For Quick Alerts
  ALLOW NOTIFICATIONS  
  For Daily Alerts

  ಸುಟ್ಟು ಹೋದ ಬ್ರೆಡ್ ಹಾಗೂ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಮಗಳ ಡೇಟಿಂಗ್!

  |

  ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಹಾಗೂ ಕ್ರಿಕೆಟ್ ರಂಗ ಎರಡೂ ಕಡೆಯಿಂದ ಹರಿದಾಡುತ್ತಾ ಬಹಳ ದಿನಗಳಾಗಿವೆ. ಇಬ್ಬರೂ ಜತೆಗಿರುವ ಚಿತ್ರವನ್ನು ಕೆಎಲ್ ರಾಹುಲ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸ್ವತಃ ಸುನಿಲ್ ಶೆಟ್ಟಿ ನಗುವ ಇಮೋಜಿ ಹಾಕಿದ್ದರು. ಇದರಿಂದ ಅವರಿಬ್ಬರ ನಡುವೆ ಸಮ್ ಥಿಂಗ್ ಇದೆ ಎಂಬ ಅನುಮಾನಗಳು ದಟ್ಟವಾಗಿದ್ದವು.

  ಸದ್ಯಕ್ಕೆ ಅವರಿಬ್ಬರೂ ತಮ್ಮ ಪ್ರೀತಿ-ಪ್ರಣಯದ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೂ ಆಗಾಗ ಇಬ್ಬರೂ ಜತೆಗೆ ಸುತ್ತಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟಿಗರು, ಸಿನಿಮಾ ರಂಗದವರು ಆತ್ಮೀಯರ ಜತೆಗೂ ಸುತ್ತಾಡಲು ಹೊರ ಹೋಗುತ್ತಿಲ್ಲ ಅನ್ನುವುದು ಬೇರೆ ಸಂಗತಿ ಬಿಡಿ.

  ಬ್ರೆಡ್ ಫೋಟೊ ಹಾಕಿದ್ದ ಅತಿಯಾ

  ಬ್ರೆಡ್ ಫೋಟೊ ಹಾಕಿದ್ದ ಅತಿಯಾ

  ಈಗ ಇಬ್ಬರ ಸಂಗತಿ ಮತ್ತೆ ಚಾಲ್ತಿಗೆ ಬಂದಿದೆ. ಇನ್‌ಸ್ಟಾಗ್ರಾಂನ ಸ್ಟೋರಿ ವಿಭಾಗದಲ್ಲಿ ಅತಿಯಾ ಶೆಟ್ಟಿ ಬ್ರೆಡ್ ತಯಾರಿಸಿದ ಫೋಟೊ ಹಂಚಿಕೊಂಡಿದ್ದರು. ಒಂದು ಭಾಗ ಸುಟ್ಟು ಹೋಗಿರುವ ಬಾಳೆಹಣ್ಣಿನ ಬ್ರೆಡ್ ಎಂದು ಫೋಟೊ ಹಾಕಿದ್ದ ಅತಿಯಾ, ಇನ್ನೊಂದು ಭಾಗದ ಚಿತ್ರವನ್ನು ತೋರಿಸಿರಲಿಲ್ಲ.

  'ನನಗೂ ರಾಹುಲ್ ಗೂ ಸಂಬಂಧವಿಲ್ಲ, ಮಗಳನ್ನು ಕೇಳಿ': ಗರಂ ಆದ ಸುನಿಲ್ ಶೆಟ್ಟಿ'ನನಗೂ ರಾಹುಲ್ ಗೂ ಸಂಬಂಧವಿಲ್ಲ, ಮಗಳನ್ನು ಕೇಳಿ': ಗರಂ ಆದ ಸುನಿಲ್ ಶೆಟ್ಟಿ

  ರಿಯಾಲಿಟಿಯೇ ಸುಟ್ಟ ಬ್ರೆಡ್!

  ರಿಯಾಲಿಟಿಯೇ ಸುಟ್ಟ ಬ್ರೆಡ್!

