ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಹುಬೇಡಿಕೆಯ ಹೀರೋಯಿನ್..!

ಅದೃಷ್ಟ ಎಂಬುದು ಯಾರ್ಯಾರ ಬದುಕಿನಲ್ಲಿ ಏನೇನು ಆಟ ಆಡಿದೆ ಎಂಬುದನ್ನು ನೋಡಿದರೆ ಸೋಜಿಗವೆನಿಸದೇ ಇರದು. ಉದಾಹರಣೆಗೆ ಕಿಯಾರಾ ಅಡ್ವಾಣಿಯನ್ನೇ ತೆಗೆದುಕೊಳ್ಳಿ.

ಹೌದು.. ಸರಿಯಾಗಿ ಒಂದು ದಶಕದ ಹಿಂದೆ ಪುಗ್ಲಿ ಚಿತ್ರದ ಮೂಲಕ, ಚಿತ್ರರಂಗಕ್ಕೆ ಬಂದ ಕಿಯಾರಾ, ಎಂ.ಎಸ್. ಧೋನಿ ಚಿತ್ರದ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದಾದ ಮೇಲೊಂದರಂತೆ ಚಿತ್ರಗಳನ್ನ ಮಾಡ್ತಾನೇ ಬಂದರು. ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರಿದರು.

kiara-advanis-pre-bollywood-journey-from-nursery-school-teacher-to-silver-screen-star

ಇವತ್ತು, ಕಿಯಾರಾ ಅಡ್ವಾಣಿ ಬಾಲಿವುಡ್ ನ ಬಹುಬೇಡಿಕೆಯ ನಟಿ. ಕೇವಲ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ, ಸೌತ್ ಫಿಲ್ಮ್ ಇಂಡಸ್ಟ್ರೀಯಲ್ಲಿಯೂ ಕಿಯಾರಾಗೆ ಚಿನ್ನದಂತಹ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಆ ಕಾಲದಲ್ಲಿಯೇ, ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡ ಕಿಯಾರಾ, ರಾಮ್ ಚರಣ್ ತೇಜಾ ಅಭಿನಯದ ಗೇಮ್ ಚೆಂಜರ್ ಚಿತ್ರಕ್ಕೂ ನಾಯಕಿ.

ಇಂಥ ಕಿಯಾರಾ ಅಡ್ವಾಣಿ.. ಚಿತ್ರರಂಗಕ್ಕೆ ಬರುವ ಮುನ್ನ, ಮಕ್ಕಳ ಡೈಪರ್ ಗಳನ್ನೂ ಬದಲಾಯಿಸುತ್ತಿದ್ದರು ಎಂದರೆ ಎಂಥವರಿಗಾದರೂ. ಆಶ್ಚರ್ಯವಾಗುತ್ತದೆ. ಆದರೆ ಇದು ಸತ್ಯ. ಖುದ್ದು ಕಿಯಾರಾ ಅಡ್ವಾಣಿಯೇ ಈ ವಿಚಾರವನ್ನ ಹೆಮ್ಮೆಯಿಂದ ಹೇಳಿದ್ದಾರೆ.

kiara-advanis-pre-bollywood-journey-from-nursery-school-teacher-to-silver-screen-star

