ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ವಿವಾಹೋತ್ಸವ: ನಟಿ, ರಾಜಕಾರಣಿಯ ವಿಭಿನ್ನ ಪ್ರೇಮಕಥೆ!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ರಾಜಕಾರಣಿ ರಾಘವ್ ಚಡ್ಡಾ ಇದೇ ಸೆಪ್ಟೆಂಬರ್ 24 ರಂದು ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಈಗಾಗಲೇ ಮದುವೆ ಸಮಾರಂಭದ ತಯಾರಿ ಅದ್ಧೂರಿಯಾಗಿ ನಡೆದಿದ್ದು, ಇಬ್ಬರ ಕುಟುಂಬಸ್ಥರು ರಾಜಸ್ಥಾನಕ್ಕೆ ತಲುಪಿದ್ದಾರೆ. ಈ ಕ್ಯೂಟ್ ಕಪಲ್‌ನ ಸಕತ್ ಲವ್ ಸ್ಟೋರಿ ಬಗ್ಗೆ ಎಲ್ಲರಿಗೂ ಕುತೂಹಲವಿದ್ದು, ಅದರ ಬಗ್ಎಗ ಮಾಹಿತಿ ಇಲ್ಲಿದೆ.

ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಅನನ್ಯ ಪ್ರೇಮಕಥೆ

ಸಿನಿಮಾ ರಂಗಕ್ಕೂ, ರಾಜಕೀಯಕ್ಕೂ ಬಿಡಿಸಲಾರದ ನಂಟಿದೆ. ಅಲ್ಲಿನವರು ಇಲ್ಲಿ, ಇಲ್ಲಿನವರು ಅಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಕಾಲಿರಿಸುತ್ತಲೇ ಇರುತ್ತಾರೆ. ಸಂಸದ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಖ್ಯಾತಿ ಗಳಿಸಿದ್ದಾರೆ. ಪರಿಣಿತಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಒಂದು ದಶಕದ ವೃತ್ತಿಜೀವನದಲ್ಲಿ ಬಹು ಮೆಚ್ಚುಗೆಯ ಕೆಲಸ ಮಾಡಿದ್ದಾರೆ. ಹಾಗೇಯೇ ಎಂಪಿ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ಭಾಗವಾಗಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ.

Know about Parineeti Chopra-Raghav Chadha unique love story

ಈ ಹಿಂದೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಪರಿಣಿತಿ ಚೋಪ್ರಾ 'ಒಂದು' ಭೇಟಿಯ ಬಗ್ಗೆ ಮಾತನಾಡಿದ್ದರು. ಅದು ರಾಘವ್ ಚಡ್ಡಾ ಬಗ್ಗೆಯೇ. " ನಾನು ಒಬ್ಬ ಅತ್ಯಂತ ಅದ್ಭುತ ವ್ಯಕ್ತಿಯನ್ನು ಭೇಟಿಯಾದೆ. ಅವರ ಶಾಂತಿಯುತ ಶಕ್ತಿ ಎಂಥವರಿಗೂ ಶಾಂತಿ ಮತ್ತು ಸ್ಪೂರ್ತಿದಾಯಕವಾಗಿರುತ್ತದೆ. ಅವರ ಬೆಂಬಲ, ಹಾಸ್ಯ, ಬುದ್ಧಿ ಮತ್ತು ಸ್ನೇಹ ಕಂಡು ಸಂತೋಷವಾಗಿದೆ. ಹಿ ಹಿಸ್ ಮೈ ಹೋಮ್" ಎಂದು ಪರಿಣಿತಿ, ರಾಘವ್ ಚಡ್ಡಾ ಬಗ್ಗೆ ಇರುವ ನಂಬಿಕೆ, ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದರು.

