twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕ KKಯ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಿದ್ದೇನು?

    |

    ಬಹುಭಾಷಾ ಗಾಯಕ ಕೆಕೆ ಮೇ 31ರಂದು ಕೋಲ್ಕತ್ತಾದಲ್ಲಿ ಲೈವ್ ಪರ್ಫಾಮೆನ್ಸ್ ನೀಡಿದ ಬಳಿಕ ಅಸ್ವಸ್ಥರಾಗಿದ್ದರು. ಬಳಿಕ ಕೆಕೆ ತಂಗಿದ್ದ ಹೊಟೇಲ್‌ನಲ್ಲಿ ಕೆಕೆ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆಸ್ಪತ್ರೆ ಸೇರುವ ಮುನ್ನವೇ ಕೆಕೆ ಸಾವನ್ನಪ್ಪಿದ್ದರು ಎಂದು ಆಸ್ಪತ್ರೆ ಮೂಲಗಳು ವರದಿ ಮಾಡಿದ್ದವು.

    ಕೆಕೆ ಸಾವಿನ ಸುದ್ದಿ ದೇಶದೆಲ್ಲೆಡೆ ಕಾಡ್ಗಿಜ್ಜಿನಂತೆ ಹಬ್ಬಿತ್ತು. ಕೆಕೆ ಸಾವಿಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಕೆಕೆ ಕಾರ್ಯಕ್ರಮಕ್ಕೆ ತೆರೆಳುವ ಮುನ್ನ ಆರೋಗ್ಯ ಸರಿಯಿರಲಿಲ್ಲ. ಆದರೂ ಆಯೋಜಕರು ಒತ್ತಾಯ ಮಾಡಿದ್ದರು ಎನ್ನಲಾಗಿತ್ತು. ಅಲ್ಲದೆ ಆಡಿಟೋರಿಯಂನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರು ಸೇರಿದ್ದರು ಎನ್ನಲಾಗಿತ್ತು. ಹೀಗೆ ಸಾಕಷ್ಟು ಆರೋಪಗಳು ವ್ಯಕ್ತವಾಗಿದ್ದರಿಂದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿದ್ದರು. ಅದರ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದೆ.

    ತಲೆ, ಮುಖದ ಮೇಲೆ ಗಾಯ, ಗಾಯಕ ಕೆಕೆ ಸಾವಿನ ಬಗ್ಗೆ ಗೊಂದಲ: ಆಯೋಜಕರ ಅಸಡ್ಡೆ ಕಾರಣ?ತಲೆ, ಮುಖದ ಮೇಲೆ ಗಾಯ, ಗಾಯಕ ಕೆಕೆ ಸಾವಿನ ಬಗ್ಗೆ ಗೊಂದಲ: ಆಯೋಜಕರ ಅಸಡ್ಡೆ ಕಾರಣ?

    ಕೆಕೆ ಪೋಸ್ಟ್ ಮಾರ್ಟಮ್ ವರದಿಯಲ್ಲೇನಿದೆ?

    ಕೆಕೆ ಪೋಸ್ಟ್ ಮಾರ್ಟಮ್ ವರದಿಯಲ್ಲೇನಿದೆ?

    ಕೊಲ್ಕತ್ತಾ ಪೊಲೀಸರು ಕೆಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆರಂಭದಲ್ಲಿ ಕೆಕೆಗೆ ಆಡಿಟೋರಿಯಂನಲ್ಲಿ ಓವರ್ ಕ್ರೌಡ್‌ನಿಂದ ಉಸಿರಾಟ ಸಮಸ್ಯೆಯಾಗಿ ಕೊನೆಯುಸಿರೆಳಿದಿದ್ದಾರೆ ಎನ್ನಲಾಗಿತ್ತು. ಆದ್ರೀಗ ಪ್ರಾಥಮಿಕ ಮರಣೋತ್ತರ ವರದಿ ಬಂದಿದ್ದು, ಕೆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ವರದಿ ಸದ್ಯ ಕೋಲ್ಕತ್ತಾ ಪೊಲೀಸರ ಕೈ ಸೇರಿದೆ.

    ಪೊಲೀಸರು ಕೇಸ್ ದಾಖಲಿಸಿದ್ದೇಕೆ?

    ಪೊಲೀಸರು ಕೇಸ್ ದಾಖಲಿಸಿದ್ದೇಕೆ?

    ಕೆಕೆ ಮೃತದೇಹದ ಮೇಲೆ ಗಾಯದ ಗುರುತುಗಳಾಗಿದ್ದವು. ಕೆಕೆ ಮುಖ ಹಾಗೂ ಹಣೆಯ ಮೇಲೆ ಗಾಯಗಳಾಗಿದ್ದಿದ್ದನ್ನು ಗುರುತಿಸಿದ್ದರು. ಈ ಕಾರಣಕ್ಕೆ ಪೊಲೀಸರು ಅಸಹಜ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಈ ಕಾರಣಕ್ಕೆ ಕೆಕೆ ಮನೆಯವರ ಅನುಮತಿಯನ್ನು ಪಡೆದು ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ರವಾನೆ ಮಾಡಲಾಗಿತ್ತು. ಈಗ ಹೃದಯಘಾತದಿಂದ ಸಂಭವಿಸಿದೆ ಎಂಬ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದೆ.

    ಪೂರ್ಣ ವರದಿ ಸಿಗೋದು ಯಾವಾಗ?

    ಪೂರ್ಣ ವರದಿ ಸಿಗೋದು ಯಾವಾಗ?

    ಕೆಕೆ ಮರಣೋತ್ತರ ಪರೀಕ್ಷೆಯನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ನಡೆದಿದೆ. ಸದ್ಯ ಕೆಕೆಯ ಪಾರ್ಥಿವ ಶರೀರ ಮುಂಬೈ ತಲುಪಿದೆ. ನಾಳೆ ( ಜೂನ್ 02)ರಂದು ಕೆಕೆ ಅಂತಿಮ ಸಂಸ್ಕಾರ ನಡೆಯಲಿದೆ. ಸದ್ಯ ಪೊಲೀಸರ ಕೈಗೆ ಪ್ರಾಥಮಿಕ ವರದಿಯಷ್ಟೇ ಸೇರಿದ್ದು, 72 ಗಂಟೆಯೊಳಗೆ ಸಂಪೂರ್ಣ ವರದಿ ಪೊಲೀಸರಿಗೆ ಸಿಗಲಿದೆ.

    ಕೆಕೆ ಸಾವಿಗೆ ಚಿತ್ರರಂಗದ ಕಂಬನಿ

    ಕೆಕೆ ಸಾವಿಗೆ ಚಿತ್ರರಂಗದ ಕಂಬನಿ

    ಬಾಲಿವುಡ್‌ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರೂ, ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಹೀಗಾಗಿ ಕೆಕೆ ದಿಢೀರ್ ಅಗಲಿಕೆಯ ಸುದ್ಧಿ ಕೇಳಿ ಶಾಕ್ ಆಗಿದ್ದಾರೆ. ಅಲ್ಲು ಅರ್ಜುನ್, ಅಕ್ಷಯ್ ಕುಮಾರ್, ಶ್ರೇಯಾ ಘೋಷಾಲ್, ಎ.ಆರ್ ರೆಹಮಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

    English summary
    KK Preliminary Post Mortem Report Says That Singer Died Of A Heart Attack, Know More.
    Thursday, June 2, 2022, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X