ಲಿಯಾಂಡರ್ ಪೇಸ್ ಮತ್ತು ಕಿಮ್ ಶರ್ಮಾ ಪ್ರೀತಿ ವಿಚಾರ ಬಿಚ್ಚಟ್ಟ ರೊಮ್ಯಾಂಟಿಕ್ ಫೋಟೋ

By ಫಿಲ್ಮಿಬೀಟ್ ಡೆಸ್ಕ್

ಭಾರತದ ಖ್ಯಾತ ಟೆನಿಸ್ ತಾರೆ ಲಿಯಾಂಡರ್​ ಪೇಸ್​ ಮತ್ತು ನಟಿ ಕಿಮ್​ ಶರ್ಮಾ ನಡುವಿನ ಸಂಬಂಧ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರು ತುಂಬ ಆಪ್ತರಾಗಿರುವ ಫೋಟೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಆದರೂ ಕೂಡ ಈ ಜೋಡಿ ತಮ್ಮ ಸಂಬಂಧ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಇದೀಗ ಇಬ್ಬರ ಪ್ರೀತಿ-ಪ್ರೇಮಕ್ಕೆ ಸಾಕ್ಷಿ ಒದಗಿಸುವಂತಹ ಫೋಟೋ ವೈರಲ್ ಆಗಿದೆ. ಈ ಫೋಟೋ ಕಿಮ್​ ಶರ್ಮಾ ಮತ್ತು ಲಿಯಾಂಡರ್​ ಪೇಸ್​ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಬಹುತೇಕ ಖಚಿತಪಡಿಸಿದೆ. ಈ ಪ್ರಯಣಪಕ್ಷಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಈ ಫೋಟೋದಲ್ಲಿ ನಟಿ ಕಿಮ್ ಶರ್ಮಾ, ಪ್ರಿಯತಮ ಲಿಯಾಂಡರ್​ ಪೇಸ್​ ಅವರನ್ನು ತಬ್ಬಿಕೊಂಡಿದ್ದಾರೆ, ಕಿಮ್​ ಶರ್ಮಾ ಕ್ಯಾಮರಾ ಕಡೆಗೆ ತಿರುಗಿ ಪೋಸ್​ ನೀಡುತ್ತಾ ನಗು ಬೀರಿದ್ದಾರೆ. ಪ್ರೇಯಸಿಯನ್ನು ಕಣ್ತುಂಬಿಕೊಳ್ಳುತ್ತಿರುವ ಲಿಯಾಂಡರ್​ ಪೇಸ್​ ಕೂಡ ನಗುತ್ತಿದ್ದಾರೆ. ಈ ಜೋಡಿಯ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕಿಮ್​ ಶರ್ಮಾ ಅವರು ಸೂಕ್ತವಾದ ಕ್ಯಾಪ್ಷನ್​ ನೀಡದೇ ಈ ಫೋಟೋ ಹಂಚಿಕೊಂಡು ಕೌತುಕ ಮೂಡಿಸಿದ್ದಾರೆ. ಆದರೆ ಲಿಯಾಂಡರ್​ ಪೇಸ್​ ಈ ಫೋಟೋಗೆ 'ಮ್ಯಾಜಿಕ್​' ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಈ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ ಎಂದು ಕೆಲವರು ಕೇಳಿದರೆ, ಇನ್ನು ಕೆಲವರು ಈಗ ಅಧಿಕೃತವಾಯಿತು ಎಂದು ಹೇಳಿದ್ದಾರೆ. ಅನೇಕ ಜನ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.

Kim Sharma and Leander Paes share same photo, make relationship official

ಅಂದಹಾಗೆ ಇಬ್ಬರ ಫೋಟೋಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಜುಲೈ ತಿಂಗಳಲ್ಲೂ ಸಹ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಗೋವಾ ರೆಸ್ಟೋರೆಂಟ್ ನಲ್ಲಿರುವ ಫೋಟೋಗಳು ವೈರಲ್ ಆಗಿತ್ತು. ಬಳಿಕ ಮುಂಬೈ ಬೀದಿಯಲ್ಲಿ ಇಬ್ಬರೂ ಓಡಾಡುತ್ತಿದ್ದ ಫೋಟೋ ವೈರಲ್ ಆಗಿತ್ತು. ಅಲ್ಲದೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ಅಂದಹಾಗೆ ಕಿಮ್ ಈ ಮೊದಲು ತೆಲುಗು ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ನಲ್ಲಿದ್ದರು. 2019ರಲ್ಲಿ ಇಬ್ಬರೂ ಬೇರೆ ಬೇರೆಯಾದರು. ಈ ಬಗ್ಗೆ ಕಿಮ್ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಕಿಮ್ ಮತ್ತು ಲಿಯಾಂಡರ್ ಪೇಸ್ ಪ್ರೀತಿ-ಪ್ರೇಮ ರೂಮರ್ಸ್ ಬಗ್ಗೆ ಮಾತನಾಡಿ " ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಅವರ ಅಧಿಕೃತಗೊಳಿಸಿದರೆ ಖಂಡಿತ ಗೌರವಿಸುತ್ತೇನೆ. ನಿಜವಾಗಿದ್ದರೆ ಅವರು ಹಾಟೆಸ್ಟ್ ಕಪಲ್" ಎಂದು ಹೇಳಿದ್ದರು.

ಅಂದಹಾಗೆ ಲಿಯಾಂಡರ್ ಪೇಸ್ ಮಾಡೆಲ್ ರಿಯಾ ಪಿಳ್ಳೈ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ರಿಯಾ ಮತ್ತು ಲಿಯಾಂಡರ್ ಜೋಡಿಗೆ ಒಬ್ಬಳು ಮಗಳು ಸಹ ಇದ್ದಾರೆ. 2000ರಲ್ಲಿ ರಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 2017ರಲ್ಲಿ ಇಬ್ಬರು ಬೇರೆ ಬೇರೆ ಆಗಿದ್ದಾರೆ.

ಕಿಮ್ ಶರ್ಮಾ 2000ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಮಿತಾಬ್ ಬಚ್ಚನ್ ಕೂಡ, ಶಾರುಖ್ ಖಾನ್, ಐಶ್ವರ್ಯಾ ರೈ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ. ಫಿದಾ, ಕೆಹ್ತಾ ಹೈ ದಿಲ್ ಬಾರ್ ಬಾರ್, ತುಮ್ ಸೆ ಅಚ್ಚ ಕೌನ್ ಹೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಕಿಮ್ ಶರ್ಮಾ ಸುಶ್ಮಿತಾ ಸೇನ್ ನಟನೆಯ ಜಿಂದಗಿ ರಾಕ್ಸ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇನ್ನು ತೆಲುಗಿನ ಸೂಪರ್ ಹಿಟ್ ಮಗಧೀರ ಸಿನಿಮಾದಲ್ಲಿ ಕಿಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

More from Filmibeat

English summary
Actress Kim Sharma and Leander Paes share same photo, make relationship official.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X