For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ಫೋಟೋ ಕಳುಹಿಸಿ ಕಿರುಕುಳ: ಫೋಟೋ ಶೇರ್ ಮಾಡಿ ದೂರು ದಾಖಲಿಸಿದ ನಟಿ

  |

  ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಫೋಟೋವನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ನಟಿ ಕವಿತಾ ಕೌಶಿಕ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಕೆಟ್ಟದ್ದು ಆಗುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಬಹುತೇಕ ಕಲಾವಿದರು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ.

  ಇದೀಗ ಹಿಂದಿ ಕಿರುತೆರೆ ನಟಿ ಕವಿತಾ ಕೌಶಿಕ್ ಗೂ ಸಮಸ್ಯೆ ಎದುರಾಗಿದೆ. ನಟಿ ಕವಿತಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಕ್ತಿಯೊಬ್ಬನ ಗಂಭೀರ ಆರೋಪ ಮಾಡಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಮುಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾಸಗಿ ಭಾಗದ ಫೋಟೋಗಳನ್ನು ಶೇರ್ ಮಾಡಿ ನಟಿ ಕವಿತಾಗೆ ಮುಜುಗರ ವುಂಟುಮಾಡುವಂತೆ ಮಾಡಿದ್ದೇನೆ.

  ಸಲ್ಮಾನ್ ಖಾನ್ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಸ್ಪರ್ಧಿಸಲ್ಮಾನ್ ಖಾನ್ ವಿರುದ್ಧವೇ ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಸ್ಪರ್ಧಿ

  ನಟಿ ಕವಿತಾ, ಆತನ ಫೋಟೋ ಮತ್ತು ಇನ್ಸ್ಟಾಗ್ರಾಮ್ ಪ್ರೊಫೈಲ್ ನ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮುಂಬೈ ಪೊಲೀಸ್, ಸೈಬರ್ ಸೆಲ್ ಗೆ ಟ್ಯಾಗ್ ಮಾಡಿ ಈ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕವಿತಾ, 'ಶಂಕರ್ ಎಂಬ ಈ ವ್ಯಕ್ತಿ ತನ್ನ ಖಾಸಗಿ ಭಾಗದ ಫೋಟೋಗಳನ್ನು ಸೆಲೆಬ್ರಿಟಿಗಳಿಗೆ ಕಳುಹಿಸುತ್ತಿದ್ದಾನೆ. ಸೆಲೆಬ್ರಿಟಿಗಳಿಗೆ ಹೀಗೆ ಮಾಡುವ ಈತ ಇನ್ನು ಸಾಮಾನ್ಯ ಹುಡುಗಿಯರಿಗೆ ಹೇಗೆ ಮಾಡಿರಬಹುದು ಎಂದು ಊಹಿಸಿಕೊಳ್ಳಿ. ಈತ ಎಲ್ಲಿದ್ದಾನೆ ಎಂದು ನೋಡಿ ಈತನ ಬಗ್ಗೆ ತಿಳಿಸಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

  ನಟಿ ಕವಿತಾ ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಎಫ್ ಐ ಆರ್ ಎನ್ನುವ ಸೀರಿಸ್ ಮೂಲಕ ಖ್ಯಾತಿಗಲಿಸಿದ ನಟಿ ಕವಿತಾ ಪಂಜಾಬಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಕವಿತಾ ಕೌಶಿಕಾ ಅವರನ್ನು ಮದುವೆಯಾಗಿರುವ ಕವಿತಾ ಮುಂಬೈನಲ್ಲಿ ನೆಲೆಸಿದ್ದಾರೆ.

  English summary
  Actress Kavitha Kaushit slams man who sends his Private parts photos to her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X