ಭಾರತದ ಖ್ಯಾತ ಕ್ರಿಕೆಟರ್‌ನ ಪ್ರೀತಿಸಿದ್ದ ಈ ನಟಿಯನ್ನು ಮಂಚಕ್ಕೆ ಕರೆದಿದ್ದ ಬಾಲಿವುಡ್ ಸೂಪರ್ ಸ್ಟಾರ್..!
ಚಿತ್ರರಂಗದಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಇಲ್ಲಿ ಪ್ರಚಾರದ ಹುಚ್ಚಿಗೆ ಬಂದರೆ, ಇನ್ನೂ ಹಲವರು ಹೆಣ್ಣಿನ ಚಪಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಾರೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದಿದ್ದಾರೆ.
ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಇಶಾ ಶರ್ವಾಣಿ ಸದ್ಯದ ಉದಾಹರಣೆ.

ಹೌದು, ವಿವೇಕ್ ಓಬೆರಾಯ್ ಅಭಿನಯದ ಸುಭಾಶ್ ಘಾಯ್ ನಿರ್ದೇಶನದ ''ಕಿಸ್ನಾ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಇಶಾ ಕೇವಲ ನಟಿ ಮಾತ್ರ ಅಲ್ಲ ಅತ್ಯುತ್ತಮ ನೃತ್ಯಗಾರ್ತಿ ಕೂಡ ಹೌದು. ಆದರೂ ಅದೃಷ್ಟ ಇವರ ಕೈ ಹಿಡಿಯಲಿಲ್ಲ. ಹದಿನೈದು ವರ್ಷದಲ್ಲಿ ಹದಿಮೂರು ಚಿತ್ರಗಳನ್ನು ಮಾಡಿದರು ಕೂಡ ಇಶಾಗೆ ಯಾವ ಚಿತ್ರ ಕೂಡ ಹೆಸರನ್ನು ತಂದು ಕೊಡಲಿಲ್ಲ. ಇಂಥಾ ಇಶಾ ಇದೀಗ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಇಶಾ, ಚಿತ್ರರಂಗದ ಸ್ಟಾರ್ ಹೀರೋ ಅವಕಾಶ ಬೇಕೆಂದರೆ ನನ್ನ ಜೊತೆ ಮಲಗು ಎಂದು ನನಗೆ ಹೇಳಿದ್ದ ಎಂದಿದ್ದಾರೆ. ನಾನು ಅವರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ ಈ ಕಾರಣಕ್ಕೆ ನನಗೆ ಆಗ ಗರ ಬಡಿದಂತೆ ಆಯ್ತು ಹೀಗಾಗಿ ನಾನು ಹೆಚ್ಚೇನು ಪ್ರತಿಕ್ರಿಯೆಯನ್ನು ನೀಡದೇ ಆ ಜಾಗದಿಂದ ಕಾಲ್ಕಿತ್ತೆ ಎಂದು ಹೇಳಿರುವ ಇಶಾ ನಾನು ಅಲ್ಲಿಯೇ ಆ ಸ್ಟಾರ್‌ನ ಬೈಯ್ದು ಮಂಗಳಾರತಿ ಮಾಡಿದ್ದರೆ, ಆತ ನನ್ನನ್ನೂ ಆ ಜಾಗದಿಂದ ಹೋಗಲು ಬಿಡುತ್ತಿರಲಿಲ್ಲ ಎಂಬ ಭಯ ನನ್ನಲ್ಲಿತ್ತು, ದೈಹಿಕ ಹಲ್ಲೆ ನಡೆಸುವ ಭೀತಿಯೂ ಇತ್ತು, ಈ ಕಾರಣಕ್ಕೆ ಏನೂ ಮಾತನಾಡದೇ ಅಲ್ಲಿಂದ ನಾನು ಬಂದೆ ಎಂದಿದ್ದಾರೆ. ಮನೆಗೆ ಬಂದ ನಂತರ ಕರೆ ಮಾಡಿ ಆ ಸ್ಟಾರ್ ನೀಡಿದ್ದ ಆಫರ್‌ನ ನಾನು ನಿರಾಕರಿಸಿದೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಸದ್ಯ ಚಿತ್ರರಂಗದಿಂದ ದೂರವೇ ಇದ್ದು ಕೇರಳದಲ್ಲಿ ತಮ್ಮ ತಾಯಿ ದೀಕ್ಷಾ ಸೇಠ್ ಅವರ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯವನ್ನು ಹೇಳಿ ಕೊಡುತ್ತಿರುವ ಇಶಾ ಶರ್ವಾಣಿಯ ಹೆಸರು ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಹೀರ್ ಖಾನ್ ಅವರ ಜೊತೆ ಥಳುಕು ಹಾಕಿಕೊಂಡಿತ್ತು. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವಂತೆ ಇಬ್ಬರ ಪ್ರೇಮ ಸಂಬಂಧ 08 ವರ್ಷ ಮುಂದುವರೆದಿತ್ತು. ಆದರೆ ಆ ನಂತರ 2012ರ ಆಸು ಪಾಸು ಇಬ್ಬರ ಸಂಬಂಧ ಮುರಿದು ಬಿತ್ತು.
ನಿಜಾ ಈ ವಿಚಾರದ ಕುರಿತು ಇಬ್ಬರು ಯಾವತ್ತು ಮಾತನಾಡಿಲ್ಲ. ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಾ ಎಂದು ಒಪ್ಪಿಕೊಂಡಿಲ್ಲ. ಹಾಗಂಥ ತಳ್ಳಿ ಕೂಡ ಹಾಕಿಲ್ಲ. ಬದಲಿಗೆ ಅನೇಕ ಸಭೆ-ಸಮಾರಂಭಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ನಿಜಾ ಎಂದೇ ಅನೇಕರು ಅಂದುಕೊಂಡಿದ್ದಾರೆ. ಇವತ್ತು ಕೂಡ ಇಶಾ ಮತ್ತು ಜಹೀರ್ ಖಾನ್ ದೂರವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಇಶಾ ಶರ್ವಾಣಿಯನ್ನು ಮಂಚಕ್ಕೆ ಕರೆದ ಆ ಸೂಪರ್ ಸ್ಟಾರ್ ಯಾರು ಎನ್ನುವ ಚರ್ಚೆಯನ್ನು ಕೂಡ ಮಾಡುತ್ತಿದ್ಧಾರೆ.


Click it and Unblock the Notifications











