For Quick Alerts
  ALLOW NOTIFICATIONS  
  For Daily Alerts

  ಈಕೆಯ ಅಂದ ಚೆಂದ ನೋಡಿ ಕ್ಯಾಮರಾ ಕೂಡ ನಾಚುತ್ತಿದೆ, ಯಾರು ಆಕೆ?

  |

  ಕೆಲವು ನಟಿಯರ ಫೋಟೋಗಳು ತಮಗೆ ಗೊತ್ತಿಲ್ಲದೆ ಕ್ಲಿಕ್ ಆಗಿರುತ್ತೆ. ಅದು ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗುತ್ತೆ. ಇದೀಗ, ನಟಿ ಕಿಯಾರಾ ಅಡ್ವಾಣಿ ಫೋಟೋಗಳು ಇಂಟರ್ ನೆಟ್ನಲ್ಲಿ ಸದ್ದು ಮಾಡ್ತಿದೆ.

  ಆಗಷ್ಟೆ ವರ್ಕೌಟ್ ಮುಗಿಸಿ ಜಿಮ್ ನಿಂದ ಹೊರಬಂದಿರುವ ಕಿಯಾರಾ, ಅಲ್ಲೆ ಇದ್ದ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಫಟ್ ಅಂತಹ ತಮ್ಮ ಕ್ಯಾಮರಾ ಕಣ್ಣಿನಿಂದ ಸೆರೆಹಿಡಿದಿರುವ ಕ್ಯಾಮರಾ ಮ್ಯಾನ್ ಈಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದ್ದಾರೆ.

  ಪದೇ ಪದೇ 'ಕಿಸ್' ಬಗ್ಗೆ ಪ್ರಶ್ನೆ ಕೇಳಿದ ರಿಪೋರ್ಟರ್ : ಶಾಹಿದ್ ಅಸಮಾಧಾನ ಪದೇ ಪದೇ 'ಕಿಸ್' ಬಗ್ಗೆ ಪ್ರಶ್ನೆ ಕೇಳಿದ ರಿಪೋರ್ಟರ್ : ಶಾಹಿದ್ ಅಸಮಾಧಾನ

  ಒಂದು ಕೈಯಲ್ಲಿ ಕೂಲ್ ಡ್ರಿಂಕ್ಸ್ ಇನ್ನೊಂದು ಕೈಯಲ್ಲಿ ತಮ್ಮ ಬ್ಯಾಗ್ ಇಟ್ಟುಕೊಂಡು ಕಾರಿನ ಬಳಿ ಬರುತ್ತಿರುವ ವೇಳೆ ಕೆಲವು ಫೋಟೋಗಳು ಕ್ಲಿಕ್ ಆಗಿವೆ. ಈ ಫೋಟೋ ಕಂಡ ಅಭಿಮಾನಿಗಳು ಪಡ್ಡೆ ಹೈಕ್ಳು 'ವಾಹ್' ಎಂದು ಕಣ್ಣರಳಿಸಿ ನೋಡುತ್ತಿದ್ದಾರೆ.

  ಬಾಲಿವುಡ್ನಲ್ಲಿ ಜರ್ನಿ ಆರಂಭಿಸಿದ್ದ ನಟಿ ಮಹೇಶ್ ಬಾಬು ಅವರ 'ಭರತ್ ಅನೇ ನೇನು' ಚಿತ್ರದ ಮೂಲಕ ಸೌತ್ ಕಡೆ ಬಂದಿದ್ದರು. ಬಳಿಕ ರಾಮ್ ಚರಣ್ ತೇಜ ಜೊತೆ 'ವಿನಯ ವಿಧೇಯ ರಾಮ' ಸಿನಿಮಾ ಮಾಡಿದ್ರು. ಆಮೇಲೆ ಮತ್ತೆ ಬಿಟೌನ್ ಕಡೆ ಹೆಜ್ಜೆಯಿಟ್ಟರು.

  'ಕಬೀರ್ ಸಿಂಗ್' ಸಿನಿಮಾ ಮಾಡಿ ಸಕ್ಸಸ್ ಕಂಡರು. ಸದ್ಯ ಕಿಯಾರಾ ಅಡ್ವಾಣಿ ಹೆಚ್ಚು ಬೇಡಿಕೆ ಹೊಂದಿರುವ ನಟಿಯರ ಸಾಲಿಗೆ ಸೇರಿದ್ದಾರೆ. ಕೈಯಲ್ಲಿ ನಾಲ್ಕೈದು ಹಿಂದಿ ಚಿತ್ರಗಳಿವೆ. ಜೊತೆ ತೆಲುಗಿನಲ್ಲಿ ವರುಣ್ ತೇಜ ಚಿತ್ರಕ್ಕೆ ಸಹಿ ಮಾಡಿದ್ದಾರೆ.

  English summary
  Bollywood Actress Kiara Advani's hot photos went to viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X