ತೆಲುಗು, ತಮಿಳು, ಮಲಯಾಳಂ ನಂತರ 'ಕನ್ನಡ'ದ ವಿಚಾರ ಬಂದಾಗ ಕೀರ್ತಿ ಸುರೇಶ್, ವರುಣ್ ಧವನ್ ಹೇಳಿದ್ದೇನು..?
ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ
ಆದರೆ ಇದನ್ನು ಅರಿಯದ ಕೆಲವು ಉತ್ತರ ಭಾರತದ ಕ್ರೀಮಿಗಳು ಕನ್ನಡಿಗರನ್ನು ಕೆಣುಕುತ್ತಾನೇ ಬರುತ್ತಿದ್ದಾರೆ. ತುತ್ತು ಅನ್ನದ ಹುಡುಕಾಟದಲ್ಲಿ ಅದೆಲ್ಲಿಂದಲೋ ಇಲ್ಲಿ ಬಂದು ಕನ್ನಡ ಮತ್ತು ಕರುನಾಡನ್ನು ಜರಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ನಿಯತ್ತು ಎಂತಹದ್ದು ಎನ್ನುವುದನ್ನೂ ತೋರಿಸುತ್ತಿದ್ದಾರೆ.ಅದರಲ್ಲಿಯೂ ಈ ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬಂದ ನಂತರ ನಮ್ಮ ನೆಲಕ್ಕೆ ವಲಸೆ ಬರುವವರ ಆಟಾಟೋಪ ಹೆಚ್ಚಾಗಿದೆ. ಇದರ ನಡುವೆ ಕೀರ್ತಿ ಸುರೇಶ್ ಕನ್ನಡದ ಭಾಷೆಯ ಕುರಿತು ಮಾತನಾಡಿರುವ ಮಾತು ಸದ್ಯಕ್ಕೆ ಅನೇಕರ ಹೃದಯವನ್ನು ಗೆಲ್ಲುತ್ತಿದೆ.

ಹೌದು, ಅಸಲಿಗೆ ಕೀರ್ತಿ ಸುರೇಶ್ ಮತ್ತು ವರುಣ್ ಧವನ್ ಅಭಿನಯದ ಬೇಬಿ ಜಾನ್ ಚಿತ್ರ ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ಚಿತ್ರದ ಕುರಿತು ಪ್ರಚಾರವನ್ನು ಮಾಡುತ್ತಿರುವ ಚಿತ್ರತಂಡ ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಕೀರ್ತಿ ಸುರೇಶ್ ಮತ್ತು ವರುಣ್ ಧವನ್ ನಡುವೆ ನಡೆದ ಚಿಕ್ಕ ಸಂಭಾಷಣೆಯನ್ನು ತೇಲಿ ಬಿಟ್ಟಿದೆ.ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ಈ ವಿಡಿಯೋದಲ್ಲಿ ವರುಣ್ ಧವನ್ ಅವರಿಗೆ ಕೀರ್ತಿ ಸುರೇಶ್ ದಕ್ಷಿಣ ಭಾರತದ ಭಾಷೆಗಳನ್ನು ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ತೆಲುಗು-ಮಲಯಾಳಂ ಮತ್ತು ತಮಿಳಿನಲ್ಲಿ ಐ ಲವ್ ಯು ಎಂದು ಹೇಳುವುದು ಹೇಗೆ ಎನ್ನುವುದನ್ನು ಕಲಿಸಿದ್ದಾರೆ. ಮೂರು ಭಾಷೆಯಲ್ಲಿ ವರುಣ್ ಧವನ್ ಐ ಲವ್ ಯು ಎಂದು ಹೇಳಲು ತಡವರಿಸಿದಾರೆ ಎನ್ನುವುದು ಬೇರೆ ವಿಚಾರವಾದರೂ ಇದೇ ಸಮಯದಲ್ಲಿ ವರುಣ್ ಧವನ್ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಕೀರ್ತಿ ಸುರೇಶ್ ನನಗೂ ಕೂಡ ಕನ್ನಡ ಬರುವುದಿಲ್ಲ ಎಂದಿದ್ದು ವರುಣ್ ಧವನ್ ಆ ನಂತರ ಕನ್ನಡ ಕಲಿಯುವ ಇಂಗಿತ ವ್ಯಕ್ತಪಡಿಸುತ್ತಾರೆ. ಕನ್ನಡ ಕಲಿತು ಐ ಲವ್ ಯುನ ಕನ್ನಡದಲ್ಲಿ ಹೇಳುವುದಾಗಿ ಹೇಳಿದ್ದಾರೆ. ಕೀರ್ತಿ ಸುರೇಶ್ ಕೂಡ ನಾನು ಕನ್ನಡ ಕಲಿಯುವುದಾಗಿ ಭರವಸೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಕನ್ನಡ ಭಾಷೆಯ ಮೇಲಿರುವ ಅಭಿಮಾನ ಅನೇಕರ ಹೃದಯವನ್ನು ಗೆಲ್ಲುತ್ತಿದೆ. ವಿಡಿಯೋಗೆ ಹಲವಾರು ಅಭಿಪ್ರಾಯಗಳು ಕನ್ನಡಿಗರಿಂದ ವ್ಯಕ್ತವಾಗುತ್ತಿವೆ.
ಅಂದ್ಹಾಗೇ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಂದರೆ ನಾಳೆ ತೆರೆಗೆ ಬರಲಿದೆ. ಇನ್ನು ಬೇಬಿ ಜಾನ್ ಕೀರ್ತಿ ಸುರೇಶ್ ಅಭಿನಯದ ಮೊದಲ ಸಿನಿಮಾ. ಈ ಹಿನ್ನೆಲೆ ಕೊಂಚ ನರ್ವಸ್ ಆಗಿರುವ ಕೀರ್ತಿ ಸುರೇಶ್ ಚಿತ್ರದ ಗೆಲುವಿಗಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ್ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದ್ಧಾರೆ. ಇನ್ನುಳಿದಂತೆ ಬೇಬಿ ಜಾನ್ ತಮಿಳಿನಲ್ಲಿ ವಿಜಯ್ ಮತ್ತು ಸಮಂತಾ ಅಭಿನಯದ ಥೇರಿ ಚಿತ್ರದ ರಿಮೇಕ್ ಆಗಿದ್ದು ಜ್ಯೋತಿ ದೇಶಪಾಂಡೆ ಅವರ ಜೊತೆ ಸೇರಿ ತಮಿಳಿನ ಸ್ಟಾರ್ ಡೈರೆಕ್ಟರ್ ಆಟ್ಲೀ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾಲೀಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಾಕಿಶ್ರಾಫ್, ವಮೀಕಾ ಗಬ್ಬಿ ಸೇರಿ ಅನೇಕರು ಬೇಬಿ ಜಾನ್ ಚಿತ್ರದಲ್ಲಿದ್ದಾರೆ.


Click it and Unblock the Notifications











