twitter
    For Quick Alerts
    ALLOW NOTIFICATIONS  
    For Daily Alerts

    ಆರ್ಯನ್ ಪ್ರಕರಣ: ಕಿರಣ್ ಗೋಸಾವಿ ಬಂಧನ, ಪ್ರಕರಣಕ್ಕೆ ಹೊಸ ತಿರುವು?

    |

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ಬಿಸಿ ಏರಿರುವ ಹೊತ್ತಿನಲ್ಲಿಯೇ ಅದೇ ಪ್ರಕರಣದ ಮತ್ತೊಂದು ಮಜಲು ಸಹ ಬಹಳ ಕುತೂಹಲ ಮೂಡಿಸಿದೆ.

    ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರ ಹಿಂದೆ ಷಡ್ಯಂತ್ರವಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದ್ದು, ಅದಕ್ಕೆ ಮುಖ್ಯ ಕಾರಣ ಕಿರಣ್ ಗೋಸಾವಿ ಹಸರಿನ ವ್ಯಕ್ತಿ. ಆರ್ಯನ್ ಖಾನ್ ಅನ್ನು ಎನ್‌ಸಿಬಿ ವಶಕ್ಕೆ ಪಡೆದ ದಿನ ಆರ್ಯನ್ ಜೊತೆಗೆ ಕಿರಣ್ ಗೋಸಾವಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಆ ನಂತರ ಕಿರಣ್ ಗೋಸಾವಿ ಮೇಲೆ ವಂಚನೆ ಪ್ರಕರಣಗಳು ಇರುವುದು ಪತ್ತೆಯಾಗಿತ್ತು. ತನ್ನ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ ಕಿರಣ್ ಗೋಸಾವಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹಾಗೂ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದ ಇನ್ನು ಕೆಲವರನ್ನು ಎನ್‌ಸಿಬಿಯ ಕೇಂದ್ರ ಕಚೇರಿಯ ವಿಶೇಷ ನಿಯೋಗವೊಂದು ವಿಚಾರಣೆ ನಡೆಸುತ್ತಿದೆ. ವಿಚಾರಣೆ ನಡೆಸಬೇಕಾದವರ ಪಟ್ಟಿಯಲ್ಲಿ ಕಿರಣ್ ಗೋಸಾವಿ ಸಹ ಇದ್ದಾನೆ. ಆರ್ಯನ್ ಪ್ರಕರಣದಲ್ಲಿ ಕಿರಣ್ ಗೋಸಾವಿ 25 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಆರ್ಯನ್ ಪ್ರಕರಣದ ಮತ್ತೊಬ್ಬ ಸಾಕ್ಷಿ ಪ್ರಭಾಕರ್ ಸಾಯಿಲ್ ಆರೋಪಿಸಿದ್ದಾರೆ. ಕಿರಣ್ ಗೋಸಾವಿ, ಸಮೀರ್ ವಾಂಖೆಡೆಗೆ 8 ಕೋಟಿ ನೀಡಲಿದ್ದ ಎಂದೂ ಪ್ರಭಾಕರ್ ಹೇಳಿದ್ದ.

    Kiran Gosavi Arrested Who Clicked Selfie With Aryan Khan While He Is In NCB Custody

    ಬಂಧನವಾಗುವ ಮುನ್ನಾ ವಿಡಿಯೋ ಹರಿಬಿಟ್ಟಿದ್ದ ಕಿರಣ್ ಗೋಸಾವಿ. ತಾನು ಪುಣೆ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದ. ಅಲ್ಲದೆ ಪ್ರಭಾಕರ್ ಸಾಯಿಲ್‌ ಸುಳ್ಳು ಹೇಳುತ್ತಿದ್ದಾನೆಂದು, ಕೆಲವು ಸಚಿವರು ಪ್ರಭಾಕರ್ ಸಾಯಿಲ್ ಬೆನ್ನಿಗಿದ್ದಾರೆಂದು ಹೇಳಿದ್ದ. ನಾನು ರಫ್ತು-ಆಮದು ವ್ಯವಹಾರ ಮಾಡುತ್ತೇನೆ, ಹಾಗಾಗಿ ಪ್ರಭಾಕರ್‌ಗೆ ಹಣ ಪಡೆದುಕೊಂಡು ಬರಲು ಹೇಳಿದ್ದಿರಬಹುದು. ಪ್ರಭಾಕರ್‌ಗೆ ಯಾರು ಯಾರು ಕರೆ ಮಾಡಿದ್ದಾರೆ, ಏನೇನು ಹೇಳಿ ಕೊಟ್ಟಿದ್ದಾರೆ ಎಂಬುದೆಲ್ಲವೂ ತನಿಖೆ ಆಗಬೇಕು. ಪ್ರಭಾಕರ್ ಹಾಗೂ ಅವನ ಸಹೋದರನ ಮೊಬೈಲ್ ಕಾಲ್ ಸಿಡಿಆರ್ ಹಾಗೂ ಸಂದೇಶಗಳ ಪರಿಶೀಲನೆ ಆಗಬೇಕು'' ಎಂದು ವಿಡಿಯೋದಲ್ಲಿ ಕಿರಣ್ ಗೋಸಾವಿ ಹೇಳಿದ್ದ.

    ಆರ್ಯನ್ ಪ್ರಕರಣದ ಸ್ವತಂತ್ರ್ಯ ಸಾಕ್ಷಿ ಪ್ರಭಾಕರನ್ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವುದು ನೀಡಿದೆ. ಗೋಸಾವಿಯ ಬಾಡಿಗಾರ್ಡ್ ಮತ್ತು ಡ್ರೈವರ್ ಆಗಿರುವ ಪ್ರಭಾಕರ್, ''ಅಕ್ಟೋಬರ್ 01 ರಂದು ನನಗೆ ಕರೆ ಮಾಡಿದ ಗೋಸಾವಿ, ಅಕ್ಟೋಬರ್ 2 ಕ್ಕೆ ತಯಾರಿರುವಂತೆ ತಾನು ಹೇಳಿದರು. ಅಂತೆಯೇ ಲೊಕೇಶನ್ ಒಂದನ್ನು ಕಳಿಸಿದರು. ಅಕ್ಟೋಬರ್ 3 ರಂದು ಬೆಳಿಗ್ಗೆ ನಾನು ಲೊಕೇಶನ್‌ಗೆ ಹೋದೆ ಅದು ಎನ್‌ಸಿಬಿ ಕಚೇರಿಯಾಗಿತ್ತು. ಅಲ್ಲಿ ಗೋಸಾವಿ ಎನ್‌ಸಿಬಿ ಅಧಿಕಾರಿಯೊಟ್ಟಿಗೆ ಮಾತನಾಡುತ್ತಿದ್ದರು. ನನ್ನನ್ನು ಅಲ್ಲಿಯೇ ಕಾಯುವಂತೆ ಹೇಳಿ ಅವರು ಹೊರಗೆ ಹೋದರು'' ಎಂದು ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ.

