ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಆಯೋಜಿಸಿರುವ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲನೆ ನೀಡಿದ್ದಾರೆ. ಐಎಫ್‌ಎಫ್ 2023ರ 29 ನೇ ಆವೃತ್ತಿಯು ಡಿಸೆಂಬರ್ 5 ರಿಂದ 12ರ ವರೆಗೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಅನಿಲ್ ಕಪೂರ್, ಶತ್ರುಘ್ನ ಸಿನ್ಹಾ ಮತ್ತು ಇತರ ನಟ ನಟಿಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕಲಾವಿದರೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ಮಮತಾ ಬ್ಯಾನರ್ಜಿ, ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಡ್ಯಾನ್ಸ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (KIFF 2023) ವೇದಿಕೆಯಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಅನಿಲ್ ಕಪೂರ್, ಶತ್ರುಘ್ನ ಸಿನ್ಹಾ, ಸೌರವ್ ಗಂಗೂಲಿ, ರಾಜ್ ಚಕ್ರವರ್ತಿ, ಲಾಕೆಟ್ ಚಟರ್ಜಿ ಮತ್ತು ಇತರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಜೊತೆಗೆ 'ಕೆಐಎಫ್‌ಎಫ್' ಥೀಮ್ ಸಾಂಗ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೆಐಎಫ್‌ಎಫ್ 2023 ರಲ್ಲಿ ಸಲ್ಮಾನ್ ಖಾನ್ ಮಾತು
ಸಲ್ಮಾನ್ ಖಾನ್ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2023 ರಲ್ಲಿ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು. ವೇದಿಕೆಯಲ್ಲಿ ಮಾತನಾಡಲು ಆರಂಭಿಸಿದ ತಕ್ಷಣ ಅಭಿಮಾನಿಗಳು ಕೂಗಲು ಪ್ರಾರಂಭಿಸಿದ್ದರು. ಈ ವೇಳೆ ತಮ್ಮ ಫ್ಯಾನ್ಸ್ ಮೇಲೆ ಸಲ್ಮಾನ್ ಖಾನ್ ಪ್ರೀತಿಯಿಂದ " ಹಿಂಗೆ ಕೂಗುತ್ತಾ ಇರಿ, ನನಗೆ ಮಾತನಾಡಲು ಅವಕಾಶ ಕೊಡಬೇಡಿ" ಎಂದು ಹೇಳಿದರು.

"ನಾನು ನೋಡಿದ ಅತಿ ದೊಡ್ಡ ಚಿತ್ರೋತ್ಸವಗಳಲ್ಲಿ ಇದೂ ಒಂದು. ಮಮತಾ ಬ್ಯಾನರ್ಜಿ ಅವರ ಮನೆಗೆ ಭೇಟಿ ನೀಡಿದಾಗ ನನ್ನ ಮನೆಯಿಂದ ಅವರ ಮನೆ ಎಷ್ಟು ಚಿಕ್ಕದಾಗಿದೆ ಎಂದು ನೋಡಿದೆ. ನನಗೆ ಅವರ ಬಗ್ಗೆ ಅಸೂಯೆ ಆಗುತ್ತಿದೆ. ಅವರ ಸ್ಥಾನದಲ್ಲಿರುವವರು ಇಷ್ಟು ಸಣ್ಣ ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುದೇ ನನಗೆ ಆಶ್ಚರ್ಯ!" ಎಂದು ಮಾತನಾಡಿದ್ದಾರೆ.
ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2023
ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು 1995 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ, ಇದು ಸತ್ಯಜಿತ್ ರೇ, ಋತ್ವಿಕ್ ಘಾಟಕ್, ಮೃಣಾಲ್ ಸೇನ್ ಮತ್ತು ಜಾಗತಿಕ ಚಲನಚಿತ್ರಕ್ಕೆ ಗಣನೀಯ ಕೊಡುಗೆ ನೀಡಿದ ಬಂಗಾಳದ ಇತರ ದಿಗ್ಗಜ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 29 ನೇ ಆವೃತ್ತಿಯು ಡಿಸೆಂಬರ್ 5 ರಿಂದ 12 ರವರೆಗೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ.


Click it and Unblock the Notifications











