ಉರಿ ಚಿತ್ರದ ಹೆಸರಿನಲ್ಲಿರುವ ಈ ಬೃಹತ್ ದಾಖಲೆಯನ್ನು ಬಾಹುಬಲಿ, ಕೆಜಿಎಫ್, ಪಠಾಣ್ ಕೂಡ ಮಾಡಿಲ್ಲ!

ಈ ಹಿಂದೆ ಚಿತ್ರ ಎಷ್ಟು ದಿನಗಳ ಕಾಲ ಪ್ರದರ್ಶನ ಕಂಡಿತು, ನೂರು ದಿನಗಳ ಕಾಲ ಪ್ರದರ್ಶನ ಕಂಡರೆ ಆ ಚಿತ್ರ ಬ್ಲಾಕ್‌ಬಸ್ಟರ್ ಎಂಬ ಅಂಶಗಳ ಮೇಲೆ ಚಿತ್ರದ ಯಶಸ್ಸನ್ನು ಅಳೆಯಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಚಿತ್ರವೊಂದು ಎಷ್ಟು ಗಳಿಸಿತು ಎಂಬುದು ಜನರಿಗೆ ಬಹಿರಂಗವಾಗಿ ತಿಳಿಯುತ್ತಿದ್ದು, ಪ್ರೇಕ್ಷಕರೇ ಚಿತ್ರ ಎಷ್ಟು ದಿನಗಳ ಕಾಲ ಪ್ರದರ್ಶನ ಕಂಡಿತು ಎನ್ನುವುದಕ್ಕಿಂತ ಎಷ್ಟು ಕೋಟಿ ಗಳಿಸಿತು ಎಂಬುದನ್ನು ಚರ್ಚಿಸುತ್ತಿದ್ದಾರೆ.

ಈಗ ಓಟಿಟಿ ಯುಗ ನಡೆಯುತ್ತಿರುವುದರಿಂದ ಚಿತ್ರ ಐವತ್ತು ದಿನಗಳನ್ನು ಪೂರೈಸುವ ಮುನ್ನವೇ ಓಟಿಟಿಯಲ್ಲಿ ಪ್ರದರ್ಶನಗೊಳ್ಳಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಸಿತು ಎಂಬುದಷ್ಟೇ ಈಗ ಮುಖ್ಯ. ಇನ್ನು ಸ್ಟಾರ್ ನಟರ ಚಿತ್ರಗಳು ಕೋಟಿ ಕೋಟಿ ಗಳಿಸುವುದು ಕಾಮನ್. ಚಿತ್ರ ಅಷ್ಟಕ್ಕಷ್ಟೇ ಇದ್ದರೂ ಸಹ ವಿಜಯ್ ಅಭಿನಯಿಸಿದ ಕಾರಣಕ್ಕಾಗಿ ವಾರಿಸು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಗಳಿಸಿತು. ಇನ್ನು ಚಿತ್ರಕಥೆ ಅದ್ಭುತವಾಗಿದ್ದರೆ ಸಾಮಾನ್ಯ ನಟನ ಚಿತ್ರವೂ ಸಹ ಅಬ್ಬರಿಸಿ ದಾಖಲೆಯ ಗಳಿಕೆ ಮಾಡಿಬಿಡುತ್ತದೆ

KGF 2 and Bahubali 2 not done this record which created by URI the surgical strike

ಸದ್ಯ ಅತಿಹೆಚ್ಚು ಗಳಿಕೆ ಕಂಡ ಭಾರತದ ಚಿತ್ರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಆಮಿರ್ ಖಾನ್ ನಟನೆಯ ದಂಗಲ್ ಹೊಂದಿದ್ದು, ಎರಡನೇ ಸ್ಥಾನದಲ್ಲಿ ಬಾಹುಬಲಿ 2 ಇದೆ. ಮೂರನೇ ಸ್ಥಾನದಲ್ಲಿ ಆರ್ ಆರ್ ಆರ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್ 2 ಇದೆ. ಇನ್ನು ಈ ಚಿತ್ರಗಳು ಸಾರ್ವಕಾಲಿಕ ದಾಖಲೆಗಳನ್ನು ಬರೆದಿದ್ದು, ಈ ಚಿತ್ರಗಳ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕುವುದು ತೀರಾ ಕಷ್ಟದ ಕೆಲಸ.

