ಎಲ್ಲೋ ಔಟ್ಫಿಟ್ನಲ್ಲಿ ಕಿಯಾರಾ ಮತ್ತು ಸಾರಾ ಅಲಿ ಖಾನ್ ಮಿಂಚಿಂಗ್: ಈ ಡ್ರೆಸ್ ಬೆಲೆ ಎಷ್ಟು?
ಕಿಯಾರಾ ಅಡ್ವಾಣಿ ಮತ್ತು ಸಾರಾ ಅಲಿ ಖಾನ್ ಬಾಲಿವುಡ್ ನ ಫ್ಯಾಷನ್ ಫ್ರೀಕ್ ನಟಿಯರಲ್ಲೊಬ್ಬರು. ಈ ನಟಿಯರು ತಮ್ಮ ಡ್ರೆಸ್ ಸೆನ್ಸ್ ಮತ್ತು ಸ್ಟೈಲಿಶ್ ಲುಕ್ ಮೂಲಕ ಬಹುಬೇಗ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಫ್ಯಾನ್ಸ್ ಕೂಡ ಈ ನಟಿಮಣಿಯರ ಫ್ಯಾಷನ್ ಅನ್ನೇ ಅನುಸರಿಸುತ್ತಾರೆ. ಸದ್ಯ ಇವರಿಬ್ಬರ ಎಲ್ಲೋ ಔಟ್ಫಿಟ್ ಫೋಟೋಗಳು ವೈರಲ್ ಆಗಿವೆ.
ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಯಾರಾ ತಾವು ಇತ್ತೀಚೆಗೆ ಭಾಗವಹಿಸುತ್ತಿರುವ ಪ್ರತಿ ಈವೆಂಟ್ ಹಾಗೂ ಪ್ರವಾಸಗಳಲ್ಲಿ ತಮ್ಮ ಗ್ಲಾಮರಸ್ ಲುಕ್ ಮೂಲಕ ಮಿಂಚುಹರಿಸುತ್ತಿದ್ದಾರೆ. ನಟಿ ಸಾರಾ ಅಲಿ ಖಾನ್ ಕೂಡ ಗಾಢವಾದ ಏಕವರ್ಣಿಯ (ಮೋನೋಕ್ರೊಮ್) ಧರಿಸಿನಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಈ ಇಬ್ಬರು ನಟಿಯರು ತಮ್ಮ ಹೊಸ-ಹೊಸ ಫೋಟೋಶೂಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲದಿನಗಳ ಹಿಂದಷ್ಟೇ ಕಿಯಾರ ಎಲ್ಲೋ ಕಲರ್ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. ಇದೀಗ ಸಾರಾ ಅಲಿ ಖಾನ್ ಕೂಡ ಅದೇ ರೀತಿಯ ಔಟ್ಫಿಟ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದು, ಕಿಯಾರಾ ಹಾಗೂ ಸಾರಾ ಲುಕ್ ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

ಕಿಯಾರ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು?
ಕಿಯಾರ ಅಡ್ವಾಣಿ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಎಲ್ಲೋ ಬಣ್ಣದ ಸ್ಟ್ರಾಪ್ ಲೆಸ್ ಟಾಪ್ ಹಾಗೂ ರಿಬ್ಬಡ್ ಮ್ಯಾಕ್ಸಿ ಸ್ಕರ್ಟ್ ಧರಿಸಿ ತೆರಳಿದ್ದರು. ಈ ಉಡುಪು ಡಿಸೈನರ್ ಡಿಯೋನ್ ಲೀ ಇಂಟರ್ ನ್ಯಾಷನಲ್ ಬ್ರ್ಯಾಂಡ್‌ನದ್ದಾಗಿದ್ದು, ಕಿಯಾರ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಎಲ್ಲೋ ಕಲರ್ ಡ್ರೆಸ್ ಜೊತೆ ಕುತ್ತಿಗೆಗೆ ಕಸ್ಟಮೈಸ್ ನೆಕ್ಲೇಸ್ ಮತ್ತು ಗೋಲ್ಡ್ ಕಲರ್ ಬಳೆ ತೊಟ್ಟಿದ್ದರು. ಇದು ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಡ್ರೆಸ್ಸಿನಲ್ಲಿ ಅವರು ಫೋಟೋಶೂಟ್ ಕೂಡ ಮಾಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಕಿಯಾರ ಧರಿಸಿದ್ದ ಬಟ್ಟೆಯ ಬೆಲೆ ರಿವೀಲ್ ಆಗಿದೆ. ಈ ನಟಿ ಧರಿಸಿದ್ದ ಬಟ್ಟೆಯ ಬೆಲೆ 27,161.24 ರೂಪಾಯಿಯಾಗಿದ್ದು, ಅದನ್ನು ಸಾವಯವ ಹತ್ತಿಯಿಂದ ಮಾಡಲಾಗಿದೆ.

ಸಾರಾ ಅಲಿ ಖಾನ್ ಔಟ್ಫಿಟ್
ಕಿಯಾರ ಬಳಿಕ ಸಾರಾ ಅಲಿ ಖಾನ್ ಇತ್ತೀಚೆಗೆ ಎಲ್ಲೊ ಬಟ್ಟೆಯಲ್ಲಿ ಫೋಟೊಶೂಟ್ ಮಾಡಿಸಿದ್ದರು. ಸಾರಾ ಅವರನ್ನು ಲಕ್ಷ್ಮಿ ಲೆಹರ್ ಸ್ಟೈಲ್ ಮಾಡಿದ್ದು, ಎಲ್ಲೊ ಕ್ರಾಪ್ ಟಾಪ್ ಹಾಗೂ ಮಿನಿ ಸ್ಕರ್ಟ್ ಧರಿಸಿ ಫೋಟೋಗಳಿಗೆ ಫೋಸ್ ನೀಡಿದ್ದರು. ಈ ಫೋಟೋಗಳಲ್ಲಿ ಸಾರಾ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದರು. ಎಲ್ಲೊ ಕಲರ್ ಬಟ್ಟೆಯ ಜೊತೆ ಸಾರಾ ಕೈಗೆ ದಪ್ಪದಾದ ಗೋಲ್ಡ್ ಕಲರ್ ಬಳೆ ಹಾಗೂ ಮ್ಯಾಚಿಂಗ್ ಹೈಹೀಲ್ಸ್ ಧರಿಸಿದ್ದರು. ಜೊತೆಗೆ ಫ್ರೀ ಹೇರ್ ಹಾಗೂ ಸಿಂಪಲ್ ಮೇಕಪ್ ಮಾಡಿದ್ದರು. ಇದು ಅವರ ಅಂದಕ್ಕೆ ಮತ್ತಷ್ಟು ಮೆರಗು ನೀಡಿತ್ತು. ಆದರೆ, ಸಾರಾ ಅಲಿ ಖಾನ್ ಧರಿಸಿನ ಬೆಲೆ ರಿವೀಲ್ ಆಗಿಲ್ಲ. ಸದ್ಯ ಕಿಯಾರಾ ಹಾಗೂ ಸಾರಾ ಎಲ್ಲೋ ಡ್ರೆಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.



Click it and Unblock the Notifications