ಪರಿಣಿತಿ ಮತ್ತು ರಾಘವ್ ಚಡ್ಡಾ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ, ಅವರು ಇತ್ತೀಚೆಗೆ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದವರಲ್ಲ. ಹೌದು... ಇವರಿಬ್ಬರು ವರ್ಷಗಳಿಂದ ಪರಸ್ಪರ ಸ್ನೇಹಿತರು ಎಂದು ವರದಿಯಾಗಿದೆ. ಪರಿಣಿತಿ ಮತ್ತು ರಾಘವ್ ಇಬ್ಬರೂ ಯುಕೆಯಲ್ಲಿ ಓದಿದ್ದಾರೆ. ರಾಘವ್ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದರೆ, ಪರಿಣಿತಿಯನ್ನು ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ.

Know about Parineeti Chopra-Raghav Chadha unique love story

ಲವ್ ಸ್ಟೋರಿ ಪ್ರಾರಂಭ

ಪರಿಣಿತಿ ಈ ಹಿಂದೆ ರಾಜಕಾರಣಿಯೊಂದಿಗೆ ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಹಳೆಯ ಸಂದರ್ಶನದಲ್ಲಿ, "ಸಮಸ್ಯೆಯೆಂದರೆ ನಾನು ಯಾವುದೇ ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವಾರು ಉತ್ತಮ ಆಯ್ಕೆಗಳಿವೆ. ಆದರೆ ನಾನು ಯಾವುದೇ ರಾಜಕಾರಣಿಯನ್ನು ಮದುವೆಯಾಗಲು ಇಷ್ಟಪಡುವುದಿಲ್ಲ" ಎಂದು ಹೇಳಿದ್ದರು.

ಆದರೆ, ಸ್ವಲ್ಪ ಸಮಯದವರೆಗೆ ಸ್ನೇಹದಿಂದಿದ್ದ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಪರಸ್ಪರ ಹೆಚ್ಚು ಆತ್ಮೀಯರಾಗತೊಡಗಿದ್ದರು.

ಅವರ ಪ್ರೇಮಕಥೆಯು ಇಮ್ತಿಯಾಜ್ ಅಲಿ ಅವರ 'ಚಮ್ಕಿಲಾ' ಸೆಟ್‌ನಲ್ಲಿ ಪ್ರಾರಂಭವಾಯಿತು ಎಂದು ವರದಿಯಾಗಿದೆ. ಇದರಲ್ಲಿ ನಟ ದಿಲ್ಜಿತ್ ದೋಸಾಂಜ್ ನಟಿಸಿದ್ದಾರೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ನಿಶ್ಚಿತಾರ್ಥ

ಕಳೆದ ಮಾರ್ಚ್ 2023 ರಿಂದ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಹಲವು ಕಡೆ ಈ ಜೋಡಿ ಕಾಣಿಸಿಕೊಂಡಿತ್ತು. ಇದಾದ ನಂತರ, ರಾಘವ್ ಮತ್ತು ಪರಿಣಿತಿ ಮೇ 13 ರಂದು ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು. ನವದೆಹಲಿಯ ಕಪುರ್ತಲಾ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಣಿತಿ ಅವರ ಸೋದರ ಸಂಬಂಧಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಕೂಡ ಹಾಜರಿದ್ದರು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ವಿವಾಹ ಸಂಭ್ರಮ ಈಗಾಗಲೇ ಪ್ರಾರಂಭವಾಗಿದ್ದು, ಉದಯಪುರದಲ್ಲಿ ಮೆಹೆಂದಿ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು ನಡೆದಿದೆ. ಇತರ ಕಾರ್ಯಕ್ರಮಗಳು ಸೆಪ್ಟೆಂಬರ್ 23 ರಂದು ನಡೆಯಲಿದ್ದು, ಸೆಪ್ಟೆಂಬರ್ 24 ರಂದು ವಿವಾಹ ಸಮಾರಂಭ ನಡೆಯಲಿದೆ.

More from Filmibeat

English summary
Parineeti Chopra-Raghav Chadha unique love story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X