ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ #Yash54: ಏನಿದು ಟ್ರೆಂಡ್ ಎಂದು ಫ್ಯಾನ್ಸ್ ಕನ್‌ಫ್ಯೂಸ್!

'KGF'-2 ನಂತರ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲ ಅಕ್ಕಪಕ್ಕದ ಇಂಡಸ್ಟ್ರಿ ಮಂದಿ ಕೂಡ ಯಶ್ ಮುಂದಿನ ಸಿನಿಮಾ ಯಾವುದು ಎಂದು ಕಾಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಯಶ್19 ಅಂದರ್ ಯಶ್ ನಟನೆಯ 19ನೇ ಸಿನಿಮಾ ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗ್ತಿದೆ. ಆದರೆ ಇದ್ದಕ್ಕಿದ್ದಂತೆ ಯಶ್54 ಟ್ಯಾಗ್‌ ಟ್ರೆಂಡಿಂಗ್‌ಗೆ ಬಂದಿದೆ. ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಈ ಟ್ಯಾಗ್ ಬಳಸಿ ಸಾವಿರಾರು ಟ್ವೀಟ್‌ ಮಾಡಿದ್ದಾರೆ.

ಯಶ್19 ಟ್ರೆಂಡ್ ಸರಿ, ಯಾಕೆ ಯಶ್54 ಟ್ರೆಂಡ್ ಎಂದು ಕೆಲವರು ಕೇಳುತ್ತಿದ್ದಾರೆ. ಮತ್ತೊಂದ್ಕಡೆ ಯಶ್ ಮುಂದಿನ ಸಿನಿಮಾ ಗಣೇಶ ಹಬ್ಬದ ಸಂಭ್ರಮದಲ್ಲಿ ಅನೌನ್ಸ್ ಆಗುತ್ತದೆ ಅನ್ನುವ ಗುಸುಗುಸು ಕೂಡ ಕೇಳಿ ಬರ್ತಿದೆ. ಯಶ್- ನರ್ತನ್ ಕಾಂಬಿನೇಷನ್‌ ತಡವಾಗುವ ಸುಳಿವು ಸಿಕ್ಕಿದೆ. ಹಾಗಾಗಿ ಬೇರೆ ಯಾವ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ನಟಿಸ್ತಾರೆ ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಕ್ಕಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲೂ ಯಶ್ ಕ್ರೇಜ್ ಜೋರಾಗಿದೆ. ಬಾಲಿವುಡ್ ಪ್ರೇಕ್ಷಕರು ಸಹ ರಾಕಿ ಭಾಯ್ ವಾಟ್ ನೆಕ್ಸ್ಟ್ ಎಂದು ಕೇಳುತ್ತಿದ್ದಾರೆ.

'KGF' ಚಾಪ್ಟರ್- 2 ಹಿಂದಿ ವರ್ಷನ್ ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ಈ ಪಾಟಿ ಸದ್ದು ಮಾಡುತ್ತದೆ ಎಂದು ಯಾರು ಊಹಿಸಿರಲಿಲ್ಲ. ಏಪ್ರಿಲ್ 14ರಂದು ರಿಲೀಸ್ ಆಗಿದ್ದ 'KGF'-2 ಸಿನಿಮಾ ಮೊದಲ ದಿನವೇ ಪ್ರಪಂಚದಾದ್ಯಂತ 154 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದರಲ್ಲಿ ಹಿಂದಿ ವರ್ಷನ್ ಕಲೆಕ್ಷನ್ 54 ಕೋಟಿ ರೂ. ಆಗಿತ್ತು. ಇದ್ದಕ್ಕಿದಂತೆ ಇದನ್ನು ನೆನಪಿಸಿ ಯಶ್54 ಟ್ಯಾಗ್ ಟ್ರೆಂಡ್ ಆಗುತ್ತಿದೆ.

