ಈದ್ ಸಂಭ್ರಮದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಫೀವರ್: 5000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಭಾಯ್ಜಾನ್ ಆರ್ಭಟ

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ವಿಶ್ವದಾದ್ಯಂತ ರಿಲೀಸ್ ಆಗ್ತಿದೆ. ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಈದ್ ಸಂಭ್ರಮದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಫರ್ಹಾದ್ ಸಮ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದಲ್ಲಿ 4 ಜನ ಸಹೋದರರ ಅಣ್ಣನಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಸಲ್ಲುಮಿಯಾಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದು ತಮಿಳಿನ 'ವೀರಂ' ರೀಮೆಕ್. ಕನ್ನಡದಲ್ಲಿ ದರ್ಶನ್ 'ಒಡೆಯ' ಹೆಸರಿನಲ್ಲಿ ಇದೇ ಚಿತ್ರವನ್ನು ರೀಮೆಕ್ ಮಾಡಿದ್ದರು. ಸಲ್ಮಾನ್ ಖಾನ್ ಕೆಲ ವರ್ಷಗಳಿಂದ ಈದ್ ಸಂಭ್ರಮದಲ್ಲಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಬರ್ತಿದ್ದಾರೆ. ಅದರಲ್ಲಿ ಬಹುತೇಕ ಸಿನಿಮಾಗಳು ಭಾರೀ ಓಪನಿಂಗ್ ಪಡೆದುಕೊಂಡು ಬಾಕ್ಸಾಫೀಸ್ ಶೇಕ್ ಮಾಡಿವೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಮೇಲೂ ಭಾರೀ ನಿರೀಕ್ಷೆ ಇದೆ.

Kisi Ka Bhai Kisi Ki Jaan Total Screen Count: 4500+ Screens in India And 1200+ Screens in Overseas

ಫ್ಯಾಮಿಲಿ ಎಂಟರ್‌ಟೈನ್‌ ಕಥೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಮಿಕ್ಸ್ ಮಾಡಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಕಟ್ಟಿಕೊಡಲಾಗಿದೆ. ಆಕ್ಷನ್ ಸೀಕ್ವೆನ್ಸ್ ಹಾಗೂ ಡೈಲಾಗ್ಸ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ರೀಮೆಕ್ ಸಿನಿಮಾ ಆದ್ರು ಸಲ್ಲು ತಮ್ಮದೇ ಸ್ಟೈಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುವ ಸಾಧ್ಯತೆಯಿದೆ. ನಿರೀಕ್ಷೆಗೆ ತಕ್ಕಂತೆ ದೇಶ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಚಿತ್ರದ ಒಟ್ಟು ಸ್ಕ್ರೀನ್‌ಗಳು ಹಾಗೂ ಶೋಗಳ ಸಂಖ್ಯೆ ಸಿಕ್ಕಿದೆ. ಈ ಬಗ್ಗೆ ಬಾಲಿವುಡ್ ಬಾಕ್ಸಾಫೀಸ್ ವಿಶ್ಲೇಷಣ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಒಟ್ಟು 4500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್ ಆಗುತ್ತಿದೆ. ಪ್ರತಿದಿನ ಅಂದಾಜು 16000ಕ್ಕೂ ಅಧಿಕ ಶೋಗಳು ಇರಲಿದೆ. ಅದೇ ರೀತಿ ಅಮೆರಿಕಾ, ಆಸ್ಟ್ರೇಲಿಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ 100ಕ್ಕೂ ಅಧಿಕ ದೇಶಗಳಲ್ಲಿ 1200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಲ್ಲು ಆರ್ಭಟ ಶುರುವಾಗಲಿದೆ. ಇನ್ನು ಈ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು 2 ಗಂಟೆ 24 ನಿಮಿಷ ಕಾಲಾವಧಿಯ ಸಿನಿಮಾ ಇದಾಗಿದೆ.

ಕಾಮಿಡಿ, ಎಮೋಷನ್, ರೊಮ್ಯಾನ್ಸ್, ಆಕ್ಷನ್, ಡ್ರಾಮಾ ಎಲ್ಲವೂ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿದೆ. ಜಗಪತಿ ಬಾಬು, ಜೆಸ್ಸಿ ಗಿಲ್, ರಾಘವ್ ಜುಯಲ್, ಸಿದ್ದಾರ್ಥ ನಿಗಂ, ಭೂಮಿಕಾ ಚಾವ್ಲಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡೊಂದರಲ್ಲಿ ರಾಮ್‌ಚರಣ್ ಕೂಡ ಹೆಜ್ಜೆ ಹಾಕಿದ್ಧಾರೆ. 7 ಜನ ಸಂಗೀತ ನಿರ್ದೇಶಕರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಡಿದ್ದಾರೆ. KGF ಸಿನಿಮಾ ಖ್ಯಾತಿಯ ರವಿ ಬಸ್ರೂರು ಹಾಡಿಗೆ ಟ್ಯೂನ್ ಹಾಕುವುದರ ಜೊತೆಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈಗಾಗಲೇ ಕೆಲವೆಡೆ ಬೆಳ್ಳಂಬೆಳಗ್ಗೆ ಶೋಗಳು ಆರಂಭವಾಗಿದೆ.

ಇನ್ನು ಚಿತ್ರದಲ್ಲಿ ನಾಯಕ ನಾಯಕಿಗಾಗಿ ತೆಲಂಗಾಣಗೆ ಹೋಗುವ ಕಥೆಯಿದೆ. ಅದಕ್ಕೆ ತಕ್ಕಂತೆ ಅಲ್ಲಲ್ಲಿ ತೆಲುಗು ಸಂಭಾಷಣೆಯನ್ನು ಬಳಸಿಕೊಳ್ಳಲಾಗಿದೆ. 'ಬತುಕಮ್ಮ' ಸಾಂಗ್‌ಗೂ ಒಳ್ಳೆ ರೆಸ್ಪಾನ್ ಸಿಕ್ಕಿದೆ. ಸಲ್ಮಾನ್ ಖಾನ್ ಸ್ವತಃ ಸಿನಿಮಾ ನಿರ್ಮಿಸಿದ್ದು ಜೀ ಸಂಸ್ಥೆ ವಿತರಣೆ ಹಕ್ಕು ಖರೀದಿಸಿದೆ. ವಿ. ಮಣಿಕಂಠನ್ ಛಾಯಾಗ್ರಹಣ ಚಿತ್ರಕ್ಕಿದೆ. ವಾರಕ್ಕೂ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಬುಕ್ಕಿಂಗ್‌ಗೆ ಅಷ್ಟೇನು ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ. ಈದ್ ವೀಕೆಂಡ್‌ ಸಂಭ್ರಮದಲ್ಲಿ ಸಿನಿಮಾ ಸದ್ದು ಮಾಡುವ ನಿರೀಕ್ಷೆ ಇದೆ.

More from Filmibeat

English summary
Kisi Ka Bhai Kisi Ki Jaan Total Screen Count: 4500+ Screens in India And 1200+ Screens in Overseas. Bollywood box office sultan is coming this Eid with family entertainer. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X