Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದಡಕ್' ನೋಡಿ ಕಣ್ಣೀರಿಟ್ಟ ಶ್ರೀದೇವಿ ಪತಿ ಮತ್ತು ಮಗಳು

ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಈ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ಶ್ರೀದೇವಿ ಪುತ್ರಿಗೆ ಸಂಪ್ರದಾಯಕ ಸ್ವಾಗತ ಸಿಕ್ಕಿದೆ.
ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದ 'ದಡಕ್' ಜಾಹ್ನವಿಗೆ ಒಳ್ಳೆ ಒಪನಿಂಗ್ ನೀಡಿದೆ. ಈ ಸಂತೋಷವನ್ನ ಹಂಚಿಕೊಂಡ ಜಾಹ್ನವಿ, ತಮ್ಮ ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಸಿನಿಮಾ ನೋಡಿ ಕಣ್ಣೀರಿಟ್ಟ ಘಟನೆಯನ್ನ ಹೇಳಿಕೊಂಡಿದ್ದಾರೆ.
ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾ 'ಧಡಕ್' ಮಾಡಿದ ಕಲೆಕ್ಷನ್ ಎಷ್ಟು.?
''ನನಗೆ ದೊಡ್ಡ ಮಟ್ಟದ ಪ್ರೀತಿ ಸಿಕ್ಕಿದೆ, ಎಲ್ಲರೂ ಚಿತ್ರವನ್ನ ಇಷ್ಟಪಟ್ಟಿದ್ದಾರೆ. ನನ್ನನ್ನು ಸ್ವೀಕರಿಸಿದ್ದಾರೆ, ಅದಕ್ಕಿಂತ ಬೇರೇನೂ ಬೇಕು. ಇನ್ನು ಹೆಚ್ಚಿನ ಸಿನಿಮಾಗಳನ್ನ ಮಾಡೋಕೆ ಇಷ್ಟಪಡ್ತೀನಿ. ನಮ್ಮ ತಂದೆ, ನಿರ್ಮಾಪಕ ಕರಣ್ ಜೋಹರ್ ಹಾಗೂ ನಿರ್ದೇಶಕ ಶಶಾಂಕ್ ಅವರ ಸಂತೋಷ ನನಗೆ ಹೆಮ್ಮೆ ತಂದಿದೆ'' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ಶ್ರೀದೇವಿ ಕುಟುಂಬದವರು 'ದಡಕ್' ಸಿನಿಮಾ ನೋಡಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಜಾಹ್ನವಿ '' ಖುಷಿ ನನ್ನ ನೋಡಿ ಕಣ್ಣೀರಿಟ್ಟಳು, ನೀನು ಯಾಕೆ ಚಿಂತೆ ಮಾಡುತ್ತೀಯಾ.? ಎಂದು ಹೇಳಿ ಅತ್ತಳು. ಇನ್ನು ತಂದೆಯವರು ಒಂದು ತಿಂಗಳ ಮುಂಚೆಯೇ ಸಿನಿಮಾ ನೋಡಿದ್ದರು. ಆ ದಿನ ರಾತ್ರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ್ದರು. ಅದೇ ದಿನ ರಾತ್ರಿ ನನ್ ರೂಂಮಿಗೆ ಬಂದು ನನ್ನನ್ನು ಹಿಡಿದುಕೊಂಡು ಭಾವುಕರಾಗಿದ್ದರು'' ಎಂದು ಜಾಹ್ನವಿ ತಿಳಿಸಿದ್ದಾರೆ.
ಇನ್ನು ಮೊದಲ ದಿನ 8 ಕೋಟಿ ಗಳಿಸಿದ್ದ 'ದಡಕ್' ಸಿನಿಮಾ ನಾಲ್ಕು ದಿನಕ್ಕೆ 50 ಕೋಟಿ ಗಳಿಕೆ ಕಂಡು ಮುನ್ನಗ್ಗುತ್ತಿದೆ. ಮರಾಠಿಯ 'ಸೈರಾಟ್' ಚಿತ್ರದ ಹಿಂದಿ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ಹಾಗೂ ಇಶಾನ್ ಕತ್ತಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.