KGF 2 Hindi Collection : ಇತಿಹಾಸ ಸೃಷ್ಟಿಸಿದ 'ಕೆಜಿಎಫ್ 2' ಬಾಲಿವುಡ್‌ನಲ್ಲಿ ನಂ.1 ಸ್ಥಾನ
ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ 'KGF 2'.
Recommended Video

'ಕೆಜಿಎಫ್ 2' ವಿಶೇಷವಾಗಿ ಗಮನ ಸೆಳೆದಿರುವುದು ಹಿಂದಿಯಲ್ಲಿ. ಈ ಚಿತ್ರ ಉತ್ತರ ಭಾರತದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ ಎಲ್ಲರ ಕಣ್ಣಿತ್ತು. ಎಬ್ಬಿಸಿದ್ದ ನಿರೀಕ್ಷೆಗಳನ್ನು ಈಗ ಈ ಚಿತ್ರ ನಿಜ ಮಾಡಿದೆ.
ಬಾಲಿವುಡ್‌ನಲ್ಲಿ ಯಶ್ ಚಿತ್ರ ನಂಬರ್ 1 ಆಗಿದೆ. 'ಕೆಜಿಎಫ್ 2' ಬಾಲಿವುಡ್ ಬಾಕ್ಸಫೀಸ್ ರೆಕಾರ್ಡ್‌ಗಳನ್ನು ಪುಡಿ, ಪುಡಿ ಮಾಡಿದೆ. ಈ ಹಿಂದೆ ಬಾಲಿವುಡ್ ಚಿತ್ರಗಳು ಮಾಡಿದ ರೆಕಾರ್ಡ್‌ಗಳನ್ನು ಧೂಳಿ ಪಟ ಮಾಡಿದೆ. ಈ ಮೂಲಕ ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.

ಬಾಲಿವುಡ್‌ನಲ್ಲಿ 'ಕೆಜಿಎಫ್ 2' ನಂ.1!
'ಕೆಜಿಎಫ್ 2' ಚಿತ್ರ ರಿಲೀಸ್‌ಗೂ ಮುನ್ನ ನಾರ್ತ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇತ್ತು. 'ಕೆಜಿಎಫ್' ಭಾಗ ಒಂದು ಬಾಲಿವುಡ್‌ನಲ್ಲಿ ಕಮಾಲ್ ಮಾಡಿತ್ತು. ಹಾಗಾಗಿ ಈ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇತ್ತು. ಅಂತೆಯೇ ಇರುವ ನಿರೀಕ್ಷೆಗಳನ್ನು ಉಳಿಸಿಕೊಂಡು ದಾಖಲೆ ಮಾಡಿದೆ 'ಕೆಜಿಎಫ್ 2'. ಬಾಲಿವುಡ್ ಬೆರಗಾಗುವಂತಹ ದಾಖಲೆ ಮಾಡಿದ ಕೆಜಿಎಫ್ 2, ಈಗ ದೊಡ್ಡ ಓಪನಿಂಗ್ ಪಡೆದುಕೊಂಡ ಮೊದಲ ಚಿತ್ರ ಆಗಿ ಹೊರ ಹೊಮ್ಮಿದೆ. ಈ ಮೂಲಕ ಬಾಲಿವುಡ್‌ನಲ್ಲಿ 'ಕೆಜಿಎಫ್ 2' ಹೊಸ ಇತಿಹಾಸ ಮಾಡಿದೆ.
'ವಾರ್' 51 ಕೋಟಿ, 'ಕೆಜಿಎಫ್ 2' 53 ಕೋಟಿ!
ಬಾಲಿವುಡ್‌ನಲ್ಲಿ ಅಲ್ಲಿನ ಹಿಂದಿ ಚಿತ್ರಗಳು ಮಾಡಿದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಮಾಡಿದೆ 'ಕೆಜಿಎಫ್ 2'. ಹಿಂದಿಯಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಅಂದರೆ ಅದು ಟೈಗರ್ ಶ್ರಾಫ್, ಹೃತಿಕ್ ರೋಷನ್ ಅಭಿನಯದ 'ವಾರ್'. ಈ ಚಿತ್ರ 51.60 ಕೋಟಿ ಓಪನಿಂಗ್ ಪಡೆದುಕೊಂಡು ದಾಖಲೆ ಬರೆದಿತ್ತು. ಆದರೆ ಈಗ 'ಕೆಜಿಎಫ್ 2', 53.95 ಕೋಟಿ ಗಳಿಕೆ ಮಾಡಿ 'ವಾರ್' ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಮೂಲಕ 'ಕೆಜಿಎಫ್ 2' ನಂಬರ್ 1 ಆಗಿದೆ.

'ಥಗ್ಸ್ ಆಫ್ ಹಿಂದುಸ್ತಾನ್' 50 ಕೋಟಿಗೆ ಸೀಮಿತ!
ಯಶ್, ಪ್ರಶಾಂತ್ ನೀಲ್ ಹಿಂದಿಯಲ್ಲಿ ಮಾಡಿರುವುದು ದೊಡ್ಡ ದಾಖಲೆಯೇ ಸರಿ. ಈ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ಅತಿ ಹೆಚ್ಚು ಗಳಿಕೆ ಮಾಡುವ ಮೂಲಕ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ಮತ್ತೊಂದು ಸಿನಿಮಾ ಅಂದರೆ ಆಮಿರ್ ಖಾನ್ ಅಭಿನಯದ 'ಥಗ್ಸ್ ಆಫ್ ಹಿಂದುಸ್ತಾನ್'. ಈ ಚಿತ್ರ ಮೊದಲ ದಿನ 50 ಕೋಟಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನೂ 'ಕೆಜಿಎಫ್ 2' ಮುರಿದಿದೆ.

ಬಾಲಿವುಡ್‌ನಲ್ಲಿ ಯಶ್ ದಾಖಲೆ!
'ಕೆಜಿಎಫ್ 2' ಚಿತ್ರಕ್ಕೆ ಬಾಲಿವುಡ್‌ನಲ್ಲಿ ಇರುವ ಕ್ರೇಜ್‌ನಿಂದಾಗಿ ನಟ ಯಶ್‌ಗೂ ಬೇಡಿಕೆ ಹೆಚ್ಚಾಗಿದೆ. ಹಿಂದಿಯಲ್ಲಿ ಯಶ್‌ಗೆ ಬೇಡಿಕೆ ಹೆಚ್ಚಾಗಿದ್ದು, ಮುಂದೆ ಯಶ್ ಯಾವ ಚಿತ್ರ ಮಾಡುತ್ತಾರೆ. ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಾರಾ? ಅಥವಾ ಪ್ಯಾನ್ ಇಂಡಿಯಾ ಚಿತ್ರಗಳನ್ನೇ ಮಾಡುತ್ತಾರಾ ಎನ್ನುವ ಬಗ್ಗೆ ಕುತೂಹಲ ಸೃಷ್ಟಿ ಆಗಿದೆ.


Click it and Unblock the Notifications











