ಮಗಳ ನಾಮಕರಣ ಮಾಡಿದ 'ಟಾಕ್ಸಿಕ್' ನಟಿ ಕಿಯಾರಾ; ಆ ಹೆಸರಿನ ಅರ್ಥವೇನು?

ಬಾಲಿವುಡ್ ನಟಿ ಕಿಯಾರಾ ಅದ್ವಾನಿ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ. ಇದೇ ವರ್ಷದ ಮುದ್ದಾದ ಹೆಣ್ಣು ನಗುವಿಗೆ ಕಿಯಾರಾ ಜನ್ಮ ನೀಡಿದ್ದರು. ಈಗ ಮಗಳಿಗೆ ನಾಮಕರಣ ಮಾಡಿ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ದಂಪತಿ ತಮ್ಮ ಮಗಳ ಹೆಸರನ್ನು ಹಂಚಿಕೊಂಡಿದ್ದಾರೆ. "ನಮ್ಮ ಪ್ರಾರ್ಥನೆಗಳಿಂದ, ನಮ್ಮ ತೋಳುಗಳವರೆಗೆ.. ನಮ್ಮ ದೈವಿಕ ಆಶೀರ್ವಾದ, ನಮ್ಮ ರಾಜಕುಮಾರಿ" ಎಂದು ಕ್ಯಾಪ್ಷನ್ ಕೊಟ್ಟು ಮಗಳ ಕಾಲುಗಳನ್ನು ದಂಪತಿಉ ಕೈಯಲ್ಲಿ ಹಿಡಿದುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ.

Kiara Advani Reveals Daughter s Name She Makes Kannada Debut with Yash s Toxic

ಮಗಳಿಗೆ 'ಸರಾಯ ಮಲ್ಹೋತ್ರಾ' ಎಂದು ಕಿಯಾರಾ ನಾಮಕರಣ ಮಾಡಿದ್ದಾರೆ. 'ಸರಾಯ' ಅಂದರೆ ಹೀಬ್ರೂ/ಅರೇಬಿಕ್ ಭಾಷೆಯಲ್ಲಿ 'ರಾಜಕುಮಾರಿ' ಎನ್ನುವ ಅರ್ಥ ಇದೆ. ಫೆಬ್ರವರಿಯಲ್ಲಿ ಕಿಯಾರಾ ಗರ್ಭಿಣಿ ಆಗಿರುವ ಸಂಗತಿಯನ್ನು ಪತಿ ಸಿದ್ಧಾರ್ಥ್ ಹಂಚಿಕೊಂಡಿದ್ದರು. 3 ವರ್ಷಗಳ ಹಿಂದೆ ನಟ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಪ್ರೀತಿಸಿ ಹಸೆಮಣೆ ಏರಿದ್ದರು. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿಯಾಗಿ ಇಬ್ಬರ ವಿವಾಹ ಮಹೋತ್ಸವ ನಡೆದಿತ್ತು. ಜುಲೈ 16ರಂದು ದಂಪತಿ ಮನೆಗೆ ಮಗಳನ್ನು ಸ್ವಾಗತಿಸಿದ್ದರು.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಶೂಟಿಂಗ್ ಸಮಯದಲ್ಲೇ ಕಿಯಾರಾ ಗರ್ಭಿಣಿ ಎನ್ನುವ ವಿಚಾರ ಗೊತ್ತಾಗಿತ್ತು. ಅದೇ ಕಾರಣಕ್ಕೆ ಚಿತ್ರದ ಚಿತ್ರೀಕರಣವನ್ನು ಯಶ್ ಮುಂಬೈಗೆ ಶಿಫ್ಟ್ ಮಾಡಿದ್ದರು ಎಂದು ವರದಿಯಾಗಿತ್ತು. ಮಾರ್ಚ್ 19ಕ್ಕೆ ವಿಶ್ವದಾದ್ಯಂತ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ.

