ಕೆಎಲ್ ರಾಹುಲ್‌ಗೆ ಕಾರು ಇಲ್ಲ, ಬಂಗ್ಲೆಯೂ ಇಲ್ಲ! ಎಲ್ಲಾ ಬರಿ ಓಳು
ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕೆಲವು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಬಾಲಿವುಡ್-ಕ್ರಿಕೆಟ್‌ನ ಯುವತಾರೆಯರ ಸಮಾಗಮಕ್ಕೆ ಬಾಲಿವುಡ್ ಮಂದಿ ಹಾಗೂ ಕ್ರಿಕೆಟ್ ಆಟಗಾರರು ಬಂದು ಹರಸಿ ಆಶೀರ್ವದಿಸಿದ್ದಾರೆ.
ಕೆಎಲ್ ರಾಹುಲ್-ಅಥಿಯಾ ಶೆಟ್ಟಿಯ ವಿವಾಹ ಮಾಧ್ಯಮಗಳಲ್ಲಿ ಅತಿಯಾಗಿ ಸುದ್ದಿಯಾಗಿದ್ದು ಅವರಿಗೆ ಸಿಕ್ಕಿವೆ ಎನ್ನಲಾದ ಉಡುಗೊರೆಗಳಿಂದ.
ಕೆಎಲ್ ರಾಹುಲ್-ಅಥಿಯಾ ಮದುವೆಗೆ ವಿರಾಟ್ ಕೊಹ್ಲಿ 2.70 ಕೋಟಿ ಮೌಲ್ಯದ ಕಾರು, ಸಲ್ಮಾನ್ ಖಾನ್ 1 ಕೋಟಿ ಹೆಚ್ಚು ಮೌಲ್ಯದ ಆಡಿ ಕಾರು, ಧೋನಿ 80 ಲಕ್ಷ ಬೈಕ್, ಅರ್ಜುನ್ ಕಪೂರ್ 1.50 ಮೌಲ್ಯದ ವಜ್ರದ ಆಭರಣಗಳನ್ನು ನೀಡಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಇನ್ನು ಕೆ.ಎಲ್.ರಾಹುಲ್‌ರ ಮಾವ ಸುನಿಲ್ ಶೆಟ್ಟಿ ಸ್ವತಃ 50 ಕೋಟಿ ಮೌಲ್ಯದ ಐಶಾರಾಮಿ ಅಪಾರ್ಟ್‌ಮೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಹ ಸುದ್ದಿಯಾಗಿತ್ತು. ಆದರೆ ಇದೆಲ್ಲ ಸುಳ್ಳು ಎನ್ನಲಾಗುತ್ತಿದೆ.

ಕೆಎಲ್ ರಾಹುಲ್ ಮಾವ ನಟ ಸುನಿಲ್ ಶೆಟ್ಟಿ ಯವರ ಮ್ಯಾನೇಜರ್ ಕಡೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಆಗಿದ್ದು, ಕೆಎಲ್ ರಾಹುಲ್-ಅಥಿಯಾ ಶೆಟ್ಟಿಗೆ ದುಬಾರಿ ಉಡುಗೊರೆಗಳು ನೀಡಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿಗಳು ಸುಳ್ಳೆಂದು ಹೇಳಿಕೆಯಲ್ಲಿ ಅಲ್ಲಗಳೆಯಲಾಗಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.
'ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಅವರು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಸುಳ್ಳಾಗಿದ್ದು, ಯಾವುದೇ ಸುದ್ದಿಯ ಪ್ರಸಾರಕ್ಕೂ ಮುನ್ನ ಸಂಬಂಧಿಸಿದವರನ್ನು ಸಂಪರ್ಕಿಸಿರೆಂದು ಮನವಿ ಮಾಡುತ್ತಿದ್ದೇವೆ'' ಎಂದು ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ
ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜನವರಿ 23 ರಂದು ಗೃಹಸ್ಥಾಸ್ರಮಕ್ಕೆ ಕಾಲಿಟ್ಟಿದ್ದಾರೆ. ಸುನಿಲ್ ಶೆಟ್ಟಿಯವರ ಮುಂಬೈನ ಖಂಡಾಲಾ ಫಾರಂ ಹೌಸ್‌ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಮುಂಬೈನ ಐಶಾರಾಮಿ ಹೋಟೆಲ್‌ನಲ್ಲಿ ರಿಸೆಪ್ಷನ್ ನಡೆಯಲಿದೆ. ಆ ಬಳಿಕ ಬೆಂಗಳೂರಿನಲ್ಲಿಯೂ ರಿಸೆಪ್ಷನ್ ನಡೆಯಲಿದೆ.
ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನು ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿದ್ದಾರೆ. ಕೆ.ಎಲ್.ರಾಹುಲ್ ಈಗಾಗಲೇ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದು, ಅಥಿಯಾ ಶೆಟ್ಟಿ ಜೊತೆಗೆ ಮುಂಬೈನಲ್ಲಿಯೇ ನೆಲೆಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











