ದಿನವೊಂದಕ್ಕೆ 30 ಮಾತ್ರೆ ; ಬದುಕೇ ಸಾಕೆನಿಸಿತ್ತು ಎಂದ ಕೆ.ಜಿ.ಎಫ್ ನಟಿ.!
ಮೌನಿ ರಾಯ್ ಗೊತ್ತಲ್ಲವಾ.. ಕೆ.ಜಿ.ಎಫ್ ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಇವರ ಮೊದಲ ಹೆಜ್ಜೆ.
ಆ ನಂತರ ಕಸ್ತೂರಿ.. .. ದೇವೊಂಕೇ ದೇವ್ ಮಹಾದೇವ್ ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ನಾಗಿನ್ ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.

ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್''ನ ಅವಕಾಶ ಪಡೆದರು. ಬ್ರಹ್ಮಾಸ್ತ್ರ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು. ಸದ್ಯಕ್ಕೆ ಮೌನಿ ಸುಖಿ ಸಂಸಾರಿ. ಇಂಥ ಮೌನಿ ರಾಯ್‌ಗೆ ಅದೊಂದು ದಿನ ಬದುಕೇ ಬೇಡ ಎಂದು ಅನಸಿತ್ತು.
ಹೌದು, ಅಸಲಿಗೆ ಮೌನಿ ರಾಯ್.. ಧಾರಾವಾಹಿಯ ನಡುವೆ ಕೆಲ ರಿಯಾಲಿಟಿ ಶೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಆ ಪೈಕಿ ಝಲಕ್ ದಿಖ್ಲಾ ಜಾ ಕೂಡ ಒಂದು. ಇದೇ ಕಾರ್ಯಕ್ರಮದಲ್ಲಿ
ಬೆನ್ನುಮೂಳೆಯಲ್ಲಿ ಸಂಪೂರ್ಣ L4-L5 ಸ್ಲಿಪ್ ಡಿಜೆನರೇಶನ್ ಮತ್ತು ಸ್ಕೋಲಿಯೋಸಿಸ್ ಉಂಟಾಗಿತ್ತು. ಪರಿಣಾಮ.. ನೇರವಾಗಿ ನಿಲ್ಲಲು ಮೌನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ದಿನವೊಂದಕ್ಕೆ ಮೂವತ್ತು ಮಾತ್ರೆ ತೆಗೆದುಕೊಳ್ಳಬೇಕಾದ ಸಂದರ್ಭ ಬಂತು. ಚುಚ್ಚುಮದ್ದು ಬುದಕಿನ ಪ್ರಮುಖ ಭಾಗವೂ ಆಯಿತು. ಇದೆಲ್ಲದರಿಂದ ನೊಂದು-ಬೆಂದು ಹೋಗಿದ್ದ ಮೌನಿ ರಾಯ್ ಅವರ ತೂಕ ಹೆಚ್ಚಾಗಿ ಬಿಟ್ಟಿತ್ತು. ಈ ದೈಹಿಕ ಸಮಸ್ಯೆ ಮೌನಿ ಅವರನ್ನ ಮಾನಸಿಕವಾಗಿ ಸಂಪೂರ್ಣ ಕುಗ್ಗಿಸಿತ್ತು.

ಇನ್ನೂ.. ಹೆಸರು ತಂದು ಕೊಟ್ಟ ನಾಗಿನ್ ಅವಕಾಶ ಮೌನಿಗೆ ಬಂದಿದ್ದು ಕೂಡ ಇದೇ ಸಮಯದಲ್ಲಿ. ಆದರೆ ಎದ್ದು ನಿಲ್ಲಲು ಆಗದ ಪರಿಸ್ಥಿತಿ. ಈ ಕಾರಣಕ್ಕೆ ನನ್ನ ಜೀವನವೇ ಮುಕ್ತಾಯವಾಯಿತು ಎಂದುಕೊಂಡಿದ್ದರು ಮೌನಿ ರಾಯ್
Mashable India ಗೆ ನೀಡಿದ ಸಂದರ್ಶನದಲ್ಲಿ ಮೌನಿ ರಾಯ್ ಈ ಎಲ್ಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ. ಸದ್ಯಕ್ಕೆ ಮೌನಿ ರಾಯ್ ದಿ ವರ್ಜಿನ್ ಟ್ರೀ ಎಂಬ ಚಿತ್ರವನ್ನ ಮುಗಿಸಿದ್ದಾರೆ. ಬೇರೆ ಬೇರೆ ತರಹದ ಪಾತ್ರಗಳನ್ನ ಎದುರು ನೋಡುತ್ತಿದ್ದಾರೆ. ಇನ್ನೂ ಇದೆಲ್ಲದರ ನಡುವೆ ಕುಣಿಯಲು ಆಲ್ಬಂ ಹಾಡುಗಳು ಇದ್ದೇ ಇವೆ.


Click it and Unblock the Notifications











