For Quick Alerts
  ALLOW NOTIFICATIONS  
  For Daily Alerts

  ಒನ್ ಇಂಡಿಯಾಗೆ ಅಮಿತಾಬ್ ಬಚ್ಚನ್ ನೀಡಿದ ಸಂದರ್ಶನ

  By ಸೋನಿಕಾ ಮಿಶ್ರಾ
  |

  ಭಾರತೀಯ ಚಿತ್ರರಂಗ ಕಂಡ ಮೇರು ನಟ ಅಮಿತಾಬ್ ಬಚ್ಚನ್ ಬೆಳ್ಳಿ ತೆರೆಯಂತೆ ಟಿವಿ ಪರದೆಯಲ್ಲೂ ಮೋಡಿ ಮಾಡಿದವರು. ಇವರ ನಿರೂಪಣೆಯಲ್ಲಿ ಬರುತ್ತಿರುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದ ಏಳನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ.

  ಕೆಬಿಸಿ ಪಡೆದ ಜನಪ್ರಿಯತೆ ಮತ್ತು ಅಮಿತಾಬ್ ಅದನ್ನು ನಡೆಸಿಕೊಟ್ಟ ರೀತಿ ವ್ಯಾಪಕವಾಗಿ ಪ್ರಶಂಸೆಗೆ ಒಳಗಾದ ನಂತರ ಕನ್ನಡ ಸೇರಿ ಇತರ ಭಾಷೆಯಲ್ಲೂ ಈ ಕಾರ್ಯಕ್ರಮ ಪ್ರಸಾರಗೊಂಡು ಅಲ್ಲೂ ಜನಪ್ರಿಯತೆ ಪಡೆಯಿತು.

  ಈ ಬಾರಿಯ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದ ಏಳನೇ ಆವೃತ್ತಿ ಹಲವು ಹೊಸ ಪ್ರಯತ್ನ ಮತ್ತು ಬದಲಾವಣೆಗೆ ನಾಂದಿಯಾಗಲಿದೆ. ಇದೇ ಸೆಪ್ಟಂಬರ್ ಆರರಿಂದ ಈ ಕಾರ್ಯಕ್ರಮ ಆರಂಭವಾಗಲಿದೆ.

  ಒನ್ ಇಂಡಿಯಾ ಸಂಸ್ಥೆಯ ಮುಂಬೈ ಸಿನಿ ವರದಿಗಾರ್ತಿ ಸೋನಿಕಾ ಮಿಶ್ರಾಗೆ ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

  ಪ್ರ: ಕೆಬಿಸಿ ಮೊದಲನೇ ಆವೃತ್ತಿಯಿಂದ ಏಳನೇ ಆವೃತ್ತಿಯ ವರೆಗೆ ನೀವು ಕಂಡ ಬದಲಾವಣೆಗಳೇನು?
  ಬಚ್ಚನ್: (ನಗುತ್ತಾ) ಕೆಬಿಸಿಯಲ್ಲಿ ನಾವು ಬದಲಿಸದೇ ಇರಲು ಆಗದ್ದು, ಪ್ರಶ್ನೆಗೆ ಸರಿಯಾದ ಉತ್ತರ ನೀಡು, ಇಲ್ಲವಾದಲ್ಲಿ ಸ್ಪರ್ಧೆಯಿಂದ ನಿರ್ಗಮಿಸು. ಸರಿಯಾದ ಉತ್ತರ ನಿಮ್ಮನ್ನು ಮುಂದಿನ ಪ್ರಶ್ನೆಗೆ ಕೊಂಡೊಯ್ಯುತ್ತದೆ. ಇದನ್ನು ನಾವು ಬದಲಿಸಲು ಆಗುವುದಿಲ್ಲ. ಈ ಬಾರಿಯ ಕೆಬಿಸಿ ಸೆಟ್ ನಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನ ಸ್ಟುಡಿಯೋದಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಸೋನಿ ಟಿವಿ ಮತ್ತು ನನ್ನ ನಿರೂಪಣೆಯಲ್ಲಾಗುವ ಕೆಲವು ಬದಲಾವಣೆಗಳಿಗೆ ಪ್ರೇಕ್ಷಕರು ಬೆನ್ನು ತಟ್ಟುತ್ತಾರೆ ಎನ್ನುವ ನಂಬಿಕೆಯಲ್ಲಿದ್ದೇನೆ.