  ಇದಕ್ಕೆ ರಾಹುಲ್ ಕೀಟಲೆ ಮಾಡಿದ್ದಾರೆ. ಅತಿಯಾ ಹಾಕಿದ್ದ ಬ್ರೆಡ್ ಚಿತ್ರವನ್ನು ಹೋಲುವ ಬ್ರೆಡ್ ಹಾಗೂ ಸುಟ್ಟು ಹೋಗಿರುವ ಬ್ರೆಡ್ ಚಿತ್ರಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿದ್ದರು. ಗ್ಲುಟೆನ್ ಫ್ರೀ/ಶುಗರ್ ಫ್ರೀ ಬನಾನಾ ಬ್ರೆಡ್ ಎಂಬ ಕ್ಯಾಪ್ಷನ್ ಜತೆಗೆ 'ಎಕ್ಸ್‌ಪೆಕ್ಟೇಷನ್' ಎಂದು ಅದರ ಪಕ್ಕದಲ್ಲಿ ಸುಟ್ಟು ಕರಕಲಾದ ಬ್ರೆಡ್‌ ಫೋಟೊಕ್ಕೆ 'ರಿಯಾಲಿಟಿ' ಎಂದು ಹಾಕಿ ರಾಹುಲ್ ಕಾಳೆದಿದ್ದಾರೆ.

  ಅತಿಯಾರನ್ನು ಟ್ರೋಲ್ ಮಾಡಿದ ರಾಹುಲ್

  ಅತಿಯಾರನ್ನು ಟ್ರೋಲ್ ಮಾಡಿದ ರಾಹುಲ್

  ರಾಹುಲ್ ಕೇವಲ ಬ್ರೆಡ್ ಫೋಟೊ ಹಾಕಿ, 'ನಿರೀಕ್ಷೆ' ಮತ್ತು 'ವಾಸ್ತವ' ಎಂದು ಹಾಕಿದ್ದರೆ ಅಷ್ಟಾಗಿ ಗಮನ ಸೆಳೆಯುತ್ತಿರಲಿಲ್ಲ. ಅದರಲ್ಲಿ ಅವರು ಅತಿಯಾ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಹೀಗಾಗಿ ಇದು ಅತಿಯಾ ಅವರಿಗೆ ತಮಾಷೆ ಮಾಡಲೆಂದೇ ರಾಹುಲ್ ಹಾಕಿರುವ ಪೋಸ್ಟ್ ಎನ್ನುವುದು ಸ್ಪಷ್ಟವಾಗುತ್ತದೆ.

  ಮಗಳನ್ನೇ ಕೇಳಿ ಎಂದಿದ್ದ ಸುನಿಲ್

  ಮಗಳನ್ನೇ ಕೇಳಿ ಎಂದಿದ್ದ ಸುನಿಲ್

  ಇನ್‌ಸ್ಟಾಗ್ರಾಂನಲ್ಲಿ ರಾಹುಲ್, ಅತಿಯಾ ಜತೆಗಿನ ಫೋಟೊಗಳನ್ನು ಈ ಹಿಂದೆ ಹಾಕಿಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಸ್ಟೋರಿಯಲ್ಲಿ ಅತಿಯಾ ಜನ್ಮದಿನದ ಶುಭ ಹಾರೈಸಿದ್ದರು. ಈ ಬಗ್ಗೆ ಅವರಿಬ್ಬರೂ ಬಹಿರಂಗ ಹೇಳಿಕೆ ನೀಡಿಲ್ಲ. ನಟ ಸುನಿಲ್ ಶೆಟ್ಟಿ ಅವರನ್ನು ಮಗಳ ಪ್ರೀತಿಯ ಬಗ್ಗೆ ಕೇಳಿದಾಗ, 'ನಾನು ಈ ರೀತಿಯ ಯಾವುದೇ ಸಂಬಂಧ ಹೊಂದಿಲ್ಲ. ಅದರ ಬಗ್ಗೆ ಅತಿಯಾಳನ್ನೇ ಕೇಳಿ' ಎಂದು ತೀಕ್ಷ್ಣವಾಗಿ ಹೇಳಿದ್ದರು.

  English summary
  Cricketer KL Rahul make fun at daughter of Suniel Shetty, Athiya Shetty after she posted an Instagram story of banana bread.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X