ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿಗೆ ಭಾಜನವಾದ ಕೇ ಕೇ ಮೆನನ್
ಒಮ್ಮೆಲೆ ಹಲವು ಭಾವ ತುಳುಕಿಸಬಲ್ಲ ನಟನೆಂದೇ ಖ್ಯಾತವಾಗಿರುವ ಕೇ ಕೇ ಮೆನನ್ ಗೆ ಪ್ರತಿಷ್ಠಿತ ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ದೊರೆತಿದೆ.
'ಮೋಸ್ಟ್ ವರ್ಸಟೈಲ್ ಆಕ್ಟರ್' ವಿಭಾಗದಲ್ಲಿ ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ಕೇ ಕೇ ಮೆನನ್ ಗೆ ದೊರೆತಿದ್ದು, ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಕಾಯ್ ಕಾಯ್.
ಕಳೆದ ಮೂರು ದಶಕದಿಂದಲೂ ಕೇ ಕೇ ಮೆನನ್ ಸಿನಿಮಾ ಉದ್ಯಮದಲ್ಲಿದ್ದು, ಹಲವು ನೆನಪಿನಲ್ಲುಳಿಯುವಂತಹಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ಸಮಿತಿಯು 'ವರ್ಸಟೈಲ್ ನಟ' ಪ್ರಶಸ್ತಿಯನ್ನು ಕೇ ಕೇ ಗೆ ಕೊಟ್ಟಿದ್ದಾರೆ.

ದಾದಾ ಸಾಹೆಬ್ ಪಾಲ್ಕೆ ಪ್ರಶಸ್ತಿ ವಿಜೇತರಿಗೆ ಪ್ರಧಾನಿ ಮೋದಿ ಅವರು ವಿಶೇಷ ಪತ್ರ ಕಳಿಸಿದ್ದಾರೆ. 'ದಾದಾ ಸಾಹೆಬ್ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಬಗ್ಗೆ ಕೇಳಿ ಸಂತಸವಾಯಿತು. ಈ ಪ್ರಶಸ್ತಿಯು ದಾದಾ ಸಾಹೆಬ್ ಪಾಲ್ಕೆ ಅವರ ಗೌರವನ್ನು ಸಾರಿ ಹೇಳುತ್ತದೆ. ದಾದಾ ಸಾಹೆಬ್ ಪಾಲ್ಕೆ ಅವರು ದೂರದೃಷ್ಟಿ ಉಳ್ಳಂಥಹವರಾಗಿದ್ದರು. ಭಾರತ ಸಿನಿಮಾ ಈ ಹಂತಕ್ಕೆ ತಲುಪಲು ಅವರೇ ಮೂಲ ಕಾರಣ' ಎಂದು ಪ್ರಧಾನಿಯವರು ಪತ್ರದಲ್ಲಿ ಹೇಳಿದ್ದಾರೆ.
'ಎಲ್ಲಾ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ಈ ಪ್ರಶಸ್ತಿಯು ಇನ್ನೂ ಉತ್ತಮ ಸಿನಿಮಾಗಳು ಮೂಡಿ ಬರಲು ಸ್ಪೂರ್ತಿಯಾಗಲಿ. ದಾದಾ ಸಾಹೆಬ್ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಹೆಚ್ಚಿನ ಯಶಸ್ಸು ಸಿಗಲಿ' ಎಂದು ಮೋದಿ ಶುಭ ಹಾರೈಸಿದ್ದಾರೆ.
ಇನ್ನು ಕೇ ಕೇ ಮೆನನ್ ಮೆನನ್, ಬಾಲಿವುಡ್‌ನಲ್ಲಿ 1995 ರಿಂದಲೂ ಕೆಲಸ ಮಾಡುತ್ತಿದ್ದಾರೆ. ಬ್ಲ್ಯಾಕ್ ಫ್ರೈಡೇ, ಲೈಫ್ ಇನ್ ಎ ಮೆಟ್ರೊ, ಅಂಕುರ್ ಅರೋರ ಮರ್ಡರ್ ಕೇಸ್, ಶಹೀದ್, ಹೈದರ್, ನಸೀಮ್, ಪಾಂಚ್ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











