For Quick Alerts
  ALLOW NOTIFICATIONS  
  For Daily Alerts

  ನೀರಿನೊಳಗೆ ಹಾಟ್ ಅವತಾರ ತಾಳಿದ ಕಿಯಾರಾ: ಬಿಕಿನಿ ಫೋಟೋ ವೈರಲ್

  |

  ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನೀರಿನೊಳಗೆ ಹಾಟ್ ಅವತಾರ ತಾಳಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ಮೂಲಕ ಸುದ್ದಿಯಲ್ಲಿರುತ್ತಿದ್ದ ನಟಿ ಕಿಯಾರಾ ಇದೀಗ ಬಿಕಿನಿ ಧರಿಸಿ ಸದ್ದು ಮಾಡುತ್ತಿದ್ದಾರೆ.

  ನಟಿ ಕಿಯಾರಾ ಇತ್ತೀಚಿಗೆ ಅಂಡರ್ ವಾಟರ್ ಬಿಕಿನಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಬಿಕಿನಿ ಧರಿಸಿರುವ ಕಿಯಾರಾ ನೀರಿನೊಳಗೆ ಮಸ್ತ್ ಪೋಸ್ ನೀಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

  ಬಿಕಿನಿ ಫೋಟೋ ಹಂಚಿಕೊಂಡು 'ಅಲೆಗಳನ್ನು ತಡೆಯಲು ಸಾಧ್ಯವಿಲ್ಲ ಆದರೆ ಈಜುವುದನ್ನು ಕಲಿಯಬಹುದು' ಎಂದು ಕ್ಯಾಪ್ಷನ್ ನೀಡಿದ್ದಾರೆ. ಕೊರೊನಾ ನಡುವೆಯೂ ಕಿಯಾರಾ ಪ್ರವಾಸ ಎಂಜಾಯ್ ಮಾಡುತ್ತಿದ್ದಾರಾ ಎಂದು ಅಚ್ಚರಿ ಪಡಬೇಡಿ. ಇದು ಹಳೆಯ ಫೋಟೋ ಎಂದು ಹೇಳಿಕೊಂಡಿದ್ದಾರೆ.

  ಆದರೆ ಈ ಫೋಟೋ ಎಲ್ಲಿ ಕ್ಲಿಕ್ ಮಾಡಿರುವುದು ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಈ ವರ್ಷದ ಪ್ರಾರಂಭದಲ್ಲಿ ಕಿಯಾರಾ ರೂಮರ್ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಆ ಸಮಯದ ಫೋಟೋ ಇರಬಹುದು ಎನ್ನಲಾಗುತ್ತಿದೆ.

  ನಟಿ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಹಿಂದೆ ಸಂದರ್ಶವೊಂದರಲ್ಲಿ ನಟಿ ಕಿಯಾರಾಗೆ ಸಿದ್ಧಾರ್ಥ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದರು. ಆದರೆ ಇಬ್ಬರೂ ಒಟ್ಟಿಗೆ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ.

  ಸಮಾಜ ಸೇವೆ ಹೆಸರಲ್ಲಿ ಉಪೇಂದ್ರ ಜಾತಿ ಪ್ರೀತಿ ಮೆರೆದಿದ್ದಾರೆ ಅಂದ್ರು ಚೇತನ್ | Filmibeat Kannada

  2014ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಕಿಯಾರಾ ಎಂ.ಎಸ್ ದೋನಿ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ಬಳಿಕ ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ಭರತ್ ಅನೆ ನೇನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿದೆ. ಕೊನೆಯದಾಗಿ ಕಿಯಾರಾ ಕಳೆದ ವರ್ಷ ಲಕ್ಷ್ಮಿ ಮತ್ತು ಇಂದೂ ಕಿ ಜವಾನಿ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕಿಯಾರಾ ಬ್ಯುಸಿಯಾಗಿದ್ದಾರೆ.

  English summary
  Actress Kiara Advani shares throwback under water photo, goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X