ಹೂಗಳೆಂದರೆ ಇಷ್ಟ ಎಂದ ಗೆಳತಿಗೆ ಹೂ ಕಳಿಸಿದ ಕೆಎಲ್ ರಾಹುಲ್
ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಡೇಟಿಂಗ್‌ನಲ್ಲಿರುವುದು ಗುಟ್ಟೇನೂ ಅಲ್ಲ.
Recommended Video
ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿರುವ ಕೆ.ಎಲ್.ರಾಹುಲ್, ಪ್ರಸ್ತುತ ಬಿಡುವಿನಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿಯೇ ಆಥಿಯಾ ಶೆಟ್ಟಿ ಜೊತೆ ರೊಮ್ಯಾನ್ಸ್ ಮುಂದುವರೆಸಿದ್ದಾರೆ.
ಇನ್‌ಸ್ಟಾಗ್ರಾಂ ನಲ್ಲಿ ತಮ್ಮದೇ ಚಿತ್ರ ಪ್ರಕಟಿಸಿದ ಆತಿಯಾ ಶೆಟ್ಟಿ, 'ಹೂವುಗಳು ನನ್ನನ್ನು ಖುಷಿಪಡಿಸುತ್ತವೆ' ಎಂಬ ಪೋಸ್ಟ್‌ನೊಂದಿಗೆ ಸೂರ್ಯಕಾಂತಿ ಹೂವುಗಳನ್ನು ಹಿಡಿದ ಚಿತ್ರವೊಂದನ್ನು ಹಂಚಿಕೊಂಡಿದ್ದರು.

ಇದಕ್ಕೆ ಕಮೆಂಟ್ ಸೆಕ್ಷನ್‌ನಲ್ಲಿ ಪ್ರತಿಕ್ರಿಯಿಸಿರುವ ಕೆ.ಎಲ್.ರಾಹುಲ್, ಗುಲಾಬಿ ಹೂವೊಂದನ್ನು ಕಳಿಸಿದ್ದಾರೆ. ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಅವರುಗಳ ಈ ಸಾಮಾಜಿಕ ಜಾಲತಾಣ ರೊಮ್ಯಾನ್ಸ್‌ನ ಸ್ಕ್ರೀನ್‌ಶಾಟ್‌ಗಳು ಸಖತ್ ವೈರಲ್ ಆಗಿವೆ.
ಆತಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದಲೂ ಡೇಟಿಂಗ್‌ನಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರ ಮದುವೆಯೂ ಆಗಲಿದೆ ಎನ್ನಲಾಗುತ್ತಿದೆ. ಸುನಿಲ್ ಶೆಟ್ಟಿ ಸಹ ತಮ್ಮ ಮಗಳ ಆಯ್ಕೆ ಬಗ್ಗೆ ಹೆಮ್ಮೆ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications











