ಇಂದು ನಿಮ್ಮ ಮನೆಗೆ ಬರ್ತಿದೆ ಹಿಂದಿ ಕೆಜಿಎಫ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೆಜಿಎಫ್, 75 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿ ಅಲ್ಲಿಯೂ ಹೆಚ್ಚು ಜನ ನೋಡಿ ಯಶ್ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ.
ಒಂದು ಸಲ ನೋಡಿದ್ದರೂ ಮತ್ತೆ ಮತ್ತೆ ನೋಡಬೇಕು ಎಂಬ ಅನುಭವವನ್ನ ಕೆಜಿಎಫ್ ಸಿನಿಮಾ ಕೊಡ್ತಿದೆ. ಹಾಗಾಗಿ, ಪದೇ ಪದೇ ಕೆಜಿಎಫ್ ನೋಡುವ ಅವಕಾಶ ಕೂಡ ಸಿನಿ ಪ್ರೇಮಿಗಳಿಗೆ ಸಿಕ್ತಿದೆ.
ಹೌದು, ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕೆಜಿಎಫ್ ಚಾಪ್ಟರ್ 1 ಪ್ರಸಾರವಾಗ್ತಿದೆ. ಸೋನಿ ಮ್ಯಾಕ್ಸ್ ವಾಹಿನಿಯಲ್ಲಿ ಇಂದು ರಾತ್ರಿ 8 ಗಂಟೆಗೆ ಕೆಜಿಎಫ್ ಹಿಂದಿ ವರ್ಷನ್ ಪ್ರಸಾರವಾಗ್ತಿದೆ. ಹಿಂದಿ ಕೆಜಿಎಫ್ ನೋಡಬೇಕು ಎಂದುಕೊಂಡವರು ನಿಮ್ಮ ಮನೆಯಲ್ಲೇ ಕೂತು ಟಿವಿಯಲ್ಲಿ ನೋಡಬಹುದು.

ಮತ್ತೊಂದೆಡೆ ಕನ್ನಡ ಕಿರುತೆರೆಯಲ್ಲೂ ಕೆಜಿಎಫ್ ಪ್ರಸಾರವಾಗಲಿದೆ. ಸದ್ಯಕ್ಕೆ ದಿನಾಂಕ ಮತ್ತು ಸಮಯ ಬಹಿರಂಗವಾಗಿಲ್ಲ. ಅತಿ ಶೀಘ್ರದಲ್ಲಿ ಎಂಬ ಪ್ರೋಮೋ ಮಾತ್ರ ಟೆಲಿಕಾಸ್ಟ್ ಆಗ್ತಿದೆ. ಬಹುಶಃ ಯುಗಾದಿ ಹಬ್ಬಕ್ಕೆ ಕೆಜಿಎಫ್ ಪ್ರಸಾರವಾಗಬಹುದು.
ಇನ್ನುಳಿದಂತೆ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ, ರಾಮ್, ಅನಂತ್ ನಾಗ್, ಮಾಳವಿಕಾ ಅವಿನಾಶ್ ಅಭಿನಯದ ಈ ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











