Kili Paul Kgf 2 Dialogue: ಯಶ್ ಡೈಲಾಗ್ ಹೊಡೆದ ಕಿಲಿಪೌಲ್, ವಿಡಿಯೋ ವೈರಲ್!

ಎಲ್ಲೆಲ್ಲೂ 'ಕೆಜಿಎಫ್ 2' ಹವಾ ಜೋರಾಗಿದೆ. ಯಶ್ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದವರು ಯಶ್ ಡೈಲಾಗ್ ಹೊಡೆದು ಬೀಗುತ್ತಾ ಇದ್ದಾರೆ. ಈಗ ಕೆಜಿಎಫ್ 2 ಹವಾ ಆಫ್ರಿಕಾಗೂ ತಲುಪಿದೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಕಿಲಿ ಪೌಲ್ ಪರಿಚಯ ನಿಮಗೂ ಇರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟಿವ್ ಆಗಿರುವ ಕಿಲಿ ಪಾಲ್ ಸದಾ ಒಂದಿಲ್ಲಾ ಒಂದು ವಿಡಿಯೋಗಳ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಈಗ 'ಕೆಜಿಎಫ್ 2' ಡೈಲಾಗ್‌ ಹೊಡೆದು ಸುದ್ದಿ ಆಗಿದ್ದಾರೆ.

'ಕೆಜಿಎಫ್ 2' ಚಿತ್ರದಲ್ಲಿ ಯಶ್ ಹೊಡೆ ಡೈಲಾಗ್ ಹೊಡೆದಿದ್ದಾರೆ. ಈ ವಿಡಿಯೋ ಈಗ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಅದರಲ್ಲೂ ಕಿಲಿ ಪೌಲ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿ ಇದೆ. ಸ್ಟೈಲಿಶ್ ಕಾಸ್ಟ್ಯೂಮ್‌ನಲ್ಲಿ ಕಿಲಿಪೌಲ್ ಯಶ್ ಡೈಲಾಗ್ ಹೊಡೆದಿದ್ದಾರೆ.

Kili Paul Act For Yash Dialogue From Kgf Chapter 2, Video Viral

'ಕೆಜಿಎಫ್ 2' ಟ್ರೈಲರ್‌ನಲ್ಲಿ ಯಶ್ ಹೇಳಿದ ವೈಲೆನ್ಸ್ ಡೈಲಾಗ್ ಆಯ್ಕೆ ಮಾಡಿಕೊಂಡ ಕಿಲಿ ಪೌಲ್, ಆ್ಯಕ್ಷನ್ ಜೊತೆಗೆ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅದರಲ್ಲೂ ಈ ವಿಡಿಯೋವನ್ನು ಪೌಲ್ ತನ್ನ ಸಾಂಪ್ರದಾಯಿಕ, ಬುಡಕಟ್ಟು ಉಡುಪಿಗೆ ಬದಲಾಗಿ ಸೂಟ್ ಧರಿಸಿದ್ದಾರೆ. ಜೊತೆಗೆ ತುಂಬಾನೆ ಸ್ಟೈಲಿಶ್ ಆ್ಯಕ್ಷನ್ ಮಾಡುವುದರ ಜೊತೆಗೆ, ಯಶ್ ಮಾದರಿಯಲ್ಲೇ ವೈಲೆನ್ಸ್, ವೈಲೆನ್ಸ್ ಎನ್ನುವ ಡೈಲಾಗ್ ಹೇಳಿದ್ದಾರೆ.

ಈ ವೀಡಿಯೊಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಒಂದು ದಿನದಲ್ಲಿ ಈ ಪೋಸ್ಟ್‌ 2.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಿಲಿ ಪೌಲ್ ಪ್ರತಿಭೆ ಮತ್ತು ನಟನಾ ಕೌಶಲ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವವರು "ತಂಜಾನಿಯಾದಿಂದ ಸಹೋದರ K.G.F 3" ಎಂದು ಬರೆದಿದ್ದಾರೆ. "ವಾವ್ಹ್, ತುಂಬಾ ಸುಂದರವಾಗಿ ಕಾಣುತ್ತಿದೆ." ಮತ್ತೊಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ. ಮೂರನೇ ಕಾಮೆಂಟ್‌ನಲ್ಲಿ, "ನಿಮಗೆ ಬಾಲಿವುಡ್‌ನಿಂದ ಶೀಘ್ರದಲ್ಲೇ ಕರೆ ಬರುತ್ತದೆ. ನಾನು ಆಡಿದ ಮಾತಿನ ಬಗ್ಗೆ ಗಮನವಿರಲು " ಎಂದು ಬರೆದಿದ್ದಾರೆ.

Kili Paul Act For Yash Dialogue From Kgf Chapter 2, Video Viral

ಆಫ್ರಿಕಾದ ಖ್ಯಾತ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ 'ಕೆಜಿಎಫ್ 1' ಹಾಡಿಗೆ ಡಾನ್ಸ್ ಮಾಡಿದ್ದರು. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಿಲಿ ಡ್ಯಾನ್ಸ್ ನೋಡಿ ಯಶ್ ಅಭಿಮಾನಿಗಳು ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಸಿನಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದರು.

ಆಫ್ರಿಕಾದ ಕಿಲಿ ಪೌಲ್ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. 3.5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ ಕಿಲಿ ಪೌಲ್. ಇವರ ಎಲ್ಲಾ ವಿಡಿಯೋಗಳನ್ನು ಸದಾ ಭಾರೀ ಟ್ರೆಂಡಿಂಗ್‌ನಲ್ಲಿ ಇವೆ.

More from Filmibeat

English summary
Kili Paul Act For Yash Dialogue From Kgf Chapter 2 With New Costume, Video Went Viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X