ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ; ತಂದೆ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ 'KGF' ನಟಿ
'ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ..' ಎಂದು 'ಕೆಜಿಎಫ್' ಸಿನಿಮಾದ ನಟಿ ಮೌನಿ ರಾಯ್ ತಂದೆಯ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯನ್ನು ಕಳೆದುಕೊಂಡು 8 ವರ್ಷಗಳು ಕಳೆದಿದ್ದು, ತಂದೆಯ ಪುಣ್ಯತಿಥಿ ದಿನ ಮೌನಿ ರಾಯ್ ಭಾವುಕರಾಗಿದ್ದಾರೆ.
2013ರಲ್ಲಿ ಮೌನಿ ರಾಯ್ ತಂದೆ ಅನಿಲ್ ರಾಯ್ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇಂದು (ಜೂನ್ 9)ಅನಿಲ್ ರಾಯ್ 8ನೇ ವರ್ಷದ ಪುಣ್ಯತಿಥಿಯನ್ನು ಮಾಡುತ್ತಿದ್ದಾರೆ ಮೌನಿ ರಾಯ್ ಕುಟುಂಬ. ತಂದೆಯ ಭಾವಚಿತ್ರಕ್ಕೆ ಪೂಜೆ ಮಾಡುತ್ತಿರುವ ಫೋಟೋವನ್ನು ಮೌನಿ ರಾಯ್ ಹಂಚಿಕೊಂಡು ಪ್ರತಿಯ ಅಪ್ಪನ ನೆನಪು ಮಾಡಿಕೊಂಡಿದ್ದಾರೆ.
'ಇಂದಿಗೆ 8 ವರ್ಷಗಳು.. ನೀವು ಸಂತೋಷವಾಗಿದ್ದೀರಿ ಎಂದು ಭಾವಿಸುತ್ತೇನೆ. ನಾವು ನಿಮ್ಮನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಮೌನಿ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

ಕಿರುತೆರೆ ಮೂಲಕ ಪ್ರಸಿದ್ಧಿಗಳಿಸಿರುವ ಮೌನಿ ರಾಯ್ ಸದ್ಯ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾದ ಗಲೀ ಗಲೀ.ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.
ನಟಿ ಮೌನಿ ರಾಯ್ ಹಲವಾರು ಟಿವಿ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಬಿಗ್‌ಬಾಸ್‌ನಲ್ಲಿಯೂ ಅತಿಥಿಯಾಗಿ ಭಾಗವಹಿಸಿದ್ದಾರೆ. ನಾಗಿನ್ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆಮಾತಾಗಿದ್ದರು. ಈ ಧಾರಾವಾಹಿಗೂ ಮೊದಲು 'ದೇವೋಂಕಿ ದೇವ್ ಮಹಾದೇವ್' ಧಾರಾವಾಹಿಯಲ್ಲಿ ಸತಿ ಪಾತ್ರದಲ್ಲಿ ನಟಿಸಿದ್ದರು. ಬಹುನಿರೀಕ್ಷೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications











