For Quick Alerts
  ALLOW NOTIFICATIONS  
  For Daily Alerts

  ನನ್ನ ಸ್ವಂತ ಸಹೋದರನ ಜೊತೆ ಸಂಬಂಧ ಕಲ್ಲಿಸಿದ್ದರು: ನಿದ್ದೆ ಮಾಡಲಾಗಿದೆ ಅತ್ತಿದ್ದೇನೆ ಎಂದ ರವೀನಾ ಟಂಡನ್

  |

  ಮಸ್ತ್ ಮಸ್ತ್ ಗರ್ಲ್ ಅಂತಾನೇ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ರವೀನಾ ಟಂಡನ್. ಇತ್ತೀಚೆಗೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ರಾಕಿಂಗ್ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾದಲ್ಲಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ಈ ಬಾಲಿವುಡ್ ನಟಿ ತನ್ನ ಹಳೆಯ ದಿನ ದಿನಗಳನ್ನು ಮತ್ತೆ ನೆನೆಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

  ರವೀನಾ ಟಂಡನ್ ಸಿನಿಮಾ ಹಿನ್ನೆಲೆಯಿಂದ ಬಾಲಿವುಡ್ ಎಂಟ್ರಿ ಕೊಟ್ಟಿದ್ದರೂ, ಅಲ್ಲಿ ನೆಲೆಯೂರಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಒಂದೊಂದು ಅವಕಾಶವನ್ನೂ ತನ್ನ ಪ್ರತಿಭೆಯಿಂದಲೇ ಪಡೆದುಕೊಂಡಿದ್ದಾರೆ. ಆದರೆ, ನಟಿಯಾಗಿ ಹಂತ ಹಂತವಾಗಿ ಉತ್ತುಂಗಕ್ಕೆ ಏರುವ ವೇಳೆ ಏನೆಲ್ಲಾ ಕಷ್ಟಗಳು ಎದುರಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ಅದೆಷ್ಟೋ ರಾತ್ರಿಗಳನ್ನು ನಿದ್ದೆನೇ ಇಲ್ಲದೆ ಕಳೆದಿದ್ದೇನೆ ಎಂದು ಹೇಳಿದ್ದಾರೆ.

  ಸಹೋದರನ ಜೊತೆ ಸಂಬಂಧ ಕಲ್ಪಿಸಿದ್ದರು

  ಸಹೋದರನ ಜೊತೆ ಸಂಬಂಧ ಕಲ್ಪಿಸಿದ್ದರು

  ಆಗತಾನೇ ರವೀನಾ ಟಂಡನ್ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದರು. ಒಂದೊಂದೇ ಸಿನಮಾ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಾಣುತ್ತಿತ್ತು. ಈ ವೇಳೆ ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳು ರವೀನಾ ಟಂಡನ್ ವೈಯುಕ್ತಿಕ ಜೀವನದ ಮೇಲೆ ಸುದ್ದಿಗಳನ್ನು ಮಾಡುತ್ತಿದ್ದವು. ರವೀನಾ ಬಾಯ್‌ಫ್ರೆಂಡ್ ಮೇಲೆ ಕಣ್ಣಿಟ್ಟಿದ್ದ ಟ್ಯಾಬ್ಲಾಯ್ಡ್‌ಗಳು ಇವರ ಸ್ವಂತ ಸಹೋದರನ ಮೇಲೆ ಸಂಬಂಧ ಕಲ್ಲಿಸಿದ್ದವು. " ಅವರು ಸ್ವಂತ ನನ್ನ ಸಹೋದರನೊಂದಿಗೆ ಸಂಬಂಧ ಕಲ್ಪಿಸಿದ್ದರು. ಸುಂದರವಾದ, ಬೆಳ್ಳಗಿರುವ ಹುಡುಗನೊಬ್ಬ ರವೀನಾ ಟಂಡನ್‌ ಅನ್ನು ಡ್ರಾಪ್ ಮಾಡುತ್ತಿದ್ದಾನೆ. ನಾವು ರವೀನಾ ಬಾಯ್‌ಫ್ರೆಂಡ್ ಅನ್ನು ಹುಡುಕಿದ್ದೇವೆ." ಎಂದು ಟ್ಯಾಬ್ಲಾಡ್ ಬರೆದಿದ್ದವು ಎಂದು ಫಿಲ್ಮ್ ಕಂಪಾನಿಯನ್‌ ಜೊತೆ ರವೀನಾ ಮಾಹಿತಿ ಹಂಚಿಕೊಂಡಿದ್ದಾರೆ.

