ಮೊದಲ ದಿನಕ್ಕಿಂತ 6ನೇ ದಿನ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಕೆಜಿಎಫ್
Recommended Video

'ಕೆಜಿಎಫ್' ಚಿತ್ರದ ಹಿಂದಿ ಕಲೆಕ್ಷನ್ ದಿನೇ ದಿನೇ ಹೆಚ್ಚಾಗ್ತಿದೆ. ಮೊದಲ ದಿನಕ್ಕಿಂತ ಈಗ ಆರನೇ ದಿನ ಗಳಿಕೆ ಹೆಚ್ಚು ಕಂಡಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ.
ಹೌದು, ಆರನೇ ದಿನ 2.60 ಕೋಟಿ ಗಳಿಸಿದ ಕೆಜಿಎಫ್ ಹಿಂದಿ ಭಾಷೆಯ ಒಟ್ಟು ಕಲೆಕ್ಷನ್ ಆರು ದಿನಕ್ಕೆ 19.05 ಕೋಟಿಯಾಗಿದೆ. ಈ ಮೂಲಕ ಡಬ್ ಚಿತ್ರಗಳ ಪೈಕಿ ಕೆಜಿಎಫ್ ಆರನೇ ಸ್ಥಾನದಲ್ಲಿದೆ. ಇನ್ನು ಐದು ಕೋಟಿ ಗಳಿಸಿದ್ರೆ, ಕಬಾಲಿ ಮತ್ತು ಎಂಥಿರನ್ ಚಿತ್ರಗಳ ದಾಖಲೆಯನ್ನ ಅಳಿಸುಹಾಕುತ್ತೆ.
ಮೊದಲ ದಿನ ಕೆಜಿಎಫ್ ಹಿಂದಿ ವರ್ಷನ್ 2.10 ಕೋಟಿ, ಎರಡನೇ ದಿನ 3 ಕೋಟಿ, ಮೂರನೇ ದಿನ 4.10 ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನ ಸೋಮವಾರ 2.90 ಕೋಟಿ ಬಾಚಿಕೊಂಡಿತ್ತು. ಇದೀಗ ಐದನೇ ದಿನ 4.35 ಕೋಟಿ, ಆರನೇ ದಿನ 6 ಕೋಟಿ ಸೇರಿ ಒಟ್ಟು ಆರು ದಿನಕ್ಕೆ 19.05 ಕೋಟಿ ಖಾತೆಗೆ ಹಾಕಿಕೊಂಡಿದೆ.

ಹಿಂದಿಯಲ್ಲಿ ಡಬ್ ಆಗಿರುವ ಬೇರೆ ಭಾಷೆಯ ಚಿತ್ರಗಳ ಕಲೆಕ್ಷನ್ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾ ಆರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 (511ಕೋಟಿ), ಎರಡನೇ ಸ್ಥಾನದಲ್ಲಿ 2.0 (188 ಕೋಟಿ ನಾಟ್ ಔಟ್), ಮೂರನೇ ಸ್ಥಾನದಲ್ಲಿ ಬಾಹುಬಲಿ 1 (112 ಕೋಟಿ) ಗಳಿಸಿ ಟಾಪ್ ಮೂರರಲ್ಲಿದೆ. ರಜನಿಕಾಂತ್ ಅಭಿನಯದ ಕಬಾಲಿ (24 ಕೋಟಿ) ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ರಜನಿಯ ಇನ್ನೊಂದು ಸಿನಿಮಾ ಎಂಥಿರನ್ (22 ಕೋಟಿ) ಗಳಿಸಿ ಐದನೇ ಸ್ಥಾನದಲ್ಲಿದೆ.


Click it and Unblock the Notifications











