ಸಿದ್ಧಾರ್ಥ್-ಕಿಯಾರಾ ಮದುವೆಯಲ್ಲಿ ಹಲವು ವಿಶೇಷತೆಗಳು, 100 ಬಗೆಯ ಖಾದ್ಯ, 500 ಅಡುಗೆ ಭಟ್ಟರು!

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಮದುವೆಗಳು ಅವರ ಸಿನಿಮಾಗಳಂತೆಯೇ ಅದ್ಧೂರಿ. ಆಲಿಯಾ-ರಣ್ಬೀರ್, ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ಇನ್ನೂ ಇತ್ತೀಚೆಗೆ ಮದುವೆಯಾದ ಹಲವು ನಟ-ನಟಿಯರು ಅದ್ಧೂರಿಯಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೈಪುರದ ಅದ್ಧೂರಿ ಹೋಟೆಲ್‌ಗಳಲ್ಲಿ ವಾರಗಟ್ಟಲೆ ಮದುವೆ ಸಮಾರಂಭ ನಡೆಸುವುದು ಇತ್ತೀಚೆಗೆ ಬಾಲಿವುಡ್‌ಗೆ ಕಾಮಸ್ ಆಗಿಬಿಟ್ಟಿದೆ. ಅನುಷ್ಕಾ ಶೆಟ್ಟಿ-ವಿರಾಟ್ ಕೊಹ್ಲಿ ಅವರಂತೂ ವಿದೇಶದಲ್ಲಿ ಮದುವೆ ಆಗಿ ಹೆವೀ ಶ್ರೀಮಂತಿಕೆ ಪ್ರದರ್ಶಿಸಿದ್ದರು.

ಇದೀಗ ಬಾಲಿವುಡ್‌ನ ಯುವಜೋಡಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾಗುತ್ತಿದ್ದು, ಇವರೂ ಸಹ ಬಾಲಿವುಡ್‌ನ ಇತರ ಜೋಡಿಗಳಂತೆ ಭಾರಿ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಬಾಲಿವುಡ್‌ಗೆ ಮದುವೆಯ ತವರಾಗಿರುವ ಜೈಪುರದಲ್ಲಿಯೇ ಇವರ ವಿವಾಹ ನಡೆಯುತ್ತಿದೆ.

Kiara Advani Sidharth Malhotra Wedding Menu Has 100 Dishes

ಜೈಪುರದ ಸೂರ್ಯಗ್ರಹ ಅರಮನೆಯಲ್ಲಿ ಫೆಬ್ರವರಿ 5 ರಿಂದಲೂ ಕಿಯಾರಾ-ಸಿದ್ಧಾರ್ಥ್ ವಿವಾಹ ನಡೆಯುತ್ತಿದೆ. ಈ ಜೋಡಿಯ ವಿವಾಹವು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಇಡೀ ಅರಮನೆಯನ್ನು ಹೂವಿನ ರಂಗೋಲೆಗಳು, ಹೂಮಾಲೆಗಳಿಂದ ಅಲಂಕೃತಗೊಳಿಸಲಾಗಿದೆ. ಸತತ ಎರಡು ದಿನ ಸಂಗೀತ್ ಕಾರ್ಯಕ್ರಮ ನಡೆದಿದ್ದು, ದೇಶ ಹಾಗೂ ವಿದೇಶದ ಗಾಯಕರು ಸಹ ಸಂಗೀತ್‌ನಲ್ಲಿ ಪಾಲ್ಗೊಂಡು ಅತಿಥಿಗಳನ್ನು ಹಾಡಿ ರಂಜಿಸಿದ್ದಾರೆ.

ಈ ವಿವಾಹದಲ್ಲಿ ಭೋಜನ ವ್ಯವಸ್ಥೆಯ ಬಗ್ಗೆ ವಿಶೇಷ ಕಾಳಜಿವಹಿಸಲಾಗಿದೆ. ಸ್ವತಃ ಪಂಜಾಬಿ ಆಗಿರುವ ನಟ ಸಿದ್ಧಾರ್ಥ್ ಮಲ್ಹೋತ್ರಾ ಅತಿಥಿಗಳಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಿಸಿದ್ದಾರೆ. ಪಂಜಾಬಿ, ಗುಜರಾತಿ, ದಕ್ಷಿಣ ಭಾರತ ತಿನಿಸುಗಳು ಸೇರಿದಂತೆ ಇಟಾಲಿಯನ್, ಅಮೆರಿಕನ್, ಚೈನೀಸ್, ಥಾಯ್ ಇನ್ನೂ ಹಲವು ದೇಶಗಳ ವಿಶಿಷ್ಟ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಗುತ್ತಿದೆ.

ಹಲವು ರಾಜ್ಯಗಳ ಪರಿಣಿತ ಅಡುಗೆ ಭಟ್ಟರ ಜೊತೆಗೆ ವಿದೇಶಿ ಶೆಫ್‌ಗಳು ಸಹ ಆಗಮಿಸಿ ವಿಶೇಷ ಖಾದ್ಯಗಳನ್ನು ತಯಾರಿಸಿದ್ದಾರೆ. ಸುಮಾರು 500 ಮಂದಿ ವೇಯಿಟರ್‌ಗಳನ್ನು ಅತಿಥಿಗಳ ಕ್ಷೇಮ ಕುಶಲ ವಿಚಾರಿಸಿ ಅವರಿಗೆ ಆಹಾರ ಬಡಿಸಲೆಂದೇ ನಿಯೋಜಿಸಲಾಗಿದೆಯಂತೆ. ಸುಮಾರು 50 ಕ್ಕೂ ಹೆಚ್ಚು ವಿವಿಧ ಬಗೆಯ ಫುಡ್ ಸ್ಟಾಲ್‌ಗಳನ್ನು ಸಹ ಹಾಕಲಾಗಿದೆಯಂತೆ.

ಇನ್ನು ಪಂಜಾಬಿ ಮದುವೆಯಾದ್ದರಿಂದ ಮದ್ಯ ಸಮಾರಾಧನೆಯೂ ಜೋರಾಗಿಯೇ ಇದ್ದು, ವಿದೇಶಿ ಬ್ರ್ಯಾಂಡ್‌ನ ಮದ್ಯದ ಭರಪೂರ ಸರಬರಾಜು ನಡೆಯುತ್ತಿದೆಯಂತೆ.

ಅತಿಥಿಗಳ ಸುರಕ್ಷತೆ ಹಾಗೂ ಖಾಸಗಿತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಶಾರುಖ್ ಖಾನ್‌ಗೆ ಭದ್ರತೆ ಒದಗಿಸುವ ಖಾಸಗಿ ಸಂಸ್ಥೆ, ಕಿಯಾರಾ-ಸಿದ್ಧಾರ್ಥ್ ವಿವಾಹಕ್ಕೆ ಭದ್ರತೆ ಒದಗಿಸಿದೆ. ಮದುವೆಯಲ್ಲಿ ನೋ ಫೋನ್ ನಿಯಮವನ್ನು ಸಹ ಅತಿಥಿಗಳ ಮೇಲೆ ಹೇರಲಾಗಿದೆ.

More from Filmibeat

English summary
Kiara Advani and Sidharth Malhotra wedding menu has 100 dishes. 500 waiters and 50 stalls at wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X