For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾಗೆ ನ್ಯಾಯಾಲಯದ ನೊಟೀಸ್

  |

  ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾಗೆ ಕೇರಳ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

  ವಿರಾಟ್ ಕೊಹ್ಲಿ ತಮನ್ನಾ ಇಬ್ಬರನ್ನು ಬಂಧಿಸಿ | Filmibeat Kannada

  ಆನ್‌ಲೈನ್ ಗೇಮ್‌ಗಳ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ ಜೊತೆಗೆ ಮಲಯಾಳಂ ನಟ ಅಜು ವರ್ಗೀಸ್‌ ಗೆ ಸಹ ನೊಟೀಸ್ ನೀಡಿದೆ. ಆರೋಪದ ಬಗ್ಗೆ ಉತ್ತರ ನೀಡುವಂತೆ ಕೇರಳ ಹೈಕೋರ್ಟ್‌ ಸೂಚಿಸಿದೆ.

  ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ, ಅಜು ವರ್ಗೀಸ್ ಅವರುಗಳು ಆನ್‌ಲೈನ್‌ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಜೂಜಿಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಿತಾಸಕ್ತಿ ಅರ್ಜಿಯೊಂದು ಕೇರಳ ಹೈಕೋರ್ಟ್‌ನಲ್ಲಿ ದಾಖಾಗಿತ್ತು.

  ಕೇರಳ ಕ್ರೀಡಾ ಕಾಯ್ದೆ ಪ್ರಕಾರ ರಮ್ಮಿ ಆಟ ಕಾನೂನು ಬಾಹಿರ. ಹಾಗಾಗಿ ಆನ್‌ಲೈನ್ ರಮ್ಮಿ ಆಟಕ್ಕೆ ಪ್ರಚಾರ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಲಿ ವರ್ಗಿಸ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆದು ಇದೀಗ ನೊಟೀಸ್ ಜಾರಿ ಮಾಡಲಾಗಿದೆ.

  ಆನ್‌ಲೈನ್ ರಮ್ಮಿ ಸೇರಿದಂತೆ ಹಲವು ಆನ್‌ಲೈನ್ ಜೂಜು ಸೈಟ್‌ಗಳು, ಆಪ್‌ಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ಜೂಜನ್ನು ನಿಷೇಧಿಸಲಾಗಿದೆ. ಕೆಲವರು ರಾಜ್ಯಗಳಲ್ಲಿ ಇದಕ್ಕೆ ಅಂಕೆ ಇಲ್ಲ. ಕನ್ನಡದ ನಟ ಸುದೀಪ್ ಸಹ ಆನ್‌ಲೈನ್ ರಮ್ಮಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kerala high court issue notice to Virat Kohli and Tamannaah Bhatia and Malayalam actor Aju related to promoting online gambling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X