For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟರ್ಸ್ ಮುಂದೆ ಹಾಜರ್ ಆದ ಸುದೀಪ್, ಸಲ್ಮಾನ್ ಭಾಯ್.!

  |

  ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್, ವಿಲನ್ ಬಲಿ ಸಿಂಗ್ ಆಗಿ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 20 ರಂದು 'ದಬಾಂಗ್-3' ನಿಮ್ಮೆಲ್ಲರ ಎದುರಿಗೆ ಬರಲಿದೆ.

  ಸದ್ಯ 'ದಬಾಂಗ್-3' ಚಿತ್ರದ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಸಿನಿಮಾದ ಪ್ರಮೋಷನ್ ಗಾಗಿ ಕಪಲ್ ಶರ್ಮಾ ಶೋನಲ್ಲಿ ಇತ್ತೀಚೆಗಷ್ಟೆ 'ದಬಾಂಗ್-3' ಚಿತ್ರತಂಡ ಪಾಲ್ಗೊಂಡಿತ್ತು. ಇದೀಗ ಕ್ರಿಕೆಟರ್ಸ್ ಮುಂದೆ ಸುದೀಪ್ ಮತ್ತು ಸಲ್ಮಾನ್ ಭಾಯ್ ಹಾಜರ್ ಆಗಿದ್ದಾರೆ.

  ಕ್ರಿಕೆಟರ್ಸ್ ಜೊತೆಗೆ ಬ್ಯಾಟ್ ಹಿಡಿದು ಸುದೀಪ್ ಮತ್ತು ಸಲ್ಮಾನ್ ಖಾನ್ ಫೀಲ್ಡ್ ಗೆ ಇಳಿಯುತ್ತಾರಾ ಅಂತ ಕೇಳ್ಬೇಡಿ. ಯಾಕಂದ್ರೆ, ಕ್ರಿಕೆಟರ್ಸ್ ಜೊತೆಗೆ ಸಲ್ಮಾನ್ ಖಾನ್ ಮತ್ತು ಸುದೀಪ್ ಮಾತುಗಳ ಸಿಕ್ಸರ್ ಮಾತ್ರ ಬಾರಿಸಿದರು.

  ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ

  ಹೌದು, 'ದಬಾಂಗ್-3' ಚಿತ್ರದ ಪ್ರಚಾರಕ್ಕಾಗಿ ಸುದೀಪ್ ಮತ್ತು ಸಲ್ಮಾನ್ ಖಾನ್ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡರು. ಕ್ರಿಕೆಟರ್ ಇರ್ಫಾನ್ ಪಠಾಣ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಕ್ರಿಕೆಟ್ ದಿಗ್ಗಜರ ಜೊತೆಗೆ ಮಾತುಕತೆ ನಡೆಸುತ್ತಾ, ತಮ್ಮ ಚಿತ್ರದ ಪ್ರಮೋಷನ್ ಕಾರ್ಯವನ್ನು ಮಾಡಿಕೊಟ್ಟರು.

  'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

  ಅಂದ್ಹಾಗೆ, ಹಿಂದಿಯ 'ದಬಾಂಗ್-3' ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರಲಿದೆ. ಅದನ್ನ ನೋಡಲು ನೀವು ರೆಡಿನಾ.?

  English summary
  Kiccha Sudeep and Salman Khan in Star Sports Studio for Dabangg 3 Promotions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X