For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್‌ ಅಭಿಮಾನಿಗಳಿಂದ ಹಾಲಿನಭಿಷೇಕ: ಮೂರ್ಖತನ ಎಂದ ನಟಿ

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ಸೋನು ಸೂದ್ ಮಾಡುತ್ತಿರುವ ಮಾನವೀಯ ಕಾರ್ಯದಿಂದಾಗಿ ಅವರಿಗೆ ಕೋಟ್ಯಂತರ ಅಭಿಮಾನಿಗಳು ದೇಶದಾದ್ಯಂತ ಹುಟ್ಟಿಕೊಂಡಿದ್ದಾರೆ.

  ಸೋನು ಸೂದ್ ಮಾಡಿರುವ ಮಾನವೀಯ ಕಾರ್ಯಗಳಿಗೆ ಮನಸೋತಿರುವ ಹಲವರು ತಮ್ಮ ಅಭಿಮಾನವನ್ನು ವಿವಿಧ ಮಾದರಿಯಲ್ಲಿ ಪ್ರಕಟಿಸಿದ್ದಾರೆ. ಕೆಲವರು ಮಕ್ಕಳಿಗೆ ಸೋನು ಸೂದ್ ಹೆಸರಿಟ್ಟಿದ್ದರೆ, ಕೆಲವರು ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಸೋನು ಸೂದ್‌ಗಾಗಿ ಗುಡಿಯನ್ನೇ ನಿರ್ಮಾಣ ಮಾಡಲಾಗಿದೆ.

  ಇತ್ತೀಚೆಗೆ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ಸೋನು ಸೂದ್‌ರ ದೊಡ್ಡ ಫ್ಲೆಕ್ಸ್‌ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಈ ಕಾರ್ಯ ನಟಿಯೊಬ್ಬರಿಗೆ ಸಿಟ್ಟು ತರಿಸಿದೆ.

  ಹಸಿವಿನಿಂದ ನರಳುತ್ತಿರುವಾಗ ಹಾಲಿನ ಅಭಿಷೇಕವೇ: ನಟಿ ಪ್ರಶ್ನೆ

  ಹಸಿವಿನಿಂದ ನರಳುತ್ತಿರುವಾಗ ಹಾಲಿನ ಅಭಿಷೇಕವೇ: ನಟಿ ಪ್ರಶ್ನೆ

  ಹಲವು ಹಿಂದಿ ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸಿರುವ ಕವಿತಾ ಕೌಶಿಕ್ ಅವರು ಸೋನು ಸೂದ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿರುವುದನ್ನು ಖಂಡಿಸಿದ್ದಾರೆ. 'ಜನರು ಹಸಿವಿನಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಅಭಿಷೇಕ ಮಾಡಿ ಹಾಲು ವ್ಯರ್ಥ ಮಾಡಿರುವುದು ಮೂರ್ಖತನ' ಎಂದಿದ್ದಾರೆ ಕವಿತಾ.

  ಸೋನು ಸೂದ್ ಸಹ ಇದನ್ನು ಇಷ್ಟಪಡಲಾರರು: ಕವಿತಾ

  ಸೋನು ಸೂದ್ ಸಹ ಇದನ್ನು ಇಷ್ಟಪಡಲಾರರು: ಕವಿತಾ

  'ನಾವು ಸೋನು ಸೂದ್ ಅವರನ್ನು ಅಪಾರವಾಗಿ ಪ್ರೀತಿಸುತ್ತೇವೆ. ಸೋನು ಸೂದ್ ಮಾಡಿರುವ ಕಾರ್ಯಕ್ಕೆ ದೇಶದ ಜನ ಅವರಿಗೆ ಜೀವನ ಪರ್ಯಂತ ಋಣಿಯಾಗಿರುತ್ತಾರೆ. ಆದರೆ ಸೋನು ಸೂದ್ ಫ್ಲೆಕ್ಸ್‌ ಮೇಲೆ ಹಾಕು ಸುರಿದಿರುವ ಈ ನಡೆ ಮೂರ್ಖತನದ್ದು, ಇದನ್ನು ಸ್ವತಃ ಸೋನು ಸೂದ್ ಸಹ ಇಷ್ಟಪಡುವುದಿಲ್ಲ' ಎಂದಿದ್ದಾರೆ.

  ವಿಡಿಯೋ ನೋಡಿ ಖುಷಿ ವ್ಯಕ್ತಪಡಿಸಿರುವ ಸೋನು ಸೂದ್

  ವಿಡಿಯೋ ನೋಡಿ ಖುಷಿ ವ್ಯಕ್ತಪಡಿಸಿರುವ ಸೋನು ಸೂದ್

  ಆದರೆ, ಆಂಧ್ರದ ಅಭಿಮಾನಿಗಳು ತಮ್ಮ ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿರುವ ವಿಡಿಯೋವನ್ನು ಸೋನು ಸೂದ್ ಸಹ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಪ್ರೀತಿಗೆ ವಿನಮ್ರನಾಗಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಸೋನು ಸೂದ್‌ರ ಪ್ರತಿಕ್ರಿಯೆಯನ್ನು ಮುಂದಾಗಿಟ್ಟುಕೊಂಡು ಹಲವರು ಕವಿತಾ ಕೌಶಿಕ್‌ ಅನ್ನು ಟ್ರೋಲ್ ಮಾಡಿದ್ದಾರೆ.

  ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada
  ಕೊರೊನಾ ಸಮಯದಲ್ಲಿ ಸೋನು ಸೂದ್ ಮಾನವೀಯ ಕಾರ್ಯ

  ಕೊರೊನಾ ಸಮಯದಲ್ಲಿ ಸೋನು ಸೂದ್ ಮಾನವೀಯ ಕಾರ್ಯ

  ಸೋನು ಸೂದ್ ಕೊರೊನಾ ಸಂಕಷ್ಟದ ಸಮಯದಲ್ಲಿ ದೊಡ್ಡ ಮಟ್ಟದ ಸಹಾಯವನ್ನು ಜನರಿಗೆ ಮಾಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಆರಂಭದ ಸಮಯದಲ್ಲಿ ಕಾರ್ಮಿಕರನ್ನು ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದ್ದ ಸೋನು ಸೂದ್, ಈ ಬಾರಿ ಆಮ್ಲಜನಕ ಸಿಲಿಂಡರ್ ವಿತರಣೆ, ಕೇರ್ ಸೆಂಟರ್ ಸ್ಥಾಪನೆ, ಆಮ್ಲಜನಕ ಸಾಂದ್ರಕಗಳ ವಿತರಣೆ, ಪ್ಲಾಸ್ಮಾ ದಾನಿಗಳನ್ನು ಒದಗಿಸುವುದು ಇನ್ನಿತರೆ ಕಾರ್ಯಗಳನ್ನು ಮಾಡುತ್ತಿದ್ದಾರೆ.

  English summary
  Actress Kavita Kaushik slams Sonu Sood fans who poured milk on Sonu Sood's flex. She said its foolish to waste milk like this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X