ಅಕ್ಷಯ್ ಕುಮಾರ್ 'ಕೇಸರಿ' ಟ್ರೈಲರ್ ನಲ್ಲಿ ಇದು ನೆಚ್ಚಿನ ದೃಶ್ಯ
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ನೈಜ ಕಥೆಗಳಿಗೆ ನಾನೇ ದಿ ಬೆಸ್ಟ್ ಎಂದು ಮತ್ತೊಮ್ಮೆ ಅಕ್ಷಯ್ ಕುಮಾರ್ ತೋರಿಸಲು ಹೊರಟಂತಿದೆ ಈ ಟ್ರೈಲರ್.
1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿರುವ ಕೇಸರಿ ಸಿನಿಮಾ ಅತ್ಯಂತ ರೋಚಕವಾಗಿ ಮೂಡಿಬಂದಿದೆ ಎಂಬುದಕ್ಕೆ ಈ ಟ್ರೈಲರ್ ಅತ್ಯುತ್ತಮ ನಿರ್ದೇಶನ. ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು ಭಯಾನಕವಾಗಿತ್ತು ಎಂಬುದನ್ನ ಇತಿಹಾಸದಲ್ಲಿ ಕೇಳಿದ್ವಿ ಅಷ್ಟೇ.

ಆದ್ರೆ, ಅಂತಹ ಮಹಾನ್ ಕಥೆಯನ್ನ ತೆರೆಮೇಲೆ ತಂದು ಆ ನೈಜತೆಯನ್ನ ಈಗಿನ ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ. ಬರಿ ಟ್ರೈಲರ್ ನೋಡಿದ್ರೆನೇ ವಾಹ್ ಎನ್ನುವಂತಹ ದೃಶ್ಯಕಾವ್ಯ ಕೇಸರಿ ಚಿತ್ರದಲ್ಲಿ ಕಾಣುತ್ತಿದೆ.
ಕೇಸರಿ ಟ್ರೈಲರ್ ನಲ್ಲಿರುವ ಬಹುತೇಕ ದೃಶ್ಯಗಳು ಮೈನವಿರೇಳಿಸುಂತಿದೆ. ಅದರಲ್ಲೂ ಟ್ರೈಲರ್ ಕೊನೆಯಲ್ಲಿ ಅಕ್ಷಯ್ ಕುಮಾರ್ ತನ್ನ ಕೈಯಲ್ಲಿದ್ದ ಕತ್ತಿಯನ್ನ ಎದುರಾಳಿ ಎದೆಗೆ ನುಗ್ಗಿಸಿ ಹೊರತೆಗೆಯುವ ದೃಶ್ಯ ಸೂಪರ್, ಚಿಂದಿ ಆಗಿದೆ.

ಹವಿಲ್ದಾರ್ ಇಷಾರ್ ಸಿಂಗ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಅಕ್ಷಯ್ ಜೊತೆ ಪರಿಣಿತಿ ಚೋಪ್ರಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಸದ್ಯ ಕೇಸರಿ ಟ್ರೈಲರ್ ಯೂಟ್ಯುಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದು, 24 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
'ಕೇಸರಿ' ಚಿತ್ರವನ್ನ ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್ 21ರಂದು ಜಗತ್ತಿನಾದ್ಯಂತೆ ತೆರೆಕಾಣಲಿದೆ.


Click it and Unblock the Notifications











