OSCAR 2025 ; ಮಹಾರಾಜ ಚಿತ್ರವನ್ನು ಹಿಂದಿಕ್ಕಿ ಆಸ್ಕರ್ ಅಂಗಳಕ್ಕೆ ಧುಮುಕಿದ ಅಮೀರ್ ಖಾನ್ ನಿರ್ಮಾಣದ ಲಾಪತಾ ಲೇಡೀಸ್....!

ಆಗಷ್ಟೇ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆಯಾಗುತ್ತಾರೆ. ಹೀಗೆ ಕಾಣೆಯಾದ ಹುಡುಗಿಯರನ್ನು ಹುಡುಕುವ ಕೆಲಸಕ್ಕೆ ಗಂಡಂದಿರು ಮುಂದಾಗುತ್ತಾರೆ. ಆ ನಂತರದ ರೋಚಕ ಪ್ರಯಾಣದ ಕಥೆಯೇ ಲಾಪತಾ ಲೇಡೀಸ್. ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಚಿತ್ರ ತೆರೆಗೆ ಬಂದಾಗ ಸಾಕಷ್ಟು ಸದ್ದು ಮಾಡಿತ್ತು. ಎಲ್ಲರ ಹೃದಯವನ್ನು ಗೆದ್ದಿತ್ತು.

ಇಂಥಾ ಲಾಪತಾ ಲೇಡೀಸ್ ಈಗ ಆಸ್ಕರ್ ಅಂಗಳಕ್ಕೆ ತೆರಳಿದೆ. ಹೌದು, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 29 ಚಿತ್ರಗಳಲ್ಲಿ ಅಳೆದು ತೂಗಿ ಲಾಪತಾ ಲೇಡೀಸ್ ಚಿತ್ರವನ್ನು ಆಸ್ಕರ್‌ ಗೆ ಕಳುಹಿಸಲು ಮುಂದಾಗಿದೆ. 2025ರ ಆಸ್ಕರ್‌ ಪ್ರಶಸ್ತಿಯನ್ನು ಪಡೆಯುವ ಎಲ್ಲ ಅರ್ಹತೆ ಲಾಪತಾ ಲೇಡೀಸ್ ಚಿತ್ರಕ್ಕಿದೆ ಎಂದು ಹೇಳಿದೆ.

Kiran Rao s Laapataa Ladies has been selected as India s official entry for the Oscars

ಕಳೆದುಹೋದ ಹೆಂಡತಿಯರ ಸುತ್ತ ಸುತ್ತುವ ಈ ಚಿತ್ರ, ಮೇಲ್ನೋಟಕ್ಕೆ ಗೋಳಿನ ಕಥೆಯಂತೆ ಕಂಡರು ಕೂಡ ಚಿತ್ರವನ್ನು ಕಿರಣ್ ರಾವ್ ಹಾಸ್ಯಮಯವಾಗಿ ತೆರೆಗೆ ತಂದಿದ್ದಾರೆ. ಹಾಸ್ಯದ ಜೊತೆ ಭಾವನಾತ್ಮಕವಾಗಿ ಕೂಡ ಚಿತ್ರದ ಕಥೆಯನ್ನು ಕಿರಣ್ ರಾವ್ ಹೆಣೆದಿದ್ದಾರೆ. ತುಂಬಾನೇ ಗಂಭೀರವಾದ ವಿಷಯವನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಮೂವರು ಕೂಡ ಚಿತ್ರರಂಗಕ್ಕೆ ಹೊಸಬರು. ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಈ ಮೂವರಿಗೆ ಲಾಪತಾ ಲೇಡೀಸ್ ಮೊದಲ ಸಿನಿಮಾ. ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯ ಗೆದ್ದ ಈ ಮೂವರು ಈಗ ಮೊದಲ ಪ್ರಯತ್ನದಲ್ಲಿಯೇ ಆಸ್ಕರ್ ಕನಸು ಕಾಣುತ್ತಿದ್ದಾರೆ.

ಅಂದ್ಹಾಗೇ ಲಾಪತಾ ಲೇಡೀಸ್ ಚಿತ್ರದ ಜೊತೆ ಆಸ್ಕರ್‌ಗೆ ತೆರಳಲು ಇನ್ನೂ 28 ಸಿನಿಮಾಗಳಿದ್ದವು. ಆ ಪೈಕಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಕೂಡ ಒಂದಾಗಿತ್ತು. 'ಮಹಾರಾಜ' ಚಿತ್ರವನ್ನೇ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಆಸ್ಕರ್‌ಗೆ ಕಳುಹಿಸುತ್ತೆ ಎನ್ನುವ ನಂಬಿಕೆ ತಮಿಳು ಚಿತ್ರರಂಗಕ್ಕಿತ್ತು. ಆದರೆ ಈಗ ಆ ನಂಬಿಕೆ ಹುಸಿಯಾಗಿದೆ. ಮಹಾರಾಜ ಚಿತ್ರಕ್ಕೆ ಸೆಡ್ಡು ಹೊಡೆದು ಲಾಪತಾ ಲೇಡೀಸ್ ಆಸ್ಕರ್ ಅಂಗಳಕ್ಕೆ ಧುಮುಕಿದೆ.

kiran-raos-laapataa-ladies-has-been-selected-as-indias-official-entry-for-the-oscars

'ಮಹಾರಾಜ' ಹಾಗೂ ಲಾಪತಾ ಲೇಡೀಸ್ ಹೊರತು ಪಡಿಸಿದರೆ ಪ್ರಭಾಸ್ ಅಭಿನಯದ ಕಲ್ಕಿ 2898 AD, ಹನುಮಾನ್, ರಣ್‌ದೀಪ್ ಹೂಡ ನಿರ್ದೇಶಿಸಿ ನಟಿಸಿರುವ ಸ್ವಾತಂತ್ರ್ಯ ವೀರ್ ಸಾವರಕರ್ , ಆರ್ಟಿಕಲ್ 370, ರಣ್‌ಬೀರ್ ಕಪೂರ್ ಅಭಿನಯದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್, ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಲಯಾಳಂನ ಆಟಂ, ಹೀಗೆ ಒಟ್ಟು 29 ಚಿತ್ರಗಳು ಕೂಡ ಆಸ್ಕರ್‌ ಗೆ ತಲುಪುವ ರೇಸ್‌ನಲ್ಲಿದ್ದವು.ಆದರೆ ಅಂತಿಮವಾಗಿ 13 ಜನರ ಸದಸ್ಯರನ್ನೊಳಗೊಂಡ ಅಸ್ಸಾಮಿ ನಿರ್ದೇಶಕ ಜಾನು ಬರುವಾ ನೇತೃತ್ವದ ಸಮತಿ ಲಾಪತಾ ಲೇಡೀಸ್ ಚಿತ್ರಕ್ಕೆ ಮಣೆ ಹಾಕಿದೆ. ಆಸ್ಕರ್‌ಗೆ ಚಿತ್ರವನ್ನು ಕಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗೆ ಮೊದಲ ಹಂತವನ್ನು ದಾಟಿಕೊಂಡು ಆಸ್ಕರ್‌ಗೆ ಹೋಗುತ್ತಿರುವ ಲಾಪತಾ ಲೇಡೀಸ್ ಅಲ್ಲಿ ಎದುರಾಗುವ ಸವಾಲುಗಳನ್ನು ದಾಟಿ ಎಲ್ಲಿಯವರೆಗೆ ತಲುಪುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: oscar aamir khan kiran rao
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X