ಆಗ ಗೋಮಾಂಸ, ಈಗ ಪೋ*ರ್ನ್ ಬ್ಯಾನ್, ಮುಂದೆ; ಮತ್ತೆ ವಿವಾದ ಸೃಷ್ಟಿಸಿದ 'ಟಾಕ್ಸಿಕ್' ನಟಿ ಹೇಳಿಕೆ

ಸಿನಿಮಾ ತಾರೆಯರು ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅಂತ ಹೇಳಿಕೆಗಳು ಮತ್ತೆ ಮತ್ತೆ ಬಂದು ಕಾಡುತ್ತವೆ. ಆಗ ಗೋಮಾಂಸ ಹಾಗೂ ಪೋ*ರ್ನ್ ಬ್ಯಾನ್ ಬಗ್ಗೆ ನಟಿ ಕಿಯಾರಾ ಅದ್ವಾನಿ ಹೇಳಿಕೆ ವೈರಲ್ ಆಗಿ ಮತ್ತೆ ಟ್ರೋಲ್ ಆಗ್ತಿದೆ.

'ಟಾಕ್ಸಿಕ್' ಸೇರಿ ಕೆಲ ಸಿನಿಮಾಗಳಲ್ಲಿ ಕಿಯಾರ ಅದ್ವಾನಿ ನಟಿಸುತ್ತಿದ್ದಾರೆ. ಆದರೆ ಬಹಳ ಹಿಂದೆ ಆಕೆ ಕೊಟ್ಟಿದ್ದ ಹೇಳಿಕೆ ಈಗ ಹೊಸ ಚರ್ಚೆ ಹುಟ್ಟುಹಾಕಿದೆ. ಆ ಹೇಳಿಕೆ ಭಾರತದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಸೂಕ್ಷ್ಮತೆಯ ಬಗ್ಗೆ ಚರ್ಚೆಗೆ ಇಂಬು ನೀಡುತ್ತಿದೆ. ಬಹಳ ವರ್ಷಗಳ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಿಯಾರಾ ಈ ವಿಚಾರ ಕೆದಕಿದ್ದರು.

Kiara Advani s Old Beef and adult movie Ban Remark Resurfaces Sparks Fresh Social Media Debate

ಕೇಂದ್ರ ಸರ್ಕಾರ ದೇಶಾದ್ಯಂತ ಪೋ*ರ್ನ್ ವೆಬ್‌ಸೈಟ್‌ಗಳ ನಿರ್ಬಂಧಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಗೋಮಾಂಸ ಮಾರಾಟ ನಿಷೇಧಿಸಿ ಸಂದರ್ಭದಲ್ಲಿ ನಟಿ ಕಿಯಾರಾ ಅದ್ವಾನಿ ಈ ಹೇಳಿಕೆ ಕೊಟ್ಟಿದ್ದರು. ಆದರೆ ಕಿಯಾರಾ ಸಿನಿಮಾಗಳಲ್ಲಿ ಅಷ್ಟೇನು ನಟಿಸಿರಲಿಲ್ಲ. ಅಂದು ಆಕೆ ಕೊಟ್ಟಿದ್ದ ಹೇಳಿಕೆ ಈಗ ಮತ್ತೆ ಚರ್ಚೆಗೆಗ್ರಾಸವಾಗಿದೆ. ಆ ಹಳೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವುದು ಇದಕ್ಕೆ ಕಾರಣ.

ಆಗ ಸೋಶಿಯಲ್ ಮೀಡಿಯಾ ಇಷ್ಟು ಆಕ್ಟೀವ್ ಆಗಿ ಇರಲಿಲ್ಲ. ಸೆಲೆಬ್ರೆಟಿಗಳು ಹೀಗೆ ನೀಡುತ್ತಿದ್ದ ಹೇಳಿಕೆಗಳು ಹೆಚ್ಚು ಸದ್ದು ಮಾಡುತ್ತಿರಲಿಲ್ಲ. ಆದರೆ ಈಗ ಟ್ರೋಲ್ ಪ್ರವೃತ್ತಿ ಹೆಚ್ಚಾಗಿದೆ. ಅಂದು ಕಿಯಾರಾ ಮಾತನಾಡಿ "ಇದು ದುಃಖಕರ ಸಂಗತಿ. ಮೊನ್ನೆ ಗೋಮಾಂಸ ನಿಷೇಧ, ಈಗ ಪೋ*ರ್ನ್. ಹಾಗಾಗಿ ಮುಂದೇನು ಎಂದು ಯಾರಿಗೂ ತಿಳಿದಿಲ್ಲ. ಆದರೆ ಅದು ಪ್ರಜಾಪ್ರಭುತ್ವದ ಅರ್ಥವನ್ನು ಕಸಿದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದರು.

ಕಿಯಾರಾ ಈಗ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಆಕೆಯ ಹೇಳಿಕೆ ಬಗ್ಗೆ ಹೆಚ್ಚು ಚರ್ಚೆ ನಡೀತಿದೆ. ನೆಟ್ಟಿಗರು ಈ ಬಗ್ಗೆ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ಕಿಯಾರ ಅವರದ್ದು ರಾಷ್ಟ್ರವಿರೋಧಿ ಹೇಳಿಕೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈ ಬೆಡಗಿ ಕಿಯಾರಾ 12 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ್ದರು. 'ಫಗ್ಲಿ' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅದಕ್ಕೂ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ಎಂ. ಎಸ್ ಧೋನಿ ಚಿತ್ರದಲ್ಲಿ ಸಾಕ್ಷಿ ರಾವತ್ ಪಾತ್ರದಲ್ಲಿ ಕಿಯಾರಾ ಮೋಡಿ ಮಾಡಿದ್ದರು. 'ಲಸ್ಟ್ ಸ್ಟೋರಿಸ್' ಚಿತ್ರದಲ್ಲಿ ಆಕೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದರು. 'ಕಬೀರ್ ಸಿಂಗ್', 'ಭೂಲ್ ಭುಲೈಯಾ- 2', 'ಶೇರ್‌ಷಾ', 'ವಾರ್- 2' ಆಕೆ ನಟಿಸಿರುವ ಕೆಲ ಜನಪ್ರಿಯ ಚಿತ್ರಗಳು. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ 'ಟಾಕ್ಸಿಕ್' ಚಿತ್ರದ ಮೂಲಕ ಕಿಯಾರಾ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಯಶ್ ನಿರ್ಮಿಸಿ ನಟಿಸಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ನಡಿಯಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು 70-80ರ ದಶಕದ ಗ್ಯಾಂಗ್‌ಸ್ಟರ್ ಕಥಾಹಂದರ ಸಿನಿಮಾ. ಮಾರ್ಚ್ 19ಕ್ಕೆ 'ಟಾಕ್ಸಿಕ್' ಚಿತ್ರ ತೆರೆಗಪ್ಪಳಿಸಲಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಕೂಡ ತಾರಾಗಣದಲ್ಲಿದ್ದಾರೆ.

More from Filmibeat

Read more about: kiara advani toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X