ಹೌದು..ಇತ್ತೀಚೆಗೆ ರೇಡಿಯೋ ಸಿಟಿಗೆ ನೀಡಿದ ಸಂದರ್ಶನದಲ್ಲಿ, ಮನ ಬಿಚ್ಚಿ ಮಾತನಾಡಿರುವ ಕಿಯಾರಾ ಅಡ್ವಾಣಿ.. ಚಿತ್ರರಂಗಕ್ಕೆ ಬರುವ ಮೊದಲು, ಪ್ರಿಸ್ಕೂಲ್‌ ನಲ್ಲಿ ನರ್ಸರಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದೆ ಎಂದಿದ್ದಾರೆ. ವಿಶೇಷ ಅಂದರೆ ಈ ಶಾಲೆಯನ್ನ, ಬೇರೆ ಯಾರು ಬದಲಿಗೆ ಕಿಯಾರಾ ಅವರ ತಾಯಿಯೇ ನಡೆಸುತ್ತಿದ್ದರು. ತಮ್ಮ ತಾಯಿಯ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ಕಿಯಾರಾ ಮಕ್ಕಳಿಗೆ ನರ್ಸರಿ ರೈಮ್ಸ್ ಹೇಳಿಕೊಡುವುದಲ್ಲದೆ ಮಕ್ಕಳ ಡೈಪರ್ ಗಳನ್ನೂ ಬದಲಾಯಿಸುವ ಕೆಲಸವನ್ನ ಮಾಡಿದ್ದಾರೆ. ಈ ಅನುಭವ.. ಕಬೀರ್ ಸಿಂಗ್ ಮತ್ತು ಗುಡ್ ನ್ಯೂಸ್ ಚಿತ್ರಗಳ ಸಮಯದಲ್ಲಿ ಉಪಯೋಗಕ್ಕೆ ಬಂತು ಎಂದಿರುವ ಕಿಯಾರಾ, ನನಗೆ ಮಕ್ಕಳೆಂದರೆ ಸಿಕ್ಕಾಪಟ್ಟೆ ಇಷ್ಟವೆಂದು ಕೂಡ ಹೇಳಿದ್ದಾರೆ

ಸಂದರ್ಶನದಲ್ಲಿ ತಮ್ಮ ಆ ಗಲಕಾಲದ ದಿನಗಳನ್ನ ಮೆಲುಕು ಹಾಕಿರುವ ಕಿಯಾರಾ, ನಾನು ಬೆಳಿಗ್ಗೆ 7 ಗಂಟೆಗೆ ಪ್ರಿ-ಸ್ಕೂಲಿಗೆ ಹೋಗುತ್ತಿದ್ದೆ, ಮಕ್ಕಳನ್ನು ನೋಡಿಕೊಳ್ಳಲು ಅಲ್ಲಿಯೇ ಇರುತ್ತಿದ್ದೆ ಎಂದಿದ್ದಾರೆ. ಮಕ್ಕಳ ನಿರ್ವಹಣೆ ವಿಷಯದಲ್ಲಿ ನಾನು ಎಲ್ಲವನ್ನೂ ಮಾಡಿದ್ದೇನೆ ಎಂದಿರುವ ಕಿಯಾರಾ, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿರುವ ತೃಪ್ತಿ ನನಗೆ ಇವತ್ತು ಕೂಡ ಇದೆ ಎಂದಿದ್ದಾರೆ.

kiara-advanis-pre-bollywood-journey-from-nursery-school-teacher-to-silver-screen-star

ಸದ್ಯಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಪ್ತಪದಿಯನ್ನ ತುಳಿದು, ಸುಖಿ ಸಂಸಾರವನ್ನ ನಡೆಸುತ್ತಿರುವ ಕಿಯಾರಾ ಅಡ್ವಾಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರೆ ಅನ್ನುವ ಸುದ್ದಿ ಇದೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜಾ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ಕಿಯಾರಾ ಅಡ್ವಾಣಿ ಟಾಕ್ಸಿಕ್ ಚಿತ್ರದ ನಾಯಕಿ ಎಂದೇ ಎಲ್ಲರು ಅಂದುಕೊಂಡಿದ್ದಾರೆ. ಯಶ್ ಮತ್ತು ಕಿಯಾರಾ ಕೆಮೆಸ್ಟ್ರೀ ಬೆಳ್ಳಿತೆರೆಯ ಮೇಲೆ ಜಾದೂ ಮಾಡುವುದು ಪಕ್ಕಾ ಅನ್ನುವ ಭವಿಷ್ಯವನ್ನೂ ಅನೇಕರು ನುಡಿಯುತ್ತಿದ್ದಾರೆ. ಭವಿಷ್ಯ ನಿಜವಾಗುತ್ತಾ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
Kiara Advani's Unexpected Start: From Changing Diapers in Preschool to Rising Stardom. Here Is Journey Of MS Dhoni Actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X