twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ ನ ಈ ಹೊಸ ಸಿನಿಮಾದ ಗಳಿಕೆ ನೋಡಿದರೆ ಪಾಪ ಎನಿಸುತ್ತದೆ!

    |

    ಚಿತ್ರಮಂದಿರಗಳೇ ಇಲ್ಲದ ಹೊತ್ತಿನಲ್ಲಿ 'ಬಾಕ್ಸ್‌ಆಫೀಸ್ ಕಲೆಕ್ಷನ್‌' ಪದಕ್ಕೆ ಅರ್ಥವೇ ಇಲ್ಲ. ಆದರೂ ಸಹ ಇತ್ತೀಚೆಗಷ್ಟೆ ಬಿಡುಗಡೆಯಾದ ಬಾಲಿವುಡ್‌ನ ಸಿನಿಮಾ ವೊಂದರ ಬಾಕ್ಸ್‌ಆಫೀಸ್ ಕಲೆಕ್ಷನ್ ವರದಿ ಬಂದಿದ್ದು, ಫಲಿತಾಂಶ ಚಿಂತಾಜನಕವಾಗಿದೆ.

    ಖಾಲಿ-ಪಿಲಿ ಹೆಸರಿನ ಬಾಲಿವುಡ್ ಸಿನಿಮಾ ವೊಂದು ಜೀ ಫ್ಲೆಕ್ಸ್‌ ನಲ್ಲಿ ನೇರವಾಗಿ ಬಿಡುಗಡೆ ಆಗಿತ್ತು. ಅನನ್ಯಾ ಪಾಂಡೆ, ಇಶಾನ್ ಕಟ್ಟರ್ ನಟನೆಯ ಈ ಸಿನಿಮಾ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಂಪೂರ್ಣ ಮನೊರಂಜನಾತ್ಮಕ ಸಿನಿಮಾ ಆಗಿದ್ದ ಖಾಲಿ-ಪೀಲಿ ಒಮ್ಮೆ ನೋಡಬಹುದಾದ ಸಿನಿಮಾ ಎನಿಸಿಕೊಂಡಿತ್ತು.

    ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!

    ಸಿನಿಮಾವು ಒಟಿಟಿಯಲ್ಲಿ ಇದೇ ಅಕ್ಟೋಬರ್ 3 ರಂದು ಬಿಡುಗಡೆ ಆಗಿತ್ತು. ಭಾರತದಲ್ಲಿ ಚಿತ್ರಮಂದಿರಗಳಲ್ಲಿಲ್ಲವಾದರೂ, ಸಿನಿಮಾದ ನಿರ್ಮಾಪಕರು, ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿರುವ ಕೆಲವು ದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದ್ದರು.

    ಅಮೆರಿಕದಲ್ಲಿ ಭಾರಿ ಹೀನಾಯ ಪ್ರದರ್ಶನ

    ಅಮೆರಿಕದಲ್ಲಿ ಭಾರಿ ಹೀನಾಯ ಪ್ರದರ್ಶನ

    ಅಮೆರಿಕದಲ್ಲಿ ಹನ್ನೊಂದು ಪರದೆಗಳಲ್ಲಿ ಖಾಲಿ-ಪೀಲಿ ಸಿನಿಮಾ ಬಿಡುಗಡೆ ಆಗಿತ್ತು. ಹನ್ನೊಂದು ಪರದೆಗಳಲ್ಲಿ ಬಿಡುಗಡೆ ಆಗಿದ್ದರೂ ಸಹ ಸಿನಿಮಾ ಗಳಿಸಿದ್ದು ಕೇವಲ 350 ಡಾಲರ್ ಅಷ್ಟೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಸಿನಿಮಾ ಗಳಿಸಿದ್ದು 25,000 ರೂಪಾಯಿ ಮಾತ್ರ.