  ಪ್ರ: ಕೆಬಿಸಿ ಎನ್ನುವ ರಿಯಾಲಿಟಿ ಶೋ ಅಮಿತಾಬ್ ನಡೆಸಿಕೊಟ್ಟಿದ್ದರಿಂದ ಭಾರೀ ಜನಪ್ರಿಯತೆ ಪಡೆಯಿತು. ಈ ಬಗ್ಗೆ ನಿಮ್ಮ ಅಭಿಪ್ರಾಯ?
  ಬಚ್ಚನ್: ನಾನು ಆತ್ಮ ಸಾಕ್ಷಿಯಾಗಿ ವಿರುದ್ದವಾಗಿ ಎಂದೂ ನಡೆದುಕೊಂಡವನಲ್ಲ. ಕೆಬಿಸಿ ಎನ್ನುವ ಶೋ ನನಗೆ ಜನಪ್ರಿಯತೆ ತಂದು ಕೊಟ್ಟಿತು. ಇದು ನಾನು ನಂಬಿರುವ ಸತ್ಯ. ಕೆಬಿಸಿ ಜನರ ಜೊತೆ ಬೆರೆತು ನಡೆಸಿಕೊಂಡು ಹೋಗುವ ಕಾರ್ಯಕ್ರಮವಾಗಿರುವುದರಿಂದ ಜನರಿಗೆ ಬಹು ಬೇಗನೆ ಈ ಶೋ ಹತ್ತಿರವಾಗಿದೆ ಎನ್ನುವುದು ನಂಬಿಕೆ.

  ಕೆಬಿಸಿಯ ಹೊಸ ನಿಯಮಗಳೇನು? ಸ್ಲೈಡಿನಲ್ಲಿ

  ಒನ್ ಇಂಡಿಯಾದ ಜೊತೆ ಬಚ್ಚನ್ ಸಾಬ್

  ಒನ್ ಇಂಡಿಯಾದ ಜೊತೆ ಬಚ್ಚನ್ ಸಾಬ್

  ಪ್ರ: ನಿಮಗೆ ಎಂದಾದರೂ ಹಾಟ್ ಸೀಟಿನಲ್ಲಿ ಕೂರ ಬೇಕೆನ್ನುವ ಆಸೆ ಬಂದಿತ್ತಾ?
  ಬಚ್ಚನ್: ನಾನೇ ಕಾರ್ಯಕ್ರಮದ ನಿರೂಪಕನ ಸೀಟಿನಲ್ಲಿ ಕೂತಿರುವುದರಿಂದ, ಹಾಟ್ ಸೀಟಿನ ಸ್ಪರ್ಧಿಯಾಗ ಬೇಕೆನ್ನುವ ಆಸೆ ನನಗೆ ಇದುವರೆಗೆ ಬಂದಿಲ್ಲ. ಕಾರ್ಯಕ್ರಮಕ್ಕೆ ಸಂಬಂಧ ಪಡುವ ನಿರೂಪಣಾ ಶೈಲಿಯ ಬದಲಾವಣೆ ಬಗ್ಗೆ ಯೋಚಿಸುತ್ತೇನೆ ಹೊರತು ಹಾಟ್ ಸೀಟಿನ ಬಗ್ಗೆ ಯೋಚಿಸಿದಿಲ್ಲ.

  ಒನ್ ಇಂಡಿಯಾಗೆ ಅಮಿತಾಬ್ ನೀಡಿದ ಸಂದರ್ಶನ

  ಒನ್ ಇಂಡಿಯಾಗೆ ಅಮಿತಾಬ್ ನೀಡಿದ ಸಂದರ್ಶನ

  ಪ್ರ: ಈ ಬಾರಿಯ ಕೆಬಿಸಿ ಏಳನೇ ಆವೃತ್ತಿಯಲ್ಲಿ ಹೊಸ ಬದಲಾವಣೆ ಏನಾದರೂ ಇದೆಯಾ?
  ಬಚ್ಚನ್: Yes, ಈ ಬಾರಿಯ ಕೆಬಿಸಿಯಲ್ಲಿ ಹಲವು ಹೊಸ ಬದಲಾವಣೆಗಳಿರುತ್ತವೆ. ಮೊದಲನೆಯದಾಗಿ ಪ್ರಶಸ್ತಿ ಮೊತ್ತ ಬರೋಬ್ಬರಿ ಏಳು ಕೋಟಿ ರೂಪಾಯಿ. ಲೈಫ್ ಲೈನ್ ಈ ಬಾರಿಯ ಆವೃತ್ತಿಯಲ್ಲಿ ಐದು ಇರಲಿದೆ. ಹಾಟ್ ಸೀಟ್ ಹೋಗಲು ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಇನ್ನು ಮುಂದೆ ಒಂದರ ಬದಲು ಮೂರು ಪ್ರಶ್ನೆಗೆ ಉತ್ತರಿಸ ಬೇಕಾಗುತ್ತದೆ.