ಹೀಗೆ ಇಂಥ ದೊಡ್ಡ ದೊಡ್ಡ ಕಲೆಕ್ಷನ್ ದಾಖಲೆ ಹೊಂದಿರುವ ಈ ಚಿತ್ರಗಳೂ ಸಹ ಮಾಡಿರದಂತಹ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿನಲ್ಲಿ ಹೊಂದಿದೆ ಉರಿ ದ ಸರ್ಜಿಕಲ್ ಸ್ಟ್ರೈಕ್ ಚಿತ್ರ. 2016ರಲ್ಲಿ ಭಾರತ ಸೇನೆ ನಡೆಸಿದ ಉರಿ ಕಾರ್ಯಾಚರಣೆಯ ನೈಜ ಘಟನೆಗಳ ಆಧಾರಿತವಾದ ಈ ಚಿತ್ರ ಅಬ್ಬರದ ಪ್ರದರ್ಶನವನ್ನು ಕಂಡಿತು. ಸೇನೆಯ ಕಾರ್ಯಾಚರಣೆ ಹೇಗಿರಲಿದೆ, ವೈರಿಗಳಿದ್ದ ಜಾಗಕ್ಕೆ ನುಗ್ಗಿ ಅವರನ್ನು ಹೇಗೆ ಸದೆ ಬಡಿಯಲಾಯಿತು ಎಂಬ ಕುತೂಹಲವಿದ್ದ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರ ಮಂದಿರಗಳಿಗೆ ನುಗ್ಗಿದ್ದರು.

ಪರಿಣಾಮವಾಗಿ ಉರಿ ದ ಸರ್ಜಿಕಲ್ ಸ್ಟ್ರೈಕ್ ಚಿತ್ರ ಹಿಂದಿ ಬೆಲ್ಟ್‌ನಲ್ಲಿ ಸತತವಾಗಿ 41 ದಿನಗಳ ಕಾಲ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯನ್ನು ಬರೆದಿದೆ. ಈ ಮೂಲಕ ಹಿಂದಿ ಮಾರುಕಟ್ಟೆಯಲ್ಲಿ ಅತಿಹೆಚ್ಚು ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಈ ಚಿತ್ರದ ಹೆಸರಿನಲ್ಲಿ ದಾಖಲಾಗಿದೆ.

KGF 2 and Bahubali 2 not done this record which created by URI the surgical strike

ಹೆಚ್ಚು ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ:

1. ಉರಿ ದ ಸರ್ಜಿಕಲ್ ಸ್ಟ್ರೈಕ್ - 41 ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್

2. ಬಾಹುಬಲಿ 2 - 35 ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್

3. ಕೆಜಿಎಫ್ ಚಾಪ್ಟರ್ 2 - 34 ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್

4. ಪಠಾಣ್ - 33 ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ( ಇನ್ನೂ ಪ್ರದರ್ಶನಗೊಳ್ಳುತ್ತಿದ್ದು, ಮೇಲಿನ ಚಿತ್ರಗಳನ್ನು ಹಿಂದಿಕ್ಕುವ ಸಾಧ್ಯತೆ ಇದೆ )

5. ದಂಗಲ್ - 31 ದಿನಗಳ ಕಾಲ ಸತತವಾಗಿ ಒಂದು ಕೋಟಿಗೂ ಅಧಿಕ ನೆಟ್ ಕಲೆಕ್ಷನ್

More from Filmibeat

English summary
URI movie holds the record of continuous 1 crore nett collection for 41 days. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X