KGF 2: ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ನ 3ನೇ ಸಿನಿಮಾ: ಹಿಂದಿಕ್ಕಿದ ಸಿನಿಮಾಗಳೆಷ್ಟು?

2022 ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಹಿಂದಿಯ ಗಳಿಕೆಯಲ್ಲಿ.

'ಕೆಜಿಎಫ್ 2' ಉತ್ತರ ಭಾರತದಲ್ಲಿ ಅಬ್ಬರಿಸುತ್ತಿದೆ. ಚಿತ್ರ ರಿಲೀಸ್‌ಗೂ ಮುನ್ನ ಇದ್ದ ನಿರೀಕ್ಷೆಯನ್ನೂ ಮೀರಿ ದಾಖಲೆ ಮಾಡುತ್ತಿದೆ. ದಾಖಲೆಗಳನ್ನು ಮುರಿದು, ನಿರೀಕ್ಷೆಗಳನ್ನು ಮೀರಿ ಮುನ್ನುತ್ತಿದೆ 'ಕೆಜಿಎಫ್ 2'. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ.

ಆಮಿರ್ ಖಾನ್, ಸಲ್ಮನ್ ಖಾನ್, ಶಾರುಖ್ ಖಾನ್ ಯಾವ ಖಾನ್‌ಗಳು, ಕಪೂರ್‌ಗಳು ಇಲ್ಲ. ಈಗ ಏನಿದ್ದರೂ ರಾಕಿ ಭಾಯ್ ಹವಾ. ಬಾಲಿವುಡ್‌ನಲ್ಲಿ ಈಗ 'ಕೆಜಿಎಫ್' ಚಿತ್ರವೇ ನಂಬರ್‌ 1 ಆಗಿ ಬಿಟ್ಟಿದೆ. 'ಕೆಜಿಎಫ್ 2' ಗಳಿಕೆ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ಗೆ ಶಾಕ್ ಕೊಟ್ಟಿದೆ.

Recommended Video

KGF 2 Collection | KGF2 ಖಜಾನೆಗೆ ಶೀಘ್ರದಲ್ಲಿಯೇ 1000 ಕೋಟಿ | Yash | Prashanth Neel | Srinidhi Shetty
ಹಿಂದಿಯಲ್ಲಿ 'ಕೆಜಿಎಫ್ 2' ಗಳಿಕೆ 343 ಕೋಟಿ

ಹಿಂದಿಯಲ್ಲಿ 'ಕೆಜಿಎಫ್ 2' ಗಳಿಕೆ 343 ಕೋಟಿ

'ಕೆಜಿಎಫ್ 2' ಚಿತ್ರದ ಅಬ್ಬರ ನಿಲ್ಲುತ್ತಿಲ್ಲ. ಚಿತ್ರ ರಿಲೀಸ್ ಆಗಿ ಎರಡು ವಾರ ಆದರೂ ಚಿತ್ರದ ಕಲೆಕ್ಷನ್ ಮಾತ್ರ ನೆಲಕಚ್ಚಿಲ್ಲ. ಅದರಲ್ಲೂ ಹಿಂದಿಯಲ್ಲಿ ಭರ್ಜರಿ ದಾಖಲೆಯನ್ನು ಮುಂದುವರೆಸಿದೆ. ಎರಡನೇ ವಾರಕ್ಕೆ ಹಿಂದಿಯಲ್ಲಿ ದಾಖಲೆ ಬರೆದ ದೊಡ್ಡ ದೊಡ್ಡ ಚಿತ್ರಗಳನ್ನು 'ಕೆಜಿಎಫ್ 2' ಸಿನಿಮಾ ಹಿಂದಿಕ್ಕಿದೆ. ಬಾಲಿವುಡ್ ಬೆರಗಾಗುವಂತಹ ದಾಖಲೆ ಮಾಡಿದ 'ಕೆಜಿಎಫ್ 2' ಈಗ ಹಿಂದಿಯಲ್ಲೇ 343.13 ಕೋಟಿ ಗಳಿಕೆ ಮಾಡಿದೆ.

2 ವಾರಕ್ಕೆ ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ!

2 ವಾರಕ್ಕೆ ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ!

'ಕೆಜಿಎಫ್ 2'ನೋಡ, ನೋಡುತ್ತಿದ್ದಂತೆಯೇ ದಾಖಲೆಯ ಸುರಿಮಳೆ ಸುರಿಸುತ್ತಿದೆ. ಅದರಲ್ಲೂ ಹಿಂದಿ ಮಂದಿಗೆ 'ಕೆಜಿಎಫ್ 2' ದೊಡ್ಡ ಶಾಕ್ ಕೊಟ್ಟಿದೆ. ಚಿತ್ರ ರಿಲೀಸ್ ಆಗಿ ಎರಡನೇ ವಾರಕ್ಕೆ 343.13 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಇದು ಹಿಂದಿಯಲ್ಲಿ ಅತಿ ವೇಗವಾಗಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಈ ಬಗ್ಗೆ ಟ್ರೇಡ್ ವಿಶ್ಲೇಷಕ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

'ಟೈಗರ್ ಜಿಂದಾ ಹೈ', 'ಪಿಕೆ', 'ಸಂಜು' ದಾಖಲೆ ಧೂಳಿಪಟ!

'ಟೈಗರ್ ಜಿಂದಾ ಹೈ', 'ಪಿಕೆ', 'ಸಂಜು' ದಾಖಲೆ ಧೂಳಿಪಟ!

ಕನ್ನಡದ 'ಕೆಜಿಎಫ್ 2' ಚಿತ್ರ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದ್ದೇ ಆಗಿದ್ದು, ಅಲ್ಲಿನ ದಾಖಲೆಗಳನ್ನು ಮುರುತ್ತಾ ಇದೆ. ಈಗ ಹಿಂದಿಯ ದೊಡ್ಡ ಚಿತ್ರಗಳ ಒಟ್ಟಾರೆ ದಾಖಲೆಯನ್ನು ಮುರಿದಿದೆ. ಹಿಂದಿಯ 'ಟೈಗರ್ ಜಿಂದಾ ಹೈ', 'ಸಂಜು' ಮತ್ತು 'ಪಿಕೆ' ಚಿತ್ರಗಳ ದಾಖಲೆಯನ್ನು ಮುರಿದ 'ಕೆಜಿಎಫ್ 2', ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಎನ್ನುವ ಖ್ಯಾತಿ ಪಡೆದಿದೆ.

ಮೊದಲ ದಿನವೇ 53 ಕೋಟಿ ಗಳಿಸಿ ದಾಖಲೆ!

ಮೊದಲ ದಿನವೇ 53 ಕೋಟಿ ಗಳಿಸಿ ದಾಖಲೆ!

ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳು ಮಾಡಿದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಮಾಡಿದ ಖ್ಯಾತಿ 'ಕೆಜಿಎಫ್ 2' ಚಿತ್ರಕ್ಕಿದೆ. ಹಿಂದಿಯಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಅಂದರೆ ಅದು ಟೈಗರ್‌ ಶ್ರಾಫ್, ಹೃತಿಕ್ ರೋಷನ್ ಅಭಿನಯದ 'ವಾರ್'. ಈ ಚಿತ್ರ 51.60 ಕೋಟಿ ಓಪನಿಂಗ್ ಪಡೆದುಕೊಂಡು ದಾಖಲೆ ಬರೆದಿತ್ತು. ಆದರೆ ಈಗ 'ಕೆಜಿಎಫ್ 2', 53.95 ಕೋಟಿ ಗಳಿಕೆ ಮಾಡಿ 'ವಾರ್' ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಮೂಲಕ 'ಕೆಜಿಎಫ್ 2' ನಂಬರ್ 1 ಆಗಿದೆ.

More from Filmibeat

English summary
KGF 2 3rd Highst Grossing Hindi Film, KGF 2 Cross TigerZinda Hai, PK and Sanju Lifetime biz, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X