತ್ತಾ?

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮದುವೆ ಆದ ನಂತ್ರದಲ್ಲಿ ಸಾಕಷ್ಟು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಮನೆ ವಿಚಾರದ ಬಳಿಕ ಸಧ್ಯ ಕತ್ರಿನಾ ಕೈಫ್ ತಮ್ಮ ವಿಶೇಷವಾದ ಮಾಂಗಲ್ಯ ಸೂತ್ರದ ಬಗ್ಗೆ ಸುದ್ದಿಯಾಗಿದ್ದಾರೆ. ಹೌದು ಕತ್ರೀನಾ ಕೈಪ್ ಧರಿಸಿರುವ ಮಾಂಗಲ್ಯ ಸೂತ್ರ ತುಂಬ ವಿಶೇಷತೆಯಿಂದ ಕೂಡಿದ್ದು, ಅಭಿಮಾನಿಗಳು ತಾಳಿ ಬಗ್ಗೆ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಕತ್ರೀನಾ ಅವರು ಧರಿಸಿರುವ ತಾಳಿಯು ವಿಭಿನ್ನವಾದ ಡಿಸೈನ್‌ನಿಂದ ಕೂಡಿದೆ. ಇದನ್ನು ಸ್ವತಃ ಕತ್ರೀನಾ ಇಷ್ಟ ಪಟ್ಟು ಮಾಡಿಸಿದ್ದು, ನಿಖರವಾಗಿ ಡಿಸೈನ್ ಹೀಗೆ ಇರಬೇಕು ಅಂತ ಹೇಳಿ ಮಾಡಿಸಿದ್ದಾರೆ.

ಮಾಂಗಲ್ಯಸೂತ್ರದ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ.

ಮಾಂಗಲ್ಯಸೂತ್ರದ ಬೆಲೆ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ.

ಕತ್ರೀನಾ ಕೈಫ್ ಧರಿಸಿರುವ ಈ ಮಂಗಳಸೂತ್ರ ವಿಶೇಷತೆ ಯಿಂದ ಕೂಡಿರೋದು ಮಾತ್ರವಲ್ಲ. ಇದರ ಬೆಲೆ ಲಕ್ಷ ಲಕ್ಷ ಇದೆ. ಚಿನ್ನದ ಗುಂಡು ಹಾಗೂ ಕರಿಮಣಿಗಳನ್ನು ಹೊಂದಿರುವ ಈ ಮಂಗಳಸೂತ್ರ ಸಬ್ಯಸಾಚಿಯ ಬೆಂಗಾಲ್ ಟೈಗರ್ ಕಲೆಕ್ಷನ್‌ನದ್ದು. ಎರಡು ಡ್ರಾಪ್ ಡೌನ್ ವಜ್ರಗಳು ಇರುವ ಮಾಂಗಲ್ಯ ಸರದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಈ ಮಾಂಗಲ್ಯ ಸರವನ್ದ್ನು ಧರಿಸಿಕೊಂಡು ಇತ್ತೀಚೆಗೆ ಕತ್ರೀನಾ ತನ್ನ ಹೊಸ ಮನೆಯಲ್ಲಿ ತೆಗೆಸಿಕೊಂಡಿದ್ದ ಫೊಟೋವನ್ನು ಶೇರ್ ಮಾಡಿಕೊಂಡಿದ್ದರು. ನೆಟ್ಟಿಗರು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

More from Filmibeat

English summary
bollywood actress katrina kaif mangal sutra cost rs 5 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X