'ಕೆಜಿಎಫ್ 2' ಹಿಂದಿ: 400 ಕೋಟಿ ರೂ. ಗಳಿಕೆ ನಾಟ್ ಔಟ್!

"ಕೆಜಿಎಫ್, ಕೆಜಿಎಫ್, ಕೆಜಿಎಫ್... ಬಾಲಿವುಡ್‌ ಡೋಂಟ್ ಲೈಕ್ ಇಟ್... ದೇ ಅವಾಯ್ಡ್... ಬಟ್ ಕೆಜಿಎಫ್ ಲೈಕ್ಸ್ ಬಾಲಿವುಡ್, ಕಾಂಟ್ ಅವಾಯ್ಡ್."

'ಕೆಜಿಎಫ್ 2' ಚಿತ್ರದ ವೈಲೆನ್ಸ್ ಡೈಲಾಗ್ ಈಗ ಈ ರೀತಿ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಕನ್ನಡಿಗರು ಬರೆದುಕೊಳ್ಳುತ್ತಾ ಇದ್ದಾರೆ. ಇದಕ್ಕೆ ಕಾರಣ ಬಾಲಿವುಡ್‌ನಲ್ಲಿ ಖಾತೆ ತೆರೆದ ಕನ್ನಡ ಚಿತ್ರ ಕೆಜಿಎಫ್. 'ಕೆಜಿಎಫ್ 2' ಚಿತ್ರವನ್ನು ಯಾರು ಎಷ್ಟೇ ಹೇಟ್ ಮಾಡಿದರು, ಚಿತ್ರದ ವೇಗವನ್ನು ತಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿ 'ಕೆಜಿಎಫ್ 2' ಕಮಾಲ್ ಮಾಡುತ್ತಿದೆ.

ಚಿತ್ರ ರಿಲೀಸ್ ಆದ ಮೊದಲ ದಿನವೇ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಿಗ್ ಓಪನಿಂಗ್ ಪಡೆದ ಮೊದಲ ಹಿಂದಿ ಚಿತ್ರವಾಗಿ 'ಕೆಜಿಎಫ್ 2' ಹೊರ ಹೊಮ್ಮಿದೆ. ಆದರೆ ಈ ಬಗ್ಗೆ ಬಾಲಿವುಡ್ ಹೆಚ್ಚು ತಲೆಕೆಡಿಸಿಕೊಂಡಲಿಲ್ಲ. ಆದರೆ ದಿನ ಕಳೆದಂತೆ ಬಾಲಿವುಡ್ ದಾಖಲೆಗಳನ್ನು ಮುರಿದು ಹಾಕಿದ 'ಕೆಜಿಎಫ್ 2', ದಾಖಲೆ ಸರಣಿಯನ್ನು ಮುಂದುವರೆಸಿದೆ.

ನಿರೀಕ್ಷೆಯ ಪ್ರಕಾರ ಹಿಂದಿಯಲ್ಲಿ 'ಕೆಜಿಎಫ್ 2' ಭರ್ಜರಿಯಾಗಿ ಓಡುತ್ತಿದೆ. ಯಾವುದೇ ಅಡೆ ತಡೆ ಇಲ್ಲದೆ ಮುನ್ನುಗ್ಗುತ್ತಿದೆ. ಈಗ ಕಲೆಕ್ಷನ್ ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಹೊಸ ದಾಖಲೆ ಮಾಡಿದೆ. ಹಿಂದಿ ಅವತರಣಿಕೆಯ 'ಕೆಜಿಎಫ್ 2' ಈಗ 400 ಕೋಟಿ ಗಡಿ ದಾಟಿದೆ.

ಹಿಂದಿ 'ಕೆಜಿಎಫ್ 2' 401.80 ಕೋಟಿ ರೂ. ಗಳಿಕೆ!

ಹಿಂದಿ 'ಕೆಜಿಎಫ್ 2' 401.80 ಕೋಟಿ ರೂ. ಗಳಿಕೆ!

'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದ್ದೇ ಅಗಿದ್ದು, ದಾಖಲೆ ಮೇಲೆ ದಾಖಲೆ ಮಾಡುತ್ತಲೇ ಇದೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ 2 ಚಿತ್ರದ ಹಿಂದಿ ಅವತರಣಿಕೆ ಸದ್ದು ಮಾಡುತ್ತಿದೆ. ಸೌತ್‌ನ ಚಿತ್ರವೊಂದು ಬಾಲಿವುಡ್‌ನಲ್ಲಿ ಈ ಮಟ್ಟಿಗೆ ಬೆಳೆದು ನಿಲ್ಲುವುದು ಎಂದರೆ ಅದು ಸುಮ್ಮನೇ ಅಲ್ಲ, ಸುಲಭವೂ ಅಲ್ಲ. ಆದರೆ 'ಕೆಜಿಎಫ್ 2'ಗೆ ಈ ಸಾಧನೆ ಕಷ್ಟವಾಗಲಿಲ್ಲ. ಹಿಂದಿಯಲ್ಲಿ ಕೋಟಿ, ಕೋಟಿ ಲೂಟಿ ಮಾಡುತ್ತಾ ಇರುವ ಕೆಜಿಎಫ್ 2 ಈಗ 400 ಕೋಟಿಯ ಗಡಿ ದಾಟಿದೆ. ಸದ್ಯ 'ಕೆಜಿಎಫ್ 2' ಹಿಂದಿ ಅವತರಣಿಕೆಯ ಗಳಿಕೆ 401.80 ಕೋಟಿ ರೂ. ಆಗಿದೆ.

3 ವಾರ ಕಳೆದರೂ ಚಿತ್ರಕ್ಕೆ ಎಫೆಕ್ಟ್ ಆಗಿಲ್ಲ!

3 ವಾರ ಕಳೆದರೂ ಚಿತ್ರಕ್ಕೆ ಎಫೆಕ್ಟ್ ಆಗಿಲ್ಲ!

ಹೆಚ್ಚು ಎಂದರೆ 'ಕೆಜಿಎಫ್ 2' ಚಿತ್ರದ ಹವಾ ಒಂದು ವಾರ ಅಥವಾ ಎರಡು ವಾರ ಇರುತ್ತದೆ ಎಂದು ಅಂದಾಜಿಸಲಾಗಿತ್ತು. ಹಾಗಾಗಿ 'ಕೆಜಿಎಫ್ 2' ರಿಲೀಸ್ ಆಗಿ ವಾರದ ಬಳಿಕ ಬಾಲಿವುಡ್‌ನ ಬಿಗ್ ಚಿತ್ರಗಳು ರಿಲೀಸ್ ಆದವು. 'ಹೀರೋಪಂತಿ 2' ಮತ್ತು 'ರನ್ ವೇ 34' ಚಿತ್ರಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿದವು. ಆದರೆ ಈ ಚಿತ್ರಗಳಿಂದ ಕೆಜಿಎಫ್ 2 ಗೆ ಮಾತ್ರ ಯಾವುದೇ ಎಫೆಕ್ಟ್ ಆಗಿಲ್ಲ, ಕೆಜಿಎಫ್ ತನ್ನ ಬೇಟೆಯನ್ನು ಮುಂದುವರೆಸಿದೆ.

ಐಪಿಎಲ್ ಕೂಡ ಕೆಜಿಎಫ್ ಗೆ ಅಡ್ಡಿ ಆಗಿಲ್ಲ!

ಐಪಿಎಲ್ ಕೂಡ ಕೆಜಿಎಫ್ ಗೆ ಅಡ್ಡಿ ಆಗಿಲ್ಲ!

ಇನ್ನು ಕೆಜಿಎಫ್ 2 ರಿಲೀಸ್ ಆದಾಗ ಐಪಿಎಲ್ ಇಂದ ತೊಂದರೆ ಆಗಬಹುದು ಎನ್ನಲಾಗಿತ್ತು. ಐಪಿಎಲ್ ಹಾವಳಿ ಜೋರಾಗಿ ಇರುವುದರಿಂದ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಆದರೆ ಅದು ಕೂಡ ಸುಳ್ಳಾಗಿದೆ. ಕೆಜಿಎಫ್ 2 ಸಿನಿಮಾಗೆ ಐಪಿಎಲ್‌ನಿಂದ ತೊಂದರೆ ಆಗಿಲ್ಲ. ವಿಶ್ವದಾದ್ಯಂತ ಸಾವಿರ ಕೋಟಿ ದಾಟಿರುವ ಕೆಜಿಎಫ್ ಹಿಂದಿಯಿಂದ 400 ಕೋಟಿ ಹರಿದು ಬಂದಿದೆ.

ಟ್ರೇಡ್ ವಿಶ್ಲೇಷಕರು ಕೆಜಿಎಫ್ 2 ಬಗ್ಗೆ ಏನು ಹೇಳುತ್ತಾರೆ?

ಕೆಜಿಎಫ್ 2 ಹಿಂದಿ ಅವತರಣಿಕೆ 400 ಕೋಟಿ ದಾಟಿದೆ ಎನ್ನುವ ವಿಚಾರವನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. "ಕೆಜಿಎಫ್ 2, 400 ಕೋಟಿ ನಾಟ್ ಔಟ್. ಅದ್ದೂರಿಯಾಗಿ 400 ಕೋಟಿ ಕ್ಲಬ್ ಸೇರಿದೆ. ಮತ್ತೊಂದು ದೊಡ್ಡ ವಾರಾಂತ್ಯವನ್ನು ನಿರೀಕ್ಷಿಸಲಾಗುತ್ತಿದೆ. ಗಳಿಕೆ ಮತ್ತಷ್ಟು ಹೆಚ್ಚಲಿದೆ. ಇದೀಗ ಕೆಜಿಎಫ್ 2 ಹಿಂದಿ ಒಟ್ಟಾರೆ ಗಳಿಕೆ- 401.80 ಕೋಟಿ." ಎಂದು ಬರೆದುಕೊಂಡಿದ್ದಾರೆ.

More from Filmibeat

English summary
KGF 2 Hindi Version Cross 400 Crore, New Record In Bollywood, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X