  ಅಮಿತಾಬ್ ಜೊತೆ ನಮ್ಮ ವರದಿಗಾರ್ತಿ

  ಅಮಿತಾಬ್ ಜೊತೆ ನಮ್ಮ ವರದಿಗಾರ್ತಿ

  ಪ್ರ: ಈ ಬಾರಿಯ ಕೆಬಿಸಿಯ ಟ್ಯಾಗ್ ಲೈನ್ 'ಸೀಕ್ನಾ ಬಂದ್ ತೋ ಜೀತ್ನಾ ಬಂದ್'. ನಿಮ್ಮ ಜೀವನದಲ್ಲಿ ನೀವು ಕಲಿತ ಪಾಠದ ಬಗ್ಗೆ ನಮ್ಮ ಜೊತೆ ಹಂಚಿಕೊಳ್ಳುವ ವಿಷಯ ಏನಾದರೂ ಇದೆಯಾ?
  ಬಚ್ಚನ್: ಜೀವನ ಎನ್ನುವುದು ನಿಮಗೆ ಬೇಡ ಎನಿಸಿದರೂ ಏನಾದರೂ ಪಾಠ ಕಲಿಸುತ್ತಲೇ ಇರುತ್ತದೆ. ಜೀವನ ಒಂದು ರೀತಿಯಲ್ಲಿ ಶಾಲೆಯಿದ್ದಂತೆ. ವೈಯಕ್ತಿಕ ಮತ್ತು ನನ್ನ ವೃತ್ತಿ ಜೀವನದಲ್ಲಿ ಪ್ರತಿ ದಿನ ನಾನು ಹೊಸ ಹೊಸ ಪಾಠ ಕಲಿಯುತ್ತೇನೆ. ಇದು ನನ್ನೊಬ್ಬನ ಜೀವನದಲ್ಲಿ ಅಲ್ಲ, ಎಲ್ಲರ ಬದುಕಲ್ಲೂ ಜೀವನ ಎನ್ನುವುದು ಹೊಸ ಪಾಠ, ಶಾಲೆಯಿದ್ದಂತೆ.

  ಕೆಬಿಸಿ ಏಳನೇ ಆವೃತ್ತಿ

  ಕೆಬಿಸಿ ಏಳನೇ ಆವೃತ್ತಿ

  ಪ್ರ; ಸಿನಿಮಾ ರಂಗದಲ್ಲಿ ಯುವ ಪ್ರತಿಭೆಗಳು ಭಾರೀ ಸದ್ದು ಮಾಡುತ್ತಿದ್ದಾರೆ, ಈ ಬಗ್ಗೆ ನಿಮ್ಮ ಅನಿಸಿಕೆ?
  ಬಚ್ಚನ್: ಯುವ ಪ್ರತಿಭೆಗಳು ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಬಂದಿರುತ್ತಾರೆ. ಈಗಿನ ಕಲಾವಿದರಲ್ಲಿ ವೃತ್ತಿ ಪ್ರಬುದ್ದತೆಯನ್ನು ನಾವು ಕಾಣಬಹುದು. ನನ್ನಂತ ಹಿರಿಯ ನಟರು ಕೂಡಾ ಅವರ ಜೊತೆ ಶೂಟಿಂಗ್ ನಲ್ಲಿರ ಬೇಕಾದರೆ ಹೊಸ ವಿಷಯವನ್ನು ಕಲಿತಿರುತ್ತೇವೆ. ಒಟ್ಟಾರೆ ಚಿತ್ರರಂಗದ ಮಟ್ಟಿಗೆ ಇದೊಂದು ಉತ್ತಮ ಬೆಳವಣಿಗೆ.

  ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್

  ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್

  ಪ್ರ: ಕೆಬಿಸಿ ಸ್ಪರ್ಧೆಗೆ ಬರುವವರು ಹಾಟ್ ಸೀಟಿನಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಭೇಟಿ ಮಾಡಲು ಹೆಚ್ಚು ಉತ್ಸುಕರಾಗಿರುತ್ತಾರಲ್ಲವೇ?
  ಬಚ್ಚನ್: ನನ್ನನ್ನು ಭೇಟಿ ಮಾಡಲು ಬರುವ ಕೆಲವರಿಗಾದರೂ ಕೆಬಿಸಿಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿದೆಯಲ್ಲಾ, ಏನಾದರೂ ಮೊತ್ತ ಗೆದ್ದು ಹೋಗಬಹುದಲ್ಲಾ ಎನ್ನುವುದು ಸಂತಸದ ವಿಚಾರ. ಈ ಶೋ ಮೂಲಕ ಜನರ ಜೊತೆ ಮತ್ತಷ್ಟು ಬೆರೆಯ ಬಹುದು ಎನ್ನುವುದು ನನಾಗುವ ವೈಯಕ್ತಿಕ ಸಂತೋಷ.

  English summary
  Most popular TV reality show KBC 7 starting on Sep 6th. Amitabh Bachchan is hosting the show, there is some changes in this big show. What are all the changes - read Amitabh Bachchan interview to Oneindia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X