    ''ಆ ನಂತರ ಗೋಸಾವಿ ವಾಪಸ್ ಬಂದು ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದರು. ಎನ್‌ಸಿಬಿ ಕಚೇರಿಯಿಂದ ಸುಮಾರು 500 ಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬರನ್ನು ಗೋಸಾವಿ ಭೇಟಿ ಆದರು. ಆ ವ್ಯಕ್ತಿಯ ಹೆಸರು ಸ್ಯಾಮ್ ಡಿಸೋಜಾ. ಐದು ನಿಮಿಷ ಆ ವ್ಯಕ್ತಿ ಜೊತೆ ಮಾತನಾಡಿ. ವಾಪಸ್ ಬಂದು ಕಾರು ಹತ್ತಿದರು. ಸ್ಯಾಮ್ ಡಿ ಸೋಜಾ ಕಾರನ್ನು ಫಾಲೋ ಮಾಡುವಂತೆ ಹೇಳಿದರು. ನಾನು ಡಿಸೋಜಾ ಕಾರಿನ ಹಿಂದೆ ಹೋಗುತ್ತಿದ್ದೆ. ಆಗ ಗೋಸಾವಿ, ಸ್ಯಾಮ್ ಡಿ ಸೋಜಾ ಬಳಿ ಫೋನಿನಲ್ಲಿ ಮಾತನಾಡುತ್ತಿದ್ದರು. ''ನೀನು 25 ಕೋಟಿಗೆ ಬಾಂಬ್ ಹಾಕು. ಕೊನೆಗೆ 18 ಕೋಟಿಗೆ ಸೆಟಲ್‌ಮೆಂಟ್ ಆಗಲಿ. ಎಂಟು ಕೋಟಿಯನ್ನು ಸಮೀರ್ ವಾಂಖೆಡೆಗೆ ಬೇರೆ ಕೊಡಬೇಕು'' ಎಂದು ಗೋಸಾವಿ ಫೋನಿನಲ್ಲಿ ಹೇಳುತ್ತಿದ್ದರು'' ಎಂದು ಪ್ರಭಾಕರ್ ಹೇಳಿದ್ದಾರೆ.

    ಸ್ಯಾಮ್ ಡಿಸೋಜಾ, ಗೋಸಾವಿ ಹಾಗೂ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಮೂವರು ಕಾರಿನಲ್ಲಿಯೇ ಕುಳಿತು ಮಾತನಾಡಿಕೊಂಡರು. ಆ ನಂತರ ಗೋಸಾವಿಯು, ವ್ಯಕ್ತಿಯೊಬ್ಬರಿಂದ 50 ಲಕ್ಷ ಹಣವನ್ನು ಪಡೆದುಕೊಳ್ಳುವಂತೆ ನನಗೆ ಹೇಳಿದ. ಅಂತೆಯೇ ನಾನು ಹೋಗಿ 50 ಲಕ್ಷ ಹಣವಿದ್ದ ಬ್ಯಾಗ್‌ಗಳನ್ನು ಪಡೆದುಕೊಂಡು ಅವನ್ನು ಗೋಸಾವಿಗೆ ಕೊಟ್ಟೆ. ಆ ನಂತರ ಅದರಲ್ಲಿ ತುಸು ಹಣ ತೆಗೆದುಕೊಂಡು ಉಳಿದ ಹಣವನ್ನು ಸ್ಯಾಮ್‌ಗೆ ಕೊಡುವಂತೆ ಗೋಸಾವಿ ಹೇಳಿದ ಅಂತೆಯೇ ನಾನು ತೆಗೆದುಕೊಂಡು ಹೋಗಿ ಕೊಟ್ಟೆ. ಸ್ಯಾಮ್ ಹಣ ಎಣಿಸಿದಾಗ ಅದರಲ್ಲಿ 36 ಲಕ್ಷ ಹಣ ಇತ್ತು'' ಎಂದು ಆರ್ಯನ್ ಪ್ರಕರಣದ ಸಾಕ್ಷಿ ಪ್ರಭಾಕರ್ ಹೇಳಿದ್ದಾರೆ. ಗೋಸಾವಿಯು, ಎನ್‌ಸಿಬಿ ಅಧಿಕಾರಿ ಸಮೀರ್‌ಗೆ ಎಂಟು ಕೋಟಿ ಕೊಡಬೇಕೆಂದು ಹೇಳಿದ್ದಾಗಿಯೂ ಪ್ರಭಾಕರ್ ಹೇಳಿದ್ದಾನೆ.

    English summary
    Kiran Gosavi arrested by Pune police. He grab attention when he clicked selfie with Aryan Khan when he is in NCB custody. Kiran Gosavi also accused of Extortion of money in Aryan Khan case.
    Thursday, October 28, 2021, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X