    ನ್ಯೂಜಿಲೆಂಡ್‌ನಲ್ಲಿ 30,000 ಗಳಿಸಿದ ಸಿನಿಮಾ

    ನ್ಯೂಜಿಲೆಂಡ್‌ನಲ್ಲಿ 30,000 ಗಳಿಸಿದ ಸಿನಿಮಾ

    ಇದೇ ಸಿನಿಮಾ ನ್ಯೂಜಿಲೆಂಡ್‌ನಲ್ಲಿ ಸಹ ಬಿಡುಗಡೆ ಆಗಿತ್ತು. ಅಲ್ಲಿ 30,000 ರೂಪಾಯಿಗಳನ್ನು ಗಳಿಸಲಷ್ಟೆ ಶಕ್ತವಾಯಿತು. ವಿದೇಶದಲ್ಲಿ ಹೀನಾಯವಾಗಿ ನೆಲಕಚ್ಚಿದೆ ಖಾಲಿ-ಪೀಲಿ ಸಿನಿಮಾ. ಇದಕ್ಕೆ ಕೊರೊನಾ ಒಂದು ಕಾರಣವಾದರೆ, ಸಿನಿಮಾದಲ್ಲಿ ದೊಡ್ಡ ಸ್ಟಾರ್ ಇಲ್ಲದೇ ಇರುವುದು ಮತ್ತೊಂದು ಕಾರಣವೆಂದು ಗುರುತಿಸಬಹುದು.

    'ದಂಗಲ್' ಸಾಧನೆ ಮೀರಿಸಿದ 'ಸಾಹೋ': ಲಾಕ್ ಡೌನ್ ನಡುವೆಯೂ ದಾಖಲೆ'ದಂಗಲ್' ಸಾಧನೆ ಮೀರಿಸಿದ 'ಸಾಹೋ': ಲಾಕ್ ಡೌನ್ ನಡುವೆಯೂ ದಾಖಲೆ

    ಡ್ರೈವ್ ಇನ್ ಥಿಯೇಟರ್‌ನಲ್ಲಿ ಫುಲ್‌ಹೌಸ್‌!

    ಡ್ರೈವ್ ಇನ್ ಥಿಯೇಟರ್‌ನಲ್ಲಿ ಫುಲ್‌ಹೌಸ್‌!

    ಆದರೆ ಭಾರತದ ಗುರುಗ್ರಾಮದ ಓಪನ್ ಥಿಯೇಟರ್ ಅಥವಾ ಡ್ರೈವ್ ಇನ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದ ವೀಕೆಂಡ್‌ನ ಎಲ್ಲಾ ಶೋಗಳು ಹೌಸ್ ಫುಲ್ ಆದವಂತೆ. ಒಂದು ಕಾರಿಗೆ 999 ರೂಪಾಯಿ ಬೆಲೆಯಂತೆ ಸಾಕಷ್ಟು ಮಂದಿ ಸಿನಿಮಾವನ್ನು ಡ್ರೈವ್ ಇನ್ ಥಿಯೇಟರ್‌ನಲ್ಲಿ ನೋಡಿದ್ದಾರೆಂದು ಬಾಲಿವುಡ್ ಟ್ರೇಡ್ ಅನಲಿಸ್ಟ್ ಹೇಳಿದೆ.

    ಒಟಿಟಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ ನಿರ್ಮಾಪಕ

    ಒಟಿಟಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ ನಿರ್ಮಾಪಕ

    ಸಿನಿಮಾವು ಝೀ ಪ್ಲೆಕ್ಸ್‌ಗೆ ಒಳ್ಳೆಯ ಬೆಲೆಗೆ ಮಾರಾಟವಾಗಿದ್ದು, ನಿರ್ಮಾಪಕರು ಸಾಕಷ್ಟು ಲಾಭವನ್ನೇ ಗಳಿಸಿದ್ದಾರೆ. ಹಾಗಾಗಿ ವಿದೇಶದಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಆದರೆ ಕೊರೊನಾ ಕಾಲದಲ್ಲಿ ಸಿನಿಮಾಗಳು ಬಿಡುಗಡೆ ಆದರೆ ಏನಾಗಬಹುದು ಎಂಬ ಅಂದಾಜು ಇತರೆ ನಿರ್ಮಾಪಕರಿಗೆ ದೊರಕಲು ಖಾಲಿ-ಪೀಲಿ ಸಿನಿಮಾ ಒಳ್ಳೆಯ ಉದಾಹರಣೆ.

    ಜಗತ್ತಿನ ಅತ್ಯಂತ ಸಮೃದ್ಧ ಚಿತ್ರೋದ್ಯಮ ಖ್ಯಾತಿಯ ಬಾಲಿವುಡ್‌ಗೆ ನೆಲಕಚ್ಚುವ ಭೀತಿಜಗತ್ತಿನ ಅತ್ಯಂತ ಸಮೃದ್ಧ ಚಿತ್ರೋದ್ಯಮ ಖ್ಯಾತಿಯ ಬಾಲಿವುಡ್‌ಗೆ ನೆಲಕಚ್ಚುವ ಭೀತಿ

    English summary
    Bollywood new movie Khaali Pheeli movie US and New Zealand box office collection is shocking.
    Monday, October 5, 2020, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X