  ನಿದ್ದೆನೇ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ

  ನಿದ್ದೆನೇ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ

  ರವೀನಾ ಟಂಡನ್ ಚಿತ್ರರಂಗದವರೊಂದಿಗೆ ಹಾಗೂ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇದನ್ನೇ ಟ್ಯಾಬ್ಲಾಯ್ಡ್‌ಗಳು ತಪ್ಪಾಗಿ ಭಾವಿಸಿದ್ದವು. ಈ ವೇಳೆ ತನ್ನ ಸ್ವಂತ ಸಹೋದರನ್ನೊಂದಿಗೆ ಸಂಬಂಧ ಕಲ್ಪಿಸಿ ಬರೆಯಲಾಗಿತ್ತು. ಆ ವೇಳೆ ಅದೆಷ್ಟೋ ಕಣ್ಣೀರು ಹಾಕಿದ್ದೇನೆ. ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ಎಂದಿದ್ದಾರೆ. " ನಾನು ಅದೆಷ್ಟೋ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿರುವುದು ನೆನಪಿದೆ. ಅದೆಷ್ಟೋ ನಿದ್ದೇ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನಿದ್ದೆ ಮಾಡಲೆಂದೇ ಅತ್ತಿದ್ದೇನೆ. ಪತ್ರಿ ತಿಂಗಳೂ ನಾನು ಭಯಪಟ್ಟಿದ್ದೇನೆ. ಗಾಸಿಪ್ ಟ್ಯಾಬ್ಲಾಯ್ಡ್ ನನ್ನನ್ನು ಛಿದ್ರ ಮಾಡಿತ್ತು. ನನ್ನ ಗೌರವ, ನನ್ನ ವಿಶ್ವಾಸಾರ್ಹತೆ, ನನ್ನ ಪೋಷಕರನ್ನು ಚೂರು ಚೂರು ಮಾಡಿತ್ತು. ಆಗ ನನಗೆ ಇದೆಲ್ಲಾ ಯಾಕೆ? ಎಂದು ಅನಿಸುತ್ತಿತ್ತು." ಎಂದು ರವೀನಾ ಟಂಡನ್ ಹೇಳಿದ್ದಾರೆ.

  ಬೆಂಬಲಕ್ಕೆ ನಿಂತಿದ್ದು ನಟ ಗೋವಿಂದ

  ಬೆಂಬಲಕ್ಕೆ ನಿಂತಿದ್ದು ನಟ ಗೋವಿಂದ

  ರವೀ‍ನಾ ಟಂಡನ್ ಕಷ್ಟದ ದಿನಗಳಲ್ಲಿ ಬಾಲಿವುಡ್ ನಟ ಗೋವಿಂದ ಬೆಂಬಲಕ್ಕೆ ನಿಂತಿದ್ದನ್ನು ನೆನಪಿಸಿಕೊಂಡಿದ್ದಾರೆ. ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡುವಾಗ ಅಘಾತಕಾರಿ ಸುದ್ದಿಯೊಂದು ರವೀನಾಗೆ ತಲುಪಿತ್ತು. ಆ ವೇಳೆ ರವೀನಾಗೆ ಬಾಲಿವುಡ್ ನಟ ಗೋವಿಂದಾ ಸಮಾಧಾನ ಮಾಡಿದ್ದರು." ನನಗೆ ಇನ್ನೂ ನೆನಪಿದೆ, ನಾವು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡುವಾಗ, ನನ್ನ ವೈಯುಕ್ತಿಕ ಬದುಕಿನಲ್ಲಿ ಏನೋ ನಡೆಯುತ್ತಿತ್ತು. ಆಗ ನಾನು ಗೋವಿಂದ ಪಕ್ಕದಲ್ಲಿ ಕುಳಿತಿದ್ದೆ. ಈ ವೇಳೆ ಅವರು ಸುದ್ದಿಯನ್ನು ಬ್ರೇಕ್ ಮಾಡಿದ್ದರು. ಆ ವೇಳೆ ನಾನು ಸೈಲೆಂಟಾಗಿ ಇದ್ದಿದ್ದನ್ನು ನೋಡಿ, ಅವರು ನನ್ನ ಕೈ ಹಿಡಿದು ಪಕ್ಕದಲ್ಲಿಯೇ ಕೂತಿದ್ದರು. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದ್ದರು." ಎಂದು ರವೀನಾ ರಿವೀಲ್ ಮಾಡಿದ್ದಾರೆ.

   'ಕೆಜಿಎಫ್ 2' ಚಿತ್ರದಲ್ಲಿ ರವೀನಾ ಪ್ರಧಾನಿ

  'ಕೆಜಿಎಫ್ 2' ಚಿತ್ರದಲ್ಲಿ ರವೀನಾ ಪ್ರಧಾನಿ

  ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ 'ಕೆಜಿಎಫ್ 2' ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಟಂಡನ್ ಪ್ರಧಾನ ಮಂತ್ರಿ ರಮಿಕಾ ಸೇನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 14ರಂದು 'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಲಿದೆ.

  English summary
  KGF 2 actress Raveena Tondon linked with her own brother by a gossip tabloid. They linked me with my own brother, I cried, had sleepless nights', reveals bollywood actress Raveena Tandon.
  Thursday, January 6, 2022, 11:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X