'ಭೂಲ್ ಭುಲೈಯಾ 2' ಸಿನಿಮಾದ ಟೈಟಲ್ ಟ್ರಾಕ್‌ಗೆ ಕಿಲಿ ಪೌಲ್ ಮಸ್ತ್ ಡ್ಯಾನ್ಸ್
ಸೌತ್ ಆಫ್ರಿಕಾದ ತಾಂಜೇನಿಯ ಮೂಲದ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಕಿಲಿ ಪೌಲ್ ಭಾರೀ ಸುದ್ದಿಯಲ್ಲಿದ್ದಾರೆ. ಭಾರತದ ಸಿನಿಮಾ ಹಾಡುಗಳನ್ನು ಮೆಚ್ಚಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಸಖತ್ ಫೇಮಸ್ ಆಗಿದ್ದರು.
ಈಗ ಮತ್ತೊಂದು ಬಾಲಿವುಡ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಸ್ಟೆಪ್ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ನಟಿಸಿರುವ 'ಭೂಲ್ ಭುಲೈಯಾ 2' ಸಿನಿಮಾದ ಟೈಟಲ್ ಟ್ರಾಕ್‌ಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತದ ಸಿನಿಮಾ ಹಾಡುಗಳನ್ನು ಲಿಂಪ್ ಸಿಂಕ್ ಮಾಡುವ ಮೂಲಕ ಹಾಗೂ ಭರ್ಜರಿಯಾಗಿ ಆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕಿಲಿಪೌಲ್ ಭಾರತೀಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ 'ಭೂಲ್ ಭುಲೈಯಾ 2' ಸಿನಿಮಾದ ಟೈಟಲ್ ಟ್ರಾಕ್ ಹೆಜ್ಜೆ ಹಾಕುವ ಮೂಲಕ ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಕಿಲಿ ಪೌಲ್ ಡ್ಯಾನ್ಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಫ್ಯಾನ್ಸ್ ಆಗಿದ್ದಾರೆ. ಅವರ ವಿಭಿನ್ನ ಕಾಸ್ಟೂಮ್ಸ್ ಮೂಲಕ ಭಾರತೀಯ ಸಿನಿಮಾಗಳ ಹಾಡನ್ನು ರೀಲ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಸದ್ಯ ಈಗ 'ಭೂಲ್ ಭುಲೈಯಾ' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವುದನ್ನು ನೋಡಿದ ನೆಟ್ಟಿಗರು, ಕಿಲಿಪೌಲ್ ಡ್ಯಾನ್ಸ್‌ಗೆ ಫಿದಾ ಆಗಿ ಬಿಟ್ಟಿದ್ದಾರೆ. ಅಲ್ಲದೆ ನೀನು ಒಬ್ಬ ಉತ್ತಮ ನೃತ್ಯಗಾರ, 'ಕಿಲ್ಲಿಂಗ್ ಇಟ್' ಹಾಗೂ 'ಸೋ ಸ್ವೀಟ್ ಯು ಸೇ ಹರೇ ರಾಮ್ ಹರೇ ಕ್ಥಷ್ಣ' ಅಂತ ಕಾಮೆಂಟ್‌ಗಳ ಮೇಲೆ ಕಮೆಂಟ್ ಹಾಕ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಿಲಿ ಪೌಲ್ ರೀಲ್ಸ್ ಟ್ರೇಡಿಂಗ್ ಆಗಿಬಿಟ್ಟಿದೆ.

ಇತ್ತೀಚಿಗಷ್ಟೇ ಕಿಲಿ ಪೌಲ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲಾಗಿತ್ತು. ಐವರು ಮಂದಿ ಕಿಲಿ ಪೌಲ್ ಮೇಲೆ ಏಕಾಏಕಿ ದಾಳಿ ನಡೆಸಿ ಕೈ ಮತ್ತು ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಬಗ್ಗೆ ಸ್ವತಃ ಕಿಲಿ ಪೌಲ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ನನ್ನ ಮೇಲೆ ಐದು ಜನರು ದಾಳಿ ಮಾಡಿ ದೊಣ್ಣೆ, ಚಾಕುವಿನಿಂದ ಹಲ್ಲೆ ನಡೆಸಿದ್ದರು. ಈ ವೇಳೆ ನನ್ನ ಬಲಗೈನ ಹೆಬ್ಬೆರಳಿಗೆ ತೀವ್ರ ಗಾಯವಾಯಿತು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಈ ದಾಳಿಯಿಂದ ನಾನು ಹೋರಾಡಿ ಪ್ರಾಣ ಉಳಿಸಿಕೊಂಡೆ ಅಂತ ತಮ್ಮ ಅನುಭವವನ್ನು ಹೇಳಿಕೊಂಡಿದ್ದರು.

ಇನ್ನು ಕಿಲಿ ಪೌಲ್ ರೀಲ್ಸ್‌ಗೆ ಕಾರ್ತಿಕ್ ಆರ್ಯನ್ ಕೂಡ ಪ್ರತಿಕ್ರಿಯಿಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಅಲ್ದೆ ರೂಹ್ ಬಾಬಾ ನಹೀ, ಕಿಲಿ ಬಾಬಾ ಹೈ' ಅಂತ ಬರೆದುಕೊಂಡಿದ್ದಾರೆ. ಸದ್ಯ 'ಭೂಲ್ ಭುಲೈಯಾ 2' ಚಿತ್ರ ಮೇ 20 ರಂದು ರಿಲೀಸ್ ಆಗಲಿದೆ. ಚಿತ್ರತಂಡ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿದೆ.


Click it and Unblock the Notifications











