Kgf Week 3 Collection: '50' ಕೋಟಿಯತ್ತ ರಾಕಿ ಭಾಯ್

Recommended Video

KGF Movie : ದಾಖಲೆ ಬರೆದ ಹಿಂದಿ ವರ್ಷನ್ ಕೆಜಿಎಫ್ ಸಿನಿಮಾ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ನಾಲ್ಕನೇ ವಾರ ಪ್ರದರ್ಶನವಾಗ್ತಿದ್ದು, 25ನೇ ದಿನದತ್ತ ಹೆಜ್ಜೆ ಇಟ್ಟಿದೆ. ಕಲೆಕ್ಷನ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿರುವ ಯಶ್ ಸಿನಿಮಾ ಹಿಂದಿಯಲ್ಲಿ ನಾಗಲೋಟ ಮುಂದುವರಿಸಿದೆ.

ಈಗಾಗಲೇ 200 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ಪಾಲಿಗೆ ಚಿನ್ನವೇ ಸರಿ. ಈ ಮಧ್ಯೆ ಬಾಲಿವುಡ್ ನಲ್ಲಿ ಮೂರು ವಾರಗಳ ಅಂತ್ಯಕ್ಕೆ ಕೆಜಿಎಫ್ ಸಿನಿಮಾ ಬರೋಬ್ಬರಿ 40.39 ಕೋಟಿ ಗಳಿಕೆ ಕಂಡಿದೆ.

KGF hindi version Week 3 Collection

ಈ ಮೂಲಕ ಹಿಂದಿಗೆ ಡಬ್ ಆದ ಚಿತ್ರಗಳ ಪೈಕಿ ಕೆಜಿಎಫ್ ನಾಲ್ಕನೇ ಸ್ಥಾನದಲ್ಲಿದೆ. ಬಾಹುಬಲಿ 2, ರಜನಿಯ 2.0 ಮತ್ತು ಬಾಹುಬಲಿ 1 ಚಿತ್ರಗಳ ಮೊದಲ ಮೂರು ಸ್ಥಾನದಲ್ಲಿದೆ. ಮೊದಲನೇ ವಾರ 21 ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾ ಎರಡನೇ ವಾರ 11.50 ಕೋಟಿ ಬಾಚಿಕೊಂಡಿತ್ತು. ಮೂರನೇ ವಾರ 7.44 ಕೋಟಿ ಕಲೆಕ್ಷನ್ ಮಾಡಿದೆ.

ಹಿಂದಿ ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡ್ತಿದ್ದ ಕೆಜಿಎಫ್ ಚಿತ್ರಕ್ಕೆ ರಣ್ವೀರ್ ಸಿಂಗ್ ಅಭಿನಯದ ಸಿಂಬಾ ಸಿನಿಮಾ ಬ್ರೇಕ್ ಹಾಕಿದೆ. ಈ ಚಿತ್ರದ ಯಶಸ್ಸು ಕೆಜಿಎಫ್ ಗೆ ಸ್ವಲ್ಪ ಫೈಟ್ ನೀಡುತ್ತಿದೆ. ಹೀಗಾಗಿ, ಕಲೆಕ್ಷನ್ ನಲ್ಲಿ ಕೆಜಿಎಫ್ ಸಿನಿಮಾ ನಿಧಾನವಾಗಿದೆ.

ಬಟ್, ಸದ್ಯದ ಕಲೆಕ್ಷನ್ ನೋಡಿದ್ರೆ ಹಿಂದಿಯಲ್ಲಿ 50 ಕೋಟಿ ಗಳಿಸುವ ಎಲ್ಲಾ ಲಕ್ಷಣಗಳಿವೆ. ಐದನೇ ವಾರ ಅಂತ್ಯಕ್ಕೆ ಇದು ಸಾಧ್ಯವಾದ್ರೂ ಅಚ್ಚರಿಯಿಲ್ಲ.

More from Filmibeat

English summary
Rocking Star Yash starrer Hindi version of KGF collects 40 Crore in 3 weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X