For Quick Alerts
  ALLOW NOTIFICATIONS  
  For Daily Alerts

  'ಶೇರ್ ಷಾ' ಸಕ್ಸಸ್ ಬಳಿಕ ಸಂಭಾವನೆ ಹೆಚ್ಚಿಸಿಕೊಂಡ ನಟಿ ಕಿಯಾರಾ

  By ಫಿಲ್ಮಿಬೀಟ್ ಡೆಸ್ಕ್
  |

  ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದಂತೆ ನಟಿಮಣಿಯರು ಸಂಭಾವನೆ ಹೆಚ್ಚಿಸಿಕೊಳ್ಳುವುದು ಕಾಮನ್. ಇದೀಗ ಬಾಲಿವುಡ್ ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಕೂಡ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಶೇರ್ ಷಾ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಕಿರಾಯಾ ತನ್ನ ಸಂಭಾವನೆಯನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.

  ಕಿಯಾರಾ ನಾಯಕಿಯಾಗಿ ನಟಿಸಿರುವ ಶೇರ್ ಷಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಯಕನಾಗಿ ಸಿದ್ಧಾರ್ಥ ಮಲ್ಹೋತ್ರ ಕಾಣಿಸಿಕೊಂಡಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ದಿವಂಗತ ಕ್ಯಾಪ್ಟರ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಪ್ರೇಯಸಿಯ ಪಾತ್ರದಲ್ಲಿ ನಟಿ ಕಿಯಾರಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಿಯಾರಾ ಮತ್ತು ಸಿದ್ಧಾರ್ಥ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

  ಶೇರ್ ಷಾ ಹಿಟ್ ಆಗುತ್ತಿದ್ದಂತೆ ಕಿಯಾರಾ ತನ್ನ ಮುಂಬರುವ ಸಿನಿಮಾಗಳಿಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕಿಯಾರಾ ಮುಂದಿನ ಸಿನಿಮಾಗಳಿಗೆ 5 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಅಂದಹಾಗೆ ಕಿಯಾರಾ ಸದ್ಯ ಚಿತ್ರವೊಂದಕ್ಕೆ 3 ರಿಂದ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಶೇರ್ ಷಾ ಸಕ್ಸಸ್ ಬಳಿಕ ತನ್ನ ಸಭಾವನೆಯನ್ನು 5 ಕೋಟಿ ರೂ.ಗೆ ಏರಿಸಿಕೊಂಡಿದ್ದಾರೆ. ಶೇರ್ ಷಾ ಸಕ್ಸಸ್ ಕಿಯಾರಾ ವೃತ್ತಿ ಬದುಕು ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರುವ ಕಿಯಾರಾ ಬೇಡಿಕೆ ಜೊತೆಗೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ.

  ಕಿಯಾರಾ ಸದ್ಯ ಬಹುನಿರೀಕ್ಷೆಯ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ 3ಡಿ ಸಿನಿಮಾಗೆ ಕಿಯಾರಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನು ಪ್ರಾರಂಭವಾಗಿಲ್ಲ. ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದ್ದು, ಕಿಯಾರಾಗೆ ಮತ್ತೆ ದಕ್ಷಿಣ ಭಾರತೀಯ ಸಿನಿಮಾರಂಗದ ಕಡೆ ಮುಖ ಮಾಡಲಿದ್ದಾರೆ.

  ಇನ್ನು ಶೇರ್ ಷಾ ಸಿನಿಮಾದ ಬಗ್ಗೆ ಹೇಳುವುದಾದರೆ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆ ಇತ್ತೀಚೆಗಷ್ಟೆ ಬಿಡುಗಡೆ ಆದ 'ಶೇರ್ಷಾ'ಗೆ ಪ್ರಾಪ್ತಿಯಾಗಿದೆ. ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ಈ ಖುಷಿಯ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

  'ಶೇರ್ಷಾ' ಸಿನಿಮಾವು ಭಾರತದ 4100ಕ್ಕೂ ಹೆಚ್ಚು ನಗರಗಳಲ್ಲಿ ಅಮೆಜಾನ್ ಪ್ರೈಂ ಮೂಲಕ ನೋಡಲ್ಪಟ್ಟಿದೆ. 210ಕ್ಕೂ ವಿವಿಧ ದೇಶಗಳಲ್ಲಿ ಜನರು ಅಮೆಜಾನ್ ಪ್ರೈಂ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಆ ಮೂಲಕ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಇದೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾಕ್ಕೆ ಐಎಂಬಿಡಿಯಲ್ಲಿ 10 ಕ್ಕೆ 8.9 ಅಂಕಗಳನ್ನು ನೀಡಲಾಗಿದೆ.

  English summary
  Bollywood Actress Kiara Advani hikes her remuneration after success of Shershah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X