ಡೈರೆಕ್ಟರ್ 'ಕಟ್' ಹೇಳಿದರು ಕೂಡ ಆ ವ್ಯಕ್ತಿ ನನ್ನನ್ನು 'ಕಿಸ್' ಮಾಡುತ್ತಲೇ ಇದ್ದ, ಶಾಕಿಂಗ್ ವಿಚಾರ ಹೇಳಿದ ನಟಿ..!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ.. ಕಿರುಕುಳ.. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲ ಇಂಡಸ್ಟ್ರಿಯಲ್ಲೂ ಇದೂ ಕಾಮನ್ನೂ ಕೂಡ. ಇನ್ನು ಮೀಟೂ ಅಭಿಯಾನದ ಸ್ಟ್ರಾಂಗ್ ಆದ ಮೇಲಂತೂ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತು ಪರಿಚಯವಾಗಿದೆ. ಸದ್ಯ ಬಾಲಿವುಡ್‌ನಲ್ಲಿ ತಮ್ಮ ಅಭಿನಯದಿಂದ ಎಲ್ಲರ ಮನ ಗೆದ್ದ ಸಯಾನಿ ಗುಪ್ತಾ ತಮ್ಮ ಜೊತೆ ಆದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಹನಟ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಹೇಳಿದ್ದಾರೆ.

ಹೌದು. ರೇಡಿಯೋ ನಶಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಯಾನಿ ಗುಪ್ತಾ, ಚಿತ್ರವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಆ ವ್ಯಕ್ತಿ ನಿರ್ದೇಶಕರು ಕಟ್ ಹೇಳಿದ ನಂತರ ಕೂಡ ನನ್ನನ್ನು ಚುಂಬಿಸುತ್ತಲೇ ಇದ್ದ ಎಂದು ಹೇಳಿದ್ದಾರೆ. ಆ ನಟನ ಮತ್ತು ಆ ಚಿತ್ರದ ಹೆಸರನ್ನು ಬಹಿರಂಗಗೊಳಿಸದ ಸಯಾಮಿ ಈ ತರಹದ ಘಟನೆಗಳಿಂದ ಚಿತ್ರರಂಗದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತೆ ಎಂದಿದ್ದಾರೆ. ವೃತ್ತಿಯ ಹೆಸರಿನಲ್ಲಿ ಕೆಲವರು ಹೇಗೆಲ್ಲ ಮಹಿಳೆಯರ ದುರ್ಬಳಕೆಯನ್ನು ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಕೂಡ ನನ್ನ ಜೊತೆ ನಡೆದ ಈ ಪ್ರಕರಣ ಅತ್ಯುತ್ತಮ ಉದಾಹರಣೆ ಎಂದು ಸಯಾನಿ ಹೇಳಿದ್ದಾರೆ.
ಇನ್ನೂ ತಮ್ಮ 'ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್ ಸರಣಿ ಭಾಗ ಒಂದರ ಅನುಭವವನ್ನು ಕೂಡ ಹಂಚಿಕೊಂಡಿರುವ ಸಯಾನಿ, ಆ ಚಿತ್ರದ ಸನ್ನಿವೇಶವೊಂದಕ್ಕೆ ನಾನು ಕಡಲ ಕಿನಾರೆಯಲ್ಲಿ ಹೋಗಿ ಮಲಗಬೇಕಿತ್ತು. ಅಲ್ಲಿ ಸುಮಾರು 70 ಜನ ಸ್ಥಳದಲ್ಲಿ ಇದ್ದರು. ಆದರೂ ಕೂಡ ನಾನು ಆ ಸನ್ನಿವೇಶದಲ್ಲಿ ಭಾಗಿಯಾದೆ. ಆ ಸನ್ನಿವೇಶ ಮುಕ್ತಾಯವಾದ ನಂತರ ನಾನು ಯಾರಾದರೂ ಬಂದು ಶಾಲು ಕೊಡ್ತಾರೆ ಎಂದು ಕಾಯುತ್ತಿದ್ದೆ. ಆದರೆ ದುರ್ದೈವ. ಅಲ್ಲಿದ್ದ ಎಲ್ಲರೂ ನನ್ನನ್ನೇ ನೋಡುತ್ತಿದ್ದರೇ ಹೊರತು ಬಂದು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಮಹಿಳೆಯರ ಸುರಕ್ಷತೆಯ ಬಗ್ಗೆ ನನಗೆ ಆತಂಕವಾಗುತ್ತೆ ಎಂದು ಹೇಳಿದ್ಧಾರೆ. ಚಿತ್ರರಂಗದಲ್ಲಿ ಮಹಿಳೆಯರ ರಕ್ಷಣೆಗೆ ಆದ್ಯತೆಯನ್ನು ಕೊಡಬೇಕಿದೆ. ಚಿತ್ರರಂಗದಲ್ಲಿರುವ ಕೆಲವರ ಮನಸ್ಥಿತಿ ಬದಲಾಗಬೇಕಿದೆ ಎಂದು ಕೂಡ ಸಯಾನಿ ಗುಪ್ತಾ ಹೇಳಿದ್ದಾರೆ.
ಅಂದ್ಹಾಗೇ ಸಯಾನಿ ಗುಪ್ತಾ ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಬಾಲಿವುಡ್‌ನಲ್ಲಿ ಹನ್ನೆರಡು ವರ್ಷಗಳನ್ನು ಪೂರೈಸಿರುವ ಸಯಾಮಿ ಇಲ್ಲಿಯವರೆಗೆ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಜಾಲಿ ಎಲ್.ಎಲ್.ಬಿ 2, ಪಾರ್ಚಡ್, ಜಗ್ಗಾ ಜಾಸೂಸ್, ಆರ್ಟಿಕಲ್ 15, ಮಾರ್ಗರಿಟಾ ವಿತ್ ಎ ಸ್ಟ್ರಾ, ಪ್ರಮುಖವಾದವು. ಇನ್ನೂ ಕೇವಲ ನಟಿಯಾಗಿ ಅಷ್ಟೇ ಅಲ್ಲ ಗಾಯಕಿಯಾಗಿ ಕೂಡ ಸಯಾನಿ ಗುಪ್ತಾ ಗುರುತಿಸಿಕೊಂಡಿದ್ದಾರೆ. ಇನ್‌ಸೈಡ್ ಎಡ್ಜ್ ಸೇರಿ ಹಲವು ವೆಬ್ ಸರಣಿಗಳಲ್ಲಿ ಕೂಡ ಸಯಾನಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.


Click it and Unblock the Notifications











