ಬಾಲಿವುಡ್ ನಟ ಆಮಿರ್ ಖಾನ್ ಅವರ ಅಳಿಯ ನೂಪುರ್ ಶಿಖಾರೆ ಬಗ್ಗೆ ನಿಮಗೆಷ್ಟು ಗೊತ್ತು?
ಬಾಲಿವುಡ್ ನಟ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ಮದುವೆ ಸಂಭ್ರಮ ನಡೆಯುತ್ತಿದೆ. ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ಮತ್ತು ಫಿಯಾನ್ಸಿ ನೂಪುರ್ ಶಿಖಾರೆ ಅವರನ್ನು ಬುಧವಾರ ವಿವಾಹವಾಗಲಿದ್ದಾರೆ. ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಮದುವೆ ನಿಗದಿಯಾಗಿದೆ.
ಆಮಿರ್ ಖಾನ್ ಅವರ ಭಾವಿ ಅಳಿಯ ಮತ್ತು ಇರಾ ಮದುವೆಯಾಗಲಿರುವ ನೂಪುರ್ ಶಿಖಾರೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಇನ್‌ಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ನೂಪುರ್ ಶಿಖಾರೆ ಬಾಲ್ಯ
ನೂಪುರ್ ಶಿಖಾರೆ ಅಕ್ಟೋಬರ್ 17, 1985 ರಂದು ಪುಣೆಯಲ್ಲಿ ಜನಿಸಿದರು. ನಂತರ ಮುಂಬೈನಲ್ಲಿ ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ನೂಪುರ್ ಶಿಖಾರೆ ಫಿಟ್ನೆಸ್ ಕೋಚ್ ಆಗಿದ್ದಾರೆ. ತಮ್ಮ ಪತ್ನಿಯಾಗಲಿರುವ ಇರಾ ಖಾನ್ ಅವರ ಫಿಟ್ನೆಸ್ ಮಾತ್ರವಲ್ಲದೇ, ನಟ ಆಮಿರ್ ಖಾನ್ ಮತ್ತು ನಟಿ ಸುಶ್ಮಿತಾ ಸೇನ್ ಅವರ ಫಿಟ್ನೆಸ್‌ಗೂ ಇವರೇ ಕಾರಣ ಎನ್ನಲಾಗುತ್ತದೆ.
ನೂಪುರ್ ಶಿಖಾರೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ವರ್ಕೌಟ್ ದಿನಚರಿಯ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ತಮ್ಮ ಫಿಟ್ನೆಸ್ ಫೋಟೋ, ವಿಡಿಯೋಗಳು ಮತ್ತು ದೈನಂದಿನ ವರ್ಕೌಟ್ ವಿಡಿಯೋಗಳ ಮೂಲಕ ತಮ್ಮ ಫಾಲೋವರ್ಸ್ ಅನ್ನು ತಲುಪುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ನೂಪುರ್ ಶಿಖಾರೆ ಅವರು ನೂಪೂರ್ ಪೋಪಿಯೆ ಎಂದು ಹೆಸರಿಟ್ಟುಕೊಂಡಿದ್ದಾರೆ. ಇದೊಂದು ಬೃಹತ್ ಬೈಸೆಪ್ಸ್ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಹೆಸರುವಾಸಿಯಾದ ಜನಪ್ರಿಯ ಕಾರ್ಟೂನ್ ಪಾತ್ರದ ಹೆಸರು.
ನೂಪುರ್ ಶಿಖಾರೆ ಕುಟುಂಬ
ನೂಪುರ್ ಶಿಖಾರೆ ಅವರ ಕುಟುಂಬವೂ ಕೂಡ ಕಲಾವಿದರ ಕುಟುಂಬ. ಅವರ ತಾಯಿ ಪ್ರೀತಮ್ ಶಿಖರೆ ತರಬೇತಿ ಪಡೆದ ಕಥಕ್ ನೃತ್ಯಗಾರ್ತಿ. ಅವರು ಸುಶ್ಮಿತಾ ಸೇನ್ ಅವರ ಮಗಳು ಮತ್ತು ಉದಯೋನ್ಮುಖ ನಟಿ ರೆನೀ ಸೇನ್ ಅವರಿಗೆ ತರಬೇತಿ ನೀಡಿದ್ದಾರೆ.

ಇರಾ ಖಾನ್ ಜೊತೆ ನೂಪುರ್ ಶಿಖಾರೆ ಸಂಬಂಧ
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನೂಪುರ್ ಶಿಖಾರೆ ಆಮಿರ್ ಖಾನ್‌ಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಇರಾ ಖಾನ್ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಾಗ ಇರಾ ಖಾನ್ ಮತ್ತು ನೂಪುರ್ ಶಿಖಾರೆ ಭೇಟಿಯಾಗಿದ್ದರು. ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಪರಸ್ಪರ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿರು. ಈ ಮೂಲಕ ಅವರ ಪ್ರೀತಿ ಶೀಘ್ರದಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಯಿತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನೂಪುರ್ ಇರಾ ಖಾನ್‌ಗೆ ಪ್ರಪೋಸ್ ಮಾಡಿದ್ದರು. ಇಬ್ಬರೂ ತಮ್ಮ ಈ ಸುಂದರ ಕ್ಷಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಅವರು ಎಂಗೇಜ್‌ಮೆಂಟ್ ಪಾರ್ಟಿ ಆಯೋಜಿಸಿದ್ದರು.
ಇರಾ ಖಾನ್ ಜೊತೆ ನೂಪುರ್ ಶಿಖಾರೆ ಮದುವೆ
ನೂಪುರ್ ಶಿಖಾರೆ ಮತ್ತು ಇರಾ ಖಾನ್ ಮದುವೆ ಇಂದು ನಡೆಯುತ್ತಿದೆ. ವಧು ವರರು ಸಾಂಪ್ರದಾಯಿಕ ಉಡುಗೊರೆಗಳನ್ನು ನಿರಾಕರಿಸಿದ್ದಾರೆ. ಇನ್ನೂ ಉಡುಗೊರೆಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವ ಅತಿಥಿಗಳಿಗಾಗಿ, ಇರಾ ಖಾನ್ ತನ್ನ NGO ಅಗಾತ್ಸು ಫೌಂಡೇಶನ್‌ಗೆ ದೇಣಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು, ಮದುವೆಯಲ್ಲಿ ಆಮಿರ್ ಖಾನ್ ಅವರ ಇಬ್ಬರು ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ಭಾಗಿಯಾಗಿದ್ದಾರೆ.


Click it and Unblock the Notifications