ಇದೇ ವರ್ಷ ಕಿಯಾರಾ ನಟನೆಯ 'ವಾರ್- 2' ಸಿನಿಮಾ ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಈ ವಿಚಾರವನ್ನು ಸ್ವತಃ ಚಿತ್ರದ ನಟ ಹೃತಿಕ್ ರೋಷನ್ ಒಪ್ಪಿಕೊಂಡಿದ್ದಾರೆ. ಮುಂಬೈನಲ್ಲಿ ಹುಟ್ಟಿಬೆಳೆದ ಕಿಯಾರಾ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಚಿತ್ರರಂಗದವರ ಜೊತೆ ಆಕೆಯ ಕುಟುಂಬದವರಿಗೆ ನಂಟು ಇತ್ತು. ಅಂದಹಾಗೆ ಕಿಯಾರಾ ನಿಜವಾದ ಹೆಸರು ಆಲಿಯಾ ಅದ್ವಾನಿ. ಅದಾಗಲೇ ಆಲಿಯಾ ಭಟ್ ಚಿತ್ರರಂಗದಲ್ಲಿ ಮಿಂಚುತ್ತಿದ್ದರು. ಸಲ್ಮಾನ್ ಖಾನ್ ಸಲಹೆ ಮೇರೆಗೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. 'ಅಂಜಾನ ಅಂಜಾನಿ' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಪಾತ್ರದ ಹೆಸರು ಕಿಯಾರಾ. ಅದರಿಂದ ಪ್ರೇರಣೆಗೊಂಡು ಹೆಸರು ಬದಲಿಸಿಕೊಂಡಿದ್ದರು.

11 ವರ್ಷಗಳ ಹಿಂದೆ ಬಂದಿದ್ದ 'ಫಗ್ಲಿ' ಚಿತ್ರದಲ್ಲಿ ಮೊದಲ ಬಾರಿಗೆ ಕಿಯಾರಾ ನಟಿಸಿದ್ದರು. ತಮ್ಮ ಗ್ಲಾಮರಸ್ ಪಾತ್ರಗಳ ಮೂಲಕ ಮೋಡಿ ಮಾಡುತ್ತಾ ಬರ್ತಿದ್ದಾರೆ. 'ಎಂ. ಎಸ್ ಧೋನಿ', 'ಲಸ್ಟ್ ಸ್ಟೋರೀಸ್', 'ಕಬೀರ್ ಸಿಂಗ್', 'ಶೇರ್‌ಷಾ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಭರತ್ ಅನೆ ನೇನು' ಸಿನಿಮಾ ಮೂಲಕ ಕಿಯಾರಾ ಸೌತ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಗೇಮ್‌ ಚೇಂಜರ್' ಚಿತ್ರದಲ್ಲಿ ಕೂಡ ಮಿಂಚಿದ್ದರು.

ಸದ್ಯ ಯಶ್ ಜೊತೆ 'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅದ್ವಾನಿ ನಟಿಸುತ್ತಿದ್ದು ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾದ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ರಾಕಿಂಗ್ ಸ್ಟಾರ್ ಯಶ್ ಕೂಡ ಸಹ ನಿರ್ಮಾಪಕರಾಗಿದ್ದಾರೆ.

ಕಿಯಾರಾ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದು ಆಪ್ತರು, ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಜಕ್ಕೂ ಒಳ್ಳೆಯ ಹೆಸರು. ಆಕೆ ರಾಜಕುಮಾರಿಯಂತೆ ಮೆರೆಯಲಿ ಎಂದು ಹಾರೈಸುತ್ತಿದ್ದಾರೆ. ಮನೀಷ್ ಮಲ್ಹೋತ್ರಾ, ಕರಣ್ ಜೋಹರ್ ಸೇರಿ ಹಲವರು ಕಾಮೆಂಟ್ ಮಾಡಿದ್ದಾರೆ.

More from Filmibeat

Read more about: kiara advani toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X