For Quick Alerts
  ALLOW NOTIFICATIONS  
  For Daily Alerts

  ಹತ್ತು ವರ್ಷಗಳ ಬಳಿಕ ಮತ್ತೆ ಬಿಕಿನಿ ತೊಟ್ಟ ಕತ್ರಿನಾ

  By ಉದಯರವಿ
  |

  ಇಷ್ಟು ವರ್ಷಗಳ ಕಾಲ ಬಿಕಿನಿಯಿಂದ ದೂರ ಉಳಿದಿದ್ದರು ಬಾಲಿವುಡ್ ತಾರೆ ಕತ್ರಿನಾ ಕೈಫ್. ಈಗ ಕಡೆಗೂ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಮತ್ತೆ ಬಿಕಿನಿಗೆ ಜೈ ಎಂದಿದ್ದಾರೆ. ಬಿಕಿನಿ ತೊಡಬಾರದು ಎಂದು ಮುಸ್ಲಿಂ ಸಂಘಟನೆಗಳೇನಾದರೂ ಫತ್ವಾ ಹೊರಡಿಸಿದ್ದವೋ ಏನೋ?

  ಅಮೀರ್ ಖಾನ್ ನಾಯಕ ನಟನಾಗಿರುವ 'ಧೂಮ್ 3' ಚಿತ್ರ ಹಲವಾರು ಕಾರಣಗಳಿಗೆ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿರುವ ಆಕರ್ಷಣೆಗಳು ಒಂದೆರಡಲ್ಲ. ವಿಜಯ್ ಕೃಷ್ಣ ಆಚಾರ್ಯ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಿರ್ಮಾಪಕರು ಆದಿತ್ಯ ಚೋಪ್ರಾ.

  ಈ ಚಿತ್ರದಲ್ಲಿನ ತಮ್ಮ ಬಳುಕುವ ಬಳ್ಳಿಯಂತಹ ಪಾತ್ರಕ್ಕಾಗಿ ಕತ್ರಿಕಾ ಕೈಫ್ 5 ಕೆ.ಜಿ ತೂಕವನ್ನೂ ಇಳಿಸಿಕೊಂಡಿದ್ದಾರೆ. ಬಿಕಿನಿಗೆ ತಮ್ಮ ದೇಹವನ್ನು ಒಗ್ಗಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವನ್ನೂ ತೆಗೆದುಕೊಂಡಿರುವುದು ಇನ್ನೊಂದು ಅಂಶ.

  ಧೂಮ್ 3 ಚಿತ್ರದ ಸ್ಯಾಟಲೈಟ್ ರೈಟ್ಸ್ ಈಗಾಗಲೆ ಸೋನಿ ಟಿವಿಗೆ ರು.75 ಕೋಟಿಗೆ ಬಿಕರಿಯಾಗಿದೆ. ಬಾಲಿವುಡ್ ಚಿತ್ರೋದ್ಯಮದಲ್ಲೇ ಇದೇ ದಾಖಲೆ. ಡಿಸೆಂಬರ್ 13, 2013ಕ್ಕೆ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳು ನಡೆದಿವೆ.

  ಚಿತ್ರದಲ್ಲಿ ಅಮೀರ್ ಖಾನ್ ಜೊತೆಗೆ ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಜಾಕಿ ಶ್ರಾಫ್ ಮುಂತಾದವರಿದ್ದಾರೆ. ಒಟ್ಟಾರೆಯಾಗಿ ಕತ್ರಿನಾ ಮತ್ತೆ ಬಿಕಿನಿ ತೊಟ್ಟಿದ್ದಾರೆ ಎಂದರೆ ಕಲಾರಸಿಕರು ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಲು ಸಾಧ್ಯವೆ?

  English summary
  Actress Katrina Kaif will be seen in Dhoom 3 movie in Bikini after 10 years. She has done a lot of hard work for this new look and lost 5 kgs in two months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X