ಅಂಬಾನಿ ಮಗನ ಮದುವೆ ಮನೆಯಿಂದ ನೇರವಾಗಿ ಮಂಗಳೂರಿನ ಕೊರಗಜ್ಜ ಸನ್ನಿಧಿಗೆ ನಟಿ ಕತ್ರೀನಾ

ತುಳುನಾಡಿನಲ್ಲಿ ಕೊರಗಜ್ಜನ ಬಗ್ಗೆ ಭಾರೀ ನಂಬಿಕೆಯಿದೆ. ಕೇಳಿದ್ದನ್ನು ಕರುಣಿಸುತ್ತಾನೆ ಎಂದು ನಂಬಿ ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಜುಲೈ 14 ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ನಡೆದ ಹರಕೆ ಕೋಲದಲ್ಲಿ ಬಾಲಿವುಡ್ ನಟ ನಟಿಯರು ಭಾಗವಹಿಸಿದ್ದು ವಿಶೇಷ.

ಸಿನಿಮಾ ತಾರೆಯರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಹೊಸದೇನಲ್ಲ. ಇತ್ತೀಚೆಗೆ ನಟ ರಕ್ಷಿತ್ ಶೆಟ್ಟಿ ಕೂಡ ಉಡುಪಿಯ ಬೈಲೂರಿನ ನೀಲಕಂಠ‌ ಬಬ್ಬು ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್ ನಟಿ ಕತ್ರೀನಾ ಕೈಫ್ ಸದ್ದಿಲ್ಲದೇ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಬ್ರಿಟೀಷ್-ಇಂಡಿಯನ್ ನಟಿ ಕತ್ರೀನಾ ಬಾಲಿವುಡ್ ನಟ ವಿಕ್ಕಿ ಕೌಶಲ್ ಮದುವೆಯಾಗಿ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ.

Katrina Kaif visits Swamy Koragajja Aadisthala Kuthar temple in Mangalore

ಮುಸ್ಲಿಂ ಸಮುದಾಯದ ಕತ್ರೀನಾ ಕೈಫ್, ಹಿಂದೂ ಸಮುದಾಯದ ವಿಕ್ಕಿ ಕೌಶಲ್ ಕೈ ಹಿಡಿದಿದ್ದಾರೆ. ಆದರೆ ಹಿಂದೂ, ಮುಸ್ಲಿಂ ಎರಡೂ ಧರ್ಮವನ್ನು ಆಚರಿಸುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ವಿಕ್ಕಿ ಹಾಗೂ ಕತ್ರೀನಾ ಭಾಗಿ ಆಗಿದ್ದರು. ಅಲ್ಲಿಂದ ನೇರವಾಗಿ ಕತ್ರೀನಾ ಕೊರಗಜ್ಜನ ಸನ್ನಿಧಿಗೆ ಆಗಮಿಸಿ ಕೋಲದಲ್ಲಿ ಭಾಗವಹಿಸಿದ್ದಾರೆ.

ಜುಲೈ 14ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ನಡೆದ ಹರಕೆ ಕೋಲದಲ್ಲಿ ಸಿನಿಮಾ ತಾರೆಯರು ಭಾಗಿ ಆಗಿದ್ದರು. ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ರಾತ್ರಿ ನಡೆದ ಕೋಲದಲ್ಲಿ ಪುರಷರಿಗಷ್ಟೇ ಅವಕಾಶ ಇದ್ದ ಕಾರಣ ಮಹಿಳೆಯರು ಹೊರ ಬಂದಿದ್ದಾರೆ. ಈ ವೇಳೆ ಕ್ಷೇತ್ರದ ಕಚೇರಿಯಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಮ್ಯಾಂಗ್ಲೋರ್ ಮೇರಿಜಾನ್ ಪೇಜ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ.

Katrina Kaif visits Swamy Koragajja Aadisthala Kuthar temple in Mangalore

ಕೊರಗಜ್ಜನ ಕ್ಷೇತ್ರದಲ್ಲಿ ಕ್ಯಾಮರಾ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಆದರೂ ಸೆಲೆಬ್ರಿಟಿಗಳು ಬಂದಾಗ ಕ್ಷೇತ್ರದ ದ್ವಾರದ ಮುಂಭಾಗ ಹಾಗೂ ಕಚೇರಿ ಒಳಗೆ ಇದಕ್ಕೆ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಬಾಲಿವುಡ್‌ ಹಲವರು ಆಗಮಿಸಿದ ಕಾರಣದಿಂದ ಯಾರಿಗೂ ಫೋಟೋ, ವೀಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ. ಆದರೂ ಕ್ಷೇತ್ರದಲ್ಲಿದ್ದ ಕತ್ರಿನಾ ಕೈಫ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಕರಾವಳಿ ಮೂಲದವರು. ಅವರ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಕೂಡ ಈ ಬಾರಿ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಇನ್ನು ಕತ್ರೀನಾ ಮುಂಬೈಗೆ ವಾಪಸ್ ಆಗಿದ್ದಾರೆ. ಆಕೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ನಾಳೆ (ಜುಲೈ 16) ಕತ್ರೀನಾ ಹುಟ್ಟುಹಬ್ಬ. ಅದಕ್ಕೂ ಮುನ್ನ ಕೊರಗಜ್ಜನ ಸನ್ನಿಧಾನಕ್ಕೆ ಬಂದು ಹೋಗಿದ್ದಾರೆ.

ಈ ವರ್ಷ ಕತ್ರೀನಾ ಕೈಫ್ ನಟಿಸಿದ 'ಮೆರಿ ಕ್ರಿಸ್‌ಮಸ್' ಸಿನಿಮಾ ಬಿಡುಗಡೆ ಆಗಿತ್ತು. ಬಳಿಕ ಮತ್ಯಾವುದೇ ಸಿನಿಮಾದಲ್ಲಿ ಆಕೆ ನಟಿಸಲಿಲ್ಲ. ಸದ್ಯ ಗಂಡ, ಮನೆ, ಸಂಸಾರ ಎಂದು ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Katrina Kaif seeks blessings from Swamy Koragajja;
Read more about: katrina kaif bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X