ರಾಕಿಂಗ್ ಸ್ಟಾರ್ ಹೊಸ ದಾಖಲೆ

ರಾಕಿಂಗ್ ಸ್ಟಾರ್ ಹೊಸ ದಾಖಲೆ

ಬಾಲಿವುಡ್‌ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಮೊದಲ ದಿನ 50 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. ಆದರೆ ಕನ್ನಡದ ಡಬ್‌ ಸಿನಿಮಾವೊಂದು ಇತಿಹಾಸ ನಿರ್ಮಿಸಿದೆ. 'KGF' ಚಾಪ್ಟರ್- 1 ಒಟ್ಟು ಕಲೆಕ್ಷನ್ 44 ಕೋಟಿ ರೂ. ಆಗಿತ್ತು. ಆದರೆ ಸೀಕ್ವೆಲ್ ಫಸ್ಟ್ ಡೇ 54 ಕೋಟಿ ರೂ. ದೋಚಿ ಬಾಲಿವುಡ್‌ ಬಾಕ್ಸಾಫೀಸ್ ಬುಡ ಅಲ್ಲಾಡಿಸಿತ್ತು. ರಾಕಿಭಾಯ್ ಆಗಿ ಯಶ್ ಬಾಲಿವುಡ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಅದೇ ಕಾರಣಕ್ಕೆ ಅಭಿಮಾನಿಗಳು ಸಾಲು ಸಾಲು ಟ್ವೀಟ್ ಮಾಡಿ ತಮ್ಮ ಪ್ರೀತಿ ತೋರಿಸುತ್ತಿದ್ದಾರೆ.

'KGF-2' ಹಿಂದಿ ಒಟ್ಟು ಗಳಿಕೆ 434 ಕೋಟಿ ರೂ.

'KGF-2' ಹಿಂದಿ ಒಟ್ಟು ಗಳಿಕೆ 434 ಕೋಟಿ ರೂ.

ಆಮಿರ್ ಖಾನ್, ಶಾರುಖ್ ಖಾನ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಅಂಥಾದ್ದರಲ್ಲಿ 'KGF-2' ಹಿಂದಿ ವರ್ಷನ್ ಒಟ್ಟು 434 ಕೋಟಿ ರೂ. ಕೋಟಿ ಬಾಚಿ ಎಲ್ಲರ ಹುಬ್ಬೇರಿಸಿತ್ತು. ಮುಂಬೈನಲ್ಲಿ 100 ಅಡಿಗಳ ಯಶ್ ಕಟೌಟ್ ಎದ್ದು ನಿಂತಿತ್ತು. ಒಂದು ವಾರ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿಯನ್ನು ಮೀರಿ 'KGF' ಸರಣಿ ಉತ್ತರ ಭಾರತದಲ್ಲಿ ದಾಖಲೆ ಬರೆದಿದ್ದು ಸುಳ್ಳಲ್ಲ.

3ನೇ ಸ್ಥಾನದಲ್ಲಿ 'KGF ಚಾಪ್ಟರ್- 2

3ನೇ ಸ್ಥಾನದಲ್ಲಿ 'KGF ಚಾಪ್ಟರ್- 2

ಮೊದಲ ದಿನವೇ 154 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಒಟ್ಟಾರೆಯಾಗಿ ಪ್ರಪಂಚದಾದ್ಯಂತ 1300 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಎರಡೂ ಮೂರು ಸಿನಿಮಾಗಳು ಮಾತ್ರ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. 'ದಂಗಲ್' ಹಾಗೂ 'ಬಾಹುಬಲಿ'-2 ಸಿನಿಮಾಗಳು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದರೆ, 'KGF-2' ಸಿನಿಮಾ 3ನೇ ಸ್ಥಾನದಲ್ಲಿದೆ.

ಗಣೇಶ ಹಬ್ಬಕ್ಕೆ ಯಶ್ 19 ಅನೌನ್ಸ್

ಗಣೇಶ ಹಬ್ಬಕ್ಕೆ ಯಶ್ 19 ಅನೌನ್ಸ್

'KGF-2' ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರೂ ಯಶ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ನಂತರ ಯಶ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಮುಗಿಬಿದ್ದಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಬರೀ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್‌ನಲ್ಲೂ ಇದೆ. ಗಣೇಶ ಹಬ್ಬ ಸಂಭ್ರಮದಲ್ಲಿ ಯಶ್ ಹೊಸ ಸಿನಿಮಾ ಘೋಷಣೆಯಾಗುತ್ತದೆ ಅನ್ನುವ ಗುಸು ಗುಸು ಶುರುವಾಗಿದೆ.

More from Filmibeat

English summary
KGF Actor Yash is Trending on the Twitter with #Yash54 